ಬಿಗ್ ಬಾಸ್ ಕನ್ನಡ ಸೀಸನ್ 11 (Bigg Boss Kannada 11) ಹನ್ನೆರಡನೇ ವಾರದತ್ತ ದಾಪುಗಾಲಿಡುತ್ತಿದೆ. ಸದ್ಯ ಮನೆಯಲ್ಲಿ 13 ಮಂದಿ ಸದಸ್ಯರಿದ್ದಾರೆ. ಈ ವಾರ ಮನೆಯೊಳಗೆ ಮಹತ್ವದ ಎಲಿಮಿನೇಷನ್ ಪ್ರಕ್ರಿಯೆ ನಡೆಯಲಿದೆ. ಯಾಕೆಂದರೆ ಕಳೆದ ಎರಡು ವಾರಗಳಿಂದ ಸರಿಯಾದ ಎಲಿಮಿನೇಷನ್ ಆಗಿಲ್ಲ. ಒಂಬತ್ತನೇ ವಾರದಲ್ಲಿ ಶೋಭಾ ಶೆಟ್ಟಿ ಸ್ವ-ಇಚ್ಚೆಯಿಂದ ಹೊರಬಂದರು. ಹೀಗಾಗಿ ಕೊನೆಯಲ್ಲಿ ಡೇಂಜರ್ ಝೋನ್ನಲ್ಲಿದ್ದ ಶಿಶಿರ್ ಹಾಗೂ ಐಶ್ವರ್ಯಾ ಸೇವ್ ಆದರು.
ಬಳಿಕ ಕಳೆದ ವಾರ ಚೈತ್ರಾ ಕುಂದಾಪುರ ಹಾಗೂ ಐಶ್ವರ್ಯಾ ಸಿಂಧೋಗಿ ಡೇಂಜರ್ ಝೋನ್ಗೆ ಬಂದರು. ಆದರೆ, ಆ ವಾರ ನೋ ಎಲಿಮಿನೇಷನ್ ವೀಕ್ ಆಗಿತ್ತು. ಇದೀಗ ಈ ವಾರ ಡಬಲ್ ಎಲಿಮಿನೇಷನ್ ಇದೆ ಎಂಬ ಮಾತುಗಳು ಕೇಳಿಬಂದಿದ್ದವು. ಆದರೆ, ಬಿಗ್ ಬಾಸ್ ಈ ಬಗ್ಗೆ ಯಾವುದೇ ಹಿಂಟ್ ಕೊಟ್ಟಿಲ್ಲ. ಕಿಚ್ಚ ಸುದೀಪ್ ಕೂಡ ವಾರದ ಕತೆ ಕಿಚ್ಚನ ಜೊತೆ ಎಪಿಸೋಡ್ನಲ್ಲಿ ಡಬಲ್ ಎಲಿಮಿನೇಷನ್ ಬಗ್ಗೆ ಮಾತಾಡಿಲ್ಲ.
ಇನ್ನು ಈ ವಾರ ಮನೆಯಿಂದ ಹೊರಹೋಗಲು ಎಂಟು ಮಂದಿ ನಾಮಿನೇಟ್ ಆಗಿದ್ದಾರೆ. ಈ ವಾರ 10ನೇ ಸೀಸನ್ ಸ್ಪರ್ಧಿಗಳಿಗೆ ಮನೆಯೊಳಗೆ ಅತಿಥಿಗಳಾಗಿ ಬಂದು ನಾಮಿನೇಷನ್ ಪ್ರಕ್ರಿಯೆಯಲ್ಲಿ ಸ್ಪರ್ಧಿಗಳಿಗೆ ಸಹಾಯ ಮಾಡುವ ಅವಕಾಶ ನೀಡಲಾಗಿತ್ತು. ಡಿ.10ರ ಎಪಿಸೋಡ್ ನಲ್ಲಿ ಮನೆಯೊಳಗೆ ತುಕಾಲಿ ಸಂತು, ವರ್ತೂರು ಸಂತೋಷ್, ತನಿಷಾ, ಡ್ರೋನ್ ಪ್ರತಾಪ್, ನಮ್ರತಾ ಗೌಡ ಮತ್ತು ಕೊನೆಯದಾಗಿ ಕಳೆದ ಸೀಸನ್ ವಿನ್ನರ್ ಕಾರ್ತಿಕ್ ಬಂದಿದ್ದರು.
ಇವರುಗಳ ಫನ್ ಮಾಡುವುದರ ಜೊತೆಗೆ, ಅವರ ನೇತೃತ್ವದಲ್ಲಿ ನಾಮಿನೇಷನ್ ಪ್ರಕ್ರಿಯೆ ನಡೆಯಿತು. ಬಿಗ್ ಬಾಸ್ ಮನೆಯಲ್ಲಿರುವ 11 ಸ್ಪರ್ಧಿಗಳ ಪೈಕಿ ಈ ವಾರ ಬಹುತೇಕ ಘಟಾನುಘಟಿಗಳು ನಾಮಿನೇಟ್ ಆಗಿದ್ದಾರೆ. ತ್ರಿವಿಕ್ರಮ್, ಭವ್ಯಾ ಗೌಡ, ಧನರಾಜ್ ಆಚಾರ್, ಶಿಶಿರ್, ರಜತ್ ಕಿಶನ್, ಹನುಮಂತ ಹಾಗೂ ಚೈತ್ರಾ ನಾಮಿನೇಟ್ ಲಿಸ್ಟ್ನಲ್ಲಿ ಇದ್ದಾರೆ.
ಜೊತೆಗೆ ಕ್ಯಾಪ್ಟನ್ ಗೌತಮಿ ಜಾಧವ್ ನೇರವಾಗಿ ಮೋಕ್ಷಿತಾ ಪೈ ನಾಮಿನೇಟ್ ಆಗಿದ್ದಾರೆ. ಈ 8 ಮಂದಿ ಪೈಕಿ ಒಬ್ಬರು ಈ ವಾರ ಬಿಗ್ ಬಾಸ್ ಮನೆಯಿಂದ ಹೊರಹೋಗುವುದು ಖಚಿತ. ಆದರೆ ಅವರು ಯಾರು ಎಂಬುದನ್ನು ಕಾದು ನೋಡಬೇಕಿದೆ.
BBK 11: ವಾರದ ಕತೆಯಲ್ಲಿ ರಜತ್ರನ್ನು ಜೈಲಿಗೆ ಅಟ್ಟಿದ ಸುದೀಪ್: ಧನುಗೂ ಶಿಕ್ಷೆ ಕೊಟ್ಟ ಕಿಚ್ಚ