ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ‘ಭಾಗ್ಯಲಕ್ಷ್ಮೀ’ ಧಾರಾವಾಹಿ (Bhagya Lakshmi Serial) ದಿನದಿಂದ ದಿನಕ್ಕೆ ಕುತೂಹಲ ಕೆರಳಿಸುತ್ತಿದೆ. ಟಿಆರ್ಪಿಯಲ್ಲೂ ಭಾಗ್ಯಾಳ ಹೊಸ ಹೆಜ್ಜೆ ಮುಂದೆ ತಂದಿದೆ. ಸದ್ಯ ತನ್ನ ಕುಟುಂಬದಿಂದ ಆಗಿರುವ ತಪ್ಪುಗಳನ್ನೆಲ್ಲ ಸರಿ ಮಾಡಲು ಹೊರಟಿದ್ದಾಳೆ. ಒಂದುಕಡೆ ತಾನು ಅನುಭವಿಸಿದ ಕಷ್ಟವನ್ನು ತಾಂಡವ್ಗೆ ರಿಟರ್ನ್ ಕೊಡುತ್ತಿದ್ದರೆ ಮತ್ತೊಂದೆಡೆ ಮಕ್ಕಳ ಜೀವನವನ್ನು ಸರಿಪಡಿಸಲು ಭಾಗ್ಯ ಕಷ್ಟಪಡುತ್ತಿದ್ದಾಳೆ. ಆದರೆ, ಇದಕ್ಕೂ ತಾಂಡವ್ ಅಡ್ಡಗಾಲು ಹಾಕುತ್ತಿದ್ದಾರೆ.
ಭಾಗ್ಯಾಳ ಮಗಳು ತನ್ವಿ ಕಾಲೇಜಿನಿಂದ ಸಸ್ಪೆಂಡ್ ಆಗಿ ಮನೆಯಲ್ಲಿದ್ದಾಳೆ. ಕೆಲ ದಿನಗಳ ಹಿಂದೆ ತನ್ನನ್ನು ರೇಗಿಸಿದ ಕ್ಲಾಸ್‌ಮೆಟ್‌ಗಳಿಗೆ ತನ್ವಿ ಹಾಕಿ ಸ್ಟಿಕ್‌ನಿಂದ ಹೊಡೆದ ಕಾರಣ ಪ್ರಿನ್ಸಿಪಾಲ್ ಅವಳನ್ನು ಸಸ್ಪೆಂಡ್ ಮಾಡಿದ್ದರು. ಈ ವಿಚಾರ ತಾಂಡವ್ ಕಿವಿಗೂ ಬಿದ್ದಿತ್ತು. ಆದರೆ, ತಾಂಡವ್ ಇದಕ್ಕೆಲ್ಲ ತಲೆಕೆಡಿಸಿಕೊಂಡಿರಲಿಲ್ಲ. ಇದೀಗ ಈ ವಿಚಾರವನ್ನು ಸರಿಪಡಿಸಲು ಭಾಗ್ಯಾ ಮುಂದಾಗಿ ತಾಂಡವ್ನನ್ನು ಕಾಲೇಜಿಗೆ ಹೋಗಿ ಮಾತಾಡೋಣ ಎಂದು ಕರೆದುಕೊಂಡು ಹೋಗಿದ್ದಾಳೆ.
ಆರಂಭದಲ್ಲಿ ಇದಕ್ಕೆ ತಾಂಡವ್ ಒಪ್ಪಿರಲಿಲ್ಲ. ನಾನು ಎಲ್ಲೂ ಹೋಗಲ್ಲ, ನಾನು ಎಲ್ಲಿಗೂ ಬರಲ್ಲ ಎಂದು ಹೇಳಿದ್ದಾನೆ. ಆಗ ನಾನು ಬರಲ್ಲ ಎಂದಿದ್ದಕ್ಕೆ ತಾಂಡವ್ನ ಕೈ ಹಿಡಿದು ಬಿಡುವವರು ಯಾರು?, ನಾವಿಬ್ರೂ ಹೋಗ್ಲೆಬೇಕು ಎಂದು ಭಾಗ್ಯಾ ಎಳೆದುಕೊಂಡು ಹೋಗಿದ್ದಾಳೆ. ಆದರೆ, ಇಲ್ಲೂ ತಾಂಡವ್ ನಡೆ ಹದ್ದು ಮೀರಿದೆ. ಪ್ರಿನ್ಸಿಪಾಲ್ಗೆನೇ ಬೈದಿದ್ದಾನೆ ತಾಂಡವ್.
ಇವತ್ತು ನಾವು ನಿನ್ನನ್ನ ಕಾಲೇಜಿಗೆ ವಾಪಾಸ್ ಸೇರ್ಸಿಯೇ ಇಲ್ಲಿಂದ ಹೋಗೋದು ಎಂದು ಭಾಗ್ಯ ತನ್ವಿ ಬಳಿ ಹೇಳಿದ್ದಾಳೆ. ಅದರಂತೆ ಮೂರೂ ಜನ ಪ್ರಿನ್ಸಿಪಾಲ್ ಭೇಟಿ ಆಗಲು ತೆರಳಿದ್ದಾರೆ. ಆದರೆ, ಪ್ರಿನ್ಸಿಪಾಲ್ ಚೇಂಬರ್ನಲ್ಲಿ ಅವಘಡ ಸಂಭವಿಸಿದೆ. ಪ್ರಿನ್ಸಿಪಾಲ್ ಜೊತೆ ಮಾತನಾಡುತ್ತಿರುವ ಸಂದರ್ಭ ತಾಂಡವ್ಗೆ ಪದೇ ಪದೇ ಶ್ರೇಷ್ಠಾಳ ಕಾಲ್ ಬಂದಿದೆ. ತಾಂಡವ್ ಫೋನನ್ನು ಸೈಲೆಂಟ್ ಮೋಡ್ನಲ್ಲಿ ಕೂಡ ಇಟ್ಟಿರಲಿಲ್ಲ.
ಪದೇ ಪದೇ ರಿಂಗ್ ಆಗುವುದನ್ನು ಕಂಡು ಪ್ರಿನ್ಸಿಪಾಲ್ ಅವರು ತಾಂಡವ್ ಬಳಿ, ಫೋನ್ನ ಸೈಲೆಂಟ್ ಮೋಡ್ನಲ್ಲಿ ಇಟ್ಟಿರಬೇಕು ಎಂಬ ಕಾಮನ್ಸೆನ್ಸ್ ಇಲ್ವೇನ್ರೀ ನಿಮ್ಗೆ ಎಂದು ಹೇಳಿದ್ದಾರೆ. ಇದರಿಂದ ಕೆರಳಿದ ತಾಂಡವ್, ನೀವು ಪ್ರಿನ್ಸಿಪಾಲ್ ಆಗಿರೋದು ನನ್ನ ಮಗಳಿಗೆ ನನ್ಗೆ ಅಲ್ಲ, ನಿಮ್ಮ ಕೆಲ್ಸ ಎಷ್ಟಿದೆ ಅಷ್ಟು ನೋಡ್ಕೊಳಿ ಎಂದು ಹೇಳಿದ್ದಾನೆ. ಇದರಿಂದ ಪ್ರಿನ್ಸಿಪಾಲ್ಗೂ ಕೋಪ ಬಂದಿದೆ. ಸದ್ಯ ಈ ಘಟನೆಯಿಂದ ತನ್ವಿಗೆ ಸಸ್ಪೆಂಡ್ ವಾಪಾಸ್ ತೆಗೆದುಕೊಳ್ಳುವುದು ಅನುಮಾನ ಎಂಬಂತೆ ಕಾಣುತ್ತಿದೆ. ಅತ್ತ ಭಾಗ್ಯಾಳ ಶ್ರಮ ನೀರಲಿಲ್ಲ ಹೋಮ ಮಾಡಿದಂತಾಗುತ್ತಾ ಎಂಬುದು ಇಂದಿನ ಸಂಚಿಕೆಯಲ್ಲಿ ತಿಳಿದುಬರಲಿದೆ.
BBK 11: ಒಬ್ಬಂಟಿಯಾಗಿ ಬಾತ್ ರೂಮ್ ಏರಿಯಾ ಕ್ಲೀನ್ ಮಾಡಿದ ಚೈತ್ರಾ: ಅತಿಥಿಗಳು ಕೊಟ್ಟ ಟಾಸ್ಕ್ ಕಂಪ್ಲೀಟ್