ಬಿಗ್ ಬಾಸ್ ಕನ್ನಡ ಸೀಸನ್ 11 (Bigg Boss Kannada 11) ಯಶಸ್ವಿಯಾಗಿ 100ನೇ ದಿನ ಪೂರೈಸಿ ಮುನ್ನುತ್ತಿದೆ. ಫಿನಾಲೆ ವೀಕ್ ಹತ್ತಿರವಾಗುತ್ತಿದ್ದು ಸದ್ಯ ಮನೆಯಲ್ಲಿರುವ ಒಂಬತ್ತು ಸ್ಪರ್ಧಿಗಳಲ್ಲಿ ಯಾರೆಲ್ಲ ಟಾಪ್ 5ಗೆ ಬರಬಹುದು ಎಂಬ ಲೆಕ್ಕಚಾರ ನಡೆಯುತ್ತಿದೆ. ಇದರ ನಡುವೆ ಭಾನುವಾರ ಕಿಚ್ಚ ಸುದೀಪ್ ಸ್ಪರ್ಧಿಗಳಿಗೆ ಎಚ್ಚರಿಕೆ ನೀಡಿದ್ದಾರೆ. ಉಳಿದ ಮೂರು ವಾರಗಳಲ್ಲಿ ಸ್ಪರ್ಧಿಗಳು ಹೇಗೆ ಆಟ ಆಡಬೇಕು ಎಂದು ಹೇಳಿದ್ದಾರೆ.
ಇದರ ಜೊತೆಗೆ ಸುದೀಪ್ ಅವರು ವೇದಿಕೆ ಮೇಲೆ ದೊಡ್ಡ ಅನೌನ್ಸ್ಮೆಂಟ್ ಮಾಡಿದ್ದಾರೆ. ಮುಂದಿನ ವಾರ ನಿಮಗೆಲ್ಲಾ ತುಂಬಾ ಮುಖ್ಯವಾಗಿರೋ ವಾರ. ಗೇಮ್ ಚೇಂಜಿಂಗ್ ವೀಕ್ ಆಗಿದೆ. ಮುಂದಿನ ವಾರ ನಡೆಯುವ ಗೇಮ್ಗಳಲ್ಲಿ ಒಬ್ಬ ವ್ಯಕ್ತಿಗೆ ಟಿಕೆಟ್ ಟು ಫಿನಾಲೆ ಸಿಗುತ್ತೆ ಎಂದು ಹೇಳಿದ್ದಾರೆ.
ಟಿಕೆಟ್ ಟು ಫಿನಾಲೆ ಪಾಸ್ ಅಂದರೆ ಗ್ರ್ಯಾಂಡ್ ಫಿನಾಲೆಗೆ ನೇರವಾಗಿ ಸೆಲೆಕ್ಟ್ ಆಗುತ್ತಾರೆ. ಹೀಗಾಗಿ ಸದ್ಯ ಬಿಗ್ ಬಾಸ್ನಲ್ಲಿ ಅಸಲಿ ಆಟ ಶುರುವಾಗಿದೆ. ಇಷ್ಟು ವಾರದ ಆಟ ಒಂದು ಲೆಕ್ಕಾವಾದರೆ, ಈಗಿನಿಂದ ಒಂದು ಲೆಕ್ಕಾ ಶುರುವಾಗಿದೆ. ತುಂಬಾ ಚೆನ್ನಾಗಿ ಆಡಿ ಕಪ್ ಹೇಗೆ ಗೆಲ್ಲಬೇಕು ಅಂತ ಯೋಚನೆ ಮಾಡಿ ಎಂದು ಸುದೀಪ್ ಕಿವಿಮಾತು ಹೇಳಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಮಾಹಿತಿಯ ಪ್ರಕಾರ, ಈ ಬಾರಿ ರಜತ್, ತ್ರಿವಿಕ್ರಮ್ ಅಥವಾ ಉಗ್ರಂ ಮಂಜು ಟ್ರೋಪಿ ಗೆಲ್ಲಬಹುದು ಎನ್ನುವ ಮಾತುಗಳು ಕೇಳಿಬರುತ್ತಿವೆ. ಹನುಮಂತು ಕೂಡ ಉತ್ತಮ ಆಟ ಆಡುವ ಮೂಲಕ ಪ್ರೇಕ್ಷಕೆ ಮನಸ್ಸನ್ನ ಗೆದ್ದಿದ್ದಾರೆ. ಆದರೆ, ಹನುಮಂತು ಮನೆಯಿಂದ ಆಚೆ ಬರುತ್ತೇನೆ ಎಂದು ಧನರಾಜ್ ಜೊತೆ ಹೇಳಿಕೊಂಡಿರುವ ವಿಡಿಯೋ ವೈರಲ್ ಆಗುತ್ತಿದೆ. ಬಿಗ್ ಬಾಸ್ ಸೀಸನ್ 11ನೇ ಸೀಸನ್ ಫಿನಾಲೆಗೆ ಇನ್ನೂ 3 ವಾರಗಳಷ್ಟೇ ಬಾಕಿಯಿವೆ.
ಖಳನಾಯಕನಾದ ರಜತ್:
ಮನೆಯ ಈ ವಾರದ ಕ್ಯಾಪ್ಟನ್ ಆಗಿರುವ ರಜತ್ ಕಿಶನ್ ಅವರು ಬಿಗ್ ಬಾಸ್ ಆದೇಶದ ಮೇರೆಗೆ ಖಳನಾಯಕರಾಗಿದ್ದಾರೆ. ಬಿಗ್ ಬಾಸ್ ಅವರು ರಜತ್ ಅವರಿಗೆ ಗ್ರ್ಯಾಂಡ್ ಫಿನಾಲೆಗೆ ತಲುಪಲು ಅರ್ಹತೆ ಇಲ್ಲದ ಐವರು ಸ್ಪರ್ಧಿಗಳಿಗೆ ಟಿಕೆಟ್ ಟು ಹೋಮ್ ಫಲಕ ಕೊರಳಿಗೆ ಹಾಕಬೇಕು ಎಂದು ಹೇಳಿದ್ದಾರೆ. ಅದರಂತೆ ರಜತ್ ಅವರು ಸಖತ್ ಖುಷಿಯಲ್ಲಿ ಡ್ಯಾನ್ಸ್ ಮಾಡುತ್ತ ಐವರು ಸ್ಪರ್ಧಿಗಳ ಕೊರಳಿಗೆ ಟಿಕೆಟ್ ಟು ಹೋಮ್ ಫಲಕ ಹಾಕಿದ್ದಾರೆ. ಹನುಮಂತು, ಚೈತ್ರಾ, ಗೌತಮಿ, ಭವ್ಯಗೌಡ ಹಾಗೂ ಮೋಕ್ಷಿತಾ ಅವರ ಕೊರಳಿಗೆ ರಜತ್ ಅವರು ಬೋರ್ಡ್ ಅನ್ನು ನೇತು ಹಾಕಿದ್ದಾರೆ.
BBK 11: ಮನುಷ್ಯತ್ವ ಮರೆತ ಸ್ಪರ್ಧಿಗಳು: ಮಂಜುಗೆ ಥೂ.. ಹೊಗಲ್ಲೇ.. ಎಂದು ಬೈದ ತ್ರಿವಿಕ್ರಮ್