ಬಿಗ್ ಬಾಸ್ ಕನ್ನಡ ಸೀಸನ್ 11 (Bigg Boss Kannada 11) ಹನ್ನೊಂದನೆ ವಾರಕ್ಕೆ ಕಾಲಿಟ್ಟಿದೆ. ಈ ಬಾರಿಯ ಸೀಸನ್ನಲ್ಲಿ ಟಿಆರ್ಪಿ ಬಗ್ಗೆ ಹೊರಗೆ ಹಾಗೂ ಮನೆಯೊಳಗೆ ಸಾಕಷ್ಟು ಮಾತುಕತೆ ಚರ್ಚೆಗಳು ನಡೆದಿವೆ. ಹೊರಗಡೆ ಬಿಗ್ ಬಾಸ್ಗೆ ಭರ್ಜರಿ ಟಿಆರ್ಪಿ ಇದೆ. ಧಾರಾವಾಹಿಗೂ ಇರದಷ್ಟು ಟಿಆರ್ಪಿ ಬಿಗ್ ಬಾಸ್ಗಿದೆ. ಅದರಲ್ಲೂ ವೀಕೆಂಡ್ನಲ್ಲಿ ಕಿಚ್ಚ ಸುದೀಪ್ ಬರುವ ದಿನಕ್ಕೆ ಎರಡಂಕಿ ಟಿಆರ್ಪಿ ದಕ್ಕಿದೆ. ಆದರೆ, ಮನೆಯವರ ಲೆಕ್ಕದಲ್ಲಿ ಟಿಆರ್ಪಿ ಹೇಗಿದೆ?.
ಸೂಪರ್ ಸಂಡೇ ವಿಥ್ ಬಾದ್ ಷಾ ಸುದೀಪ್ ಎಪಿಸೋಡ್ನಲ್ಲಿ ಕಿಚ್ಚ ಮನೆಮಂದಿಗೆ ಒಂದು ಫನ್ ಟಾಸ್ಕ್ ನೀಡಿದ್ದರು. ಅದೇನೆಂದರೆ ಮನೆಯ ಯಾವ ಸ್ಪರ್ಧಿಯಿಂದ ಶೋಗೆ ಎಷ್ಟು ಟಿಆರ್ಪಿ ಬರುತ್ತಿದೆ ಎಂದು ಪಾಯಿಂಟ್ಸ್ ನೀಡಬೇಕಿದೆ. ಆದರೆ, ಈ ಫನ್ ಗೇಮ್ನಲ್ಲಿಯೂ ಸಹ ಕೆಲವು ಸ್ಪರ್ಧಿಗಳು ಸುದೀಪ್ ಎದುರೇ ಜಗಳ ಮಾಡಿಕೊಂಡಿದ್ದಾರೆ. ಕೆಲವರು ಕೆಲವರಿಗೆ ಶಾಕಿಂಗ್ ಸ್ಥಾನ ಕೊಟ್ಟಿದ್ದಾರೆ.
ದೊಡ್ಮನೆಯಲ್ಲಿ ಸಂಬಂಧಗಳಿಗೆ ಬೆಲೆ ಇಲ್ವೇ ಇಲ್ಲ. ಆದರೆ, ಸೀಸನ್-11 ರಲ್ಲಿ ಸಂಬಂಧಗಳಿಗೆ ಹೆಚ್ಚಿನ ಬೆಲೆಯನ್ನ ಸ್ಪರ್ಧಿಗಳೇ ಕೊಟ್ಟಿದ್ದಾರೆ. ಆದರೆ, ಇದು ಮನೆಯೊಳಗೆ ಶಾಶ್ವತ ಅಲ್ಲ ಎಂದು ಸುದೀಪ್ ಎಷ್ಟೇ ಬಾರಿ ಹೇಳಿದರೂ ಸ್ಪರ್ಧಿಗಳು ಮತ್ತದೆ ತಪ್ಪು ಮಾಡುತ್ತಿದ್ದಾರೆ. ಉಗ್ರಂಮಂಜು ಅವರು ಗೌತಮಿ ಅವರನ್ನು ಹೆಚ್ಚಿನ ಸಂದರ್ಭದಲ್ಲಿ ಅವರ ಪರವಾಗಿಯೇ ಮಾತನಾಡುತ್ತಿದ್ದರು. ಆದರೀಗ ಅಸಲಿ ಆಟ ಶುರುವಾದಂತಿದೆ. ಇದಕ್ಕೆ ಕಾರಣವಾಗಿದ್ದು ಇದೇ ಟಿಆರ್ಪಿ ಟಾಸ್ಕ್.
ಯಾರ ಕಡೆಯಿಂದ ಈ ಮನೆಗೆ ಜಾಸ್ತಿ ಕಾಂಟ್ರಿಬ್ಯುಷನ್ ಅನ್ನಿಸುತ್ತೋ ಅವರ ಫೋಟೋವನ್ನ ಇಳಿಮುಖವಾಗಿ ಜೋಡಿಸೋ ಟಾಸ್ಕ್ ನೀಡಲಾಗಿದೆ. ಈ ಆಟದಲ್ಲಿ ಮಂಜು ಅವರು ಗೌತಮಿ ಅವರ ವಿರುದ್ಧ ಮಾತನಾಡಿದ್ದಾರೆ. ಗೌತಮಿಗೆ 5ನೇ ಸ್ಥಾನ ನೀಡಿದ್ದಾರೆ. ಮೋಕ್ಷಿತಾಗೆ 8 ಹಾಗೂ ಹನುಮಂತುಗೆ ಟಾಪ್ 12ನೇ ಸ್ಥಾನದಲ್ಲಿ ಇಡಲಾಗಿದೆ. ಗೌತಮಿ ಅವರದ್ದು ಸೌಂಡ್ ಮಾಡುವಂತದ್ದು ಏನು ಇಲ್ಲ. ಖಾಲಿ ಡಬ್ಬ ಈ ಮನೆಯಲ್ಲಿ ಅಂತ ಮಂಜು ಹೇಳಿದ್ದಾರೆ.
ಹನುಮಂತನ ಬಗ್ಗೆ ಒಂದು ಅಭಿಪ್ರಾಯ ಇದ್ದೇ ಇದೆ. ಹನುಮಂತನಿಗೆ ಎಲ್ಲವೂ ಗೊತ್ತಿದೆ. ಆದರೆ, ಎಲ್ಲವೂ ಗೊತ್ತಿಲ್ಲ. ಈ ರೀತಿಯಲ್ಲಿಯೇ ಹನುಮಂತ ಇದ್ದಾರೆ. ಹಾಗಂತ ರಜತ್ ಹೇಳಿದ್ದಾರೆ. ಅತ್ತ ಗೋಲ್ಡ್ ಸುರೇಶ್ ಅವರು ಮನೆಗೆ ಬಂದು 3 ವಾರ ಕಳೆದರೂ ರಜತ್ ಅಷ್ಟೇನು ಕೊಡುಗೆ ಕೊಟ್ಟಿಲ್ಲ ಎಂದು ಹೇಳಿದ್ದಾರೆ. ಇದಾದ ಮೇಲೆ ರಜತ್, ಫಸ್ಟ್ ಜಗಳ ಆಗಿದ್ದಕ್ಕೆ ಗಾಬರಿ ಬಿದ್ದು ಹೋಗಿ ಡೋರ್ ಬಡೆದವರು ಟಾಸ್ಕ್ ಬಿಟ್ಟು ಮತ್ತೆ ಏನೂ ಕೂಡ ಅವರ ಕೊಡುಗೆ ಕಾಣಿಸಿಲ್ಲ. ಅವರು ಹೆಂಗೇ ಕೊಡುತ್ತಾರೋ ನಾವು ಹಂಗೆ ಕೊಡುತ್ತೇವೆ. ನಾವು ಒಳ್ಳೆಯ ಮನುಷ್ಯರಲ್ಲ, ನಾವು ಕೆಟ್ಟೋರೇ ಎಂದು ಸುರೇಶ್ಗೆ ಟಾಂಗ್ ಕೊಟ್ಟಿದ್ದಾರೆ.
BBK 11: ಬಿಗ್ ಬಾಸ್ ಎಲಿಮಿನೇಷನ್ನಲ್ಲಿ ಡಬಲ್ ಟ್ವಿಸ್ಟ್: ಚೈತ್ರಾ-ಐಶ್ವರ್ಯಾ ಹೋಗಿದ್ದೆಲ್ಲಿಗೆ?