Sunday, 29th December 2024

Bhagya Lakshmi Serial:ಟ್ವಿಸ್ಟ್ ಮೇಲೆ ಟ್ವಿಸ್ಟ್: ಶ್ರೇಷ್ಠಾಳನ್ನು ಮನೆಗೆ ಕರೆದುಕೊಂಡ ಬಂದ ತಾಂಡವ್: ಸ್ವಾಗತ ಮಾಡಿದ ಭಾಗ್ಯ

ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ‘ಭಾಗ್ಯಲಕ್ಷ್ಮೀ’ ಧಾರಾವಾಹಿ (Bhagya Lakshmi Serial) ದಿನದಿಂದ ದಿನಕ್ಕೆ ರೋಚಕತೆ ಸೃಷ್ಟಿಸುತ್ತಿದೆ. ಟ್ವಿಸ್ಟ್ ಮೇಲೆ ಟ್ವಿಸ್ಟ್ ಕೊಟ್ಟು ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುವಲ್ಲಿ ಈ ಧಾರಾವಾಹಿ ಯಶಸ್ವಿಯಾಗುತ್ತಿದೆ. ಸದ್ಯ ಹೊಸ ವಿಚಾರ ಎನಂದ್ರೆ, ಶ್ರೇಷ್ಠಾಳನ್ನು ತಾಂಡವ್ ತನ್ನ ಮನೆಗೆ ಕರೆದುಕೊಂಡು ಬಂದಿದ್ದಾನೆ. ಇದರಲ್ಲಿ ಟ್ವಿಸ್ಟ್ ಏನಂದ್ರೆ ಸ್ವತಃ ಭಾಗ್ಯಾಳೇ ಆರತಿ ಎತ್ತಿ ಶ್ರೇಷ್ಠಾಳನ್ನು ಮನೆಯೊಳಗೆ ಸ್ವೀಕರಿಸಿದ್ದಾಳೆ. ಇದು ಧಾರಾವಾಹಿಯ ಮಹಾತಿರುವು ಎನ್ನಲಾಗುತ್ತಿದೆ.

ಕಾಲೇಜಿನಿಂದ ಸಸ್ಪೆಂಡ್ ಆಗಿದ್ದ ಮಗಳು ತಾನ್ವಿಯನ್ನು ಪುನಃ ಕಾಲೇಜಿಗೆ ಸೇರಿಸಬೇಕು ಎಂದು ಭಾಗ್ಯಾ ತಾಂಡವ್​ನನ್ನು ಕಾಲೇಜಿಗೆ ಹೋಗಿ ಮಾತಾಡೋಣ ಎಂದು ಕರೆದುಕೊಂಡು ಹೋಗಿದ್ದಾಳೆ. ಆರಂಭದಲ್ಲಿ ಇದಕ್ಕೆ ತಾಂಡವ್ ಒಪ್ಪಿರಲಿಲ್ಲ. ನಾನು ಎಲ್ಲೂ ಹೋಗಲ್ಲ, ನಾನು ಎಲ್ಲಿಗೂ ಬರಲ್ಲ ಎಂದು ಹೇಳಿದ್ದಾನೆ. ಬಳಿಕ ನಾವಿಬ್ರೂ ಹೋಗ್ಲೆಬೇಕು ಎಂದು ಭಾಗ್ಯಾ ಎಳೆದುಕೊಂಡು ಹೋಗಿದ್ದಾಳೆ.

ಅದರಂತೆ ಮೂರೂ ಜನ ಪ್ರಿನ್ಸಿಪಾಲ್ ಭೇಟಿ ಆಗಲು ತೆರಳಿದ್ದಾರೆ. ಪ್ರಿನ್ಸಿಪಾಲ್ ಜೊತೆ ಮಾತನಾಡುತ್ತಿರುವಾಗ ತಾಂಡವ್​ಗೆ ಅನೇಕ ಬಾರಿ ಶ್ರೇಷ್ಠಾಳ ಕಾಲ್ ಬರುತ್ತೆ. ಕಾಲ್ ರಿಸೀವ್ ಮಾಡದಾಗ ಗೆ ಒಂದು ಮೆಸೇಜ್ ಬರುತ್ತದೆ. ‘‘ಇದು ನಿನ್ಗೆ ನನ್ ಕಡೆಯಿಂದ ಬರೋ ಕೊನೇ ಮೆಸೇಜ್. ಇವತ್ತು ನಾನು ನಿನ್ ಹೆಸರು ಬರೆದಿಟ್ಟು ಸೂಸೈಡ್ ಮಾಡಿಕೊಳ್ತಾ ಇದ್ದೇನೆ’’ ಎಂದು ಶ್ರೇಷ್ಠಾ ಮೆಸೇಜ್ ಬರುತ್ತದೆ. ಇದರಿಂದ ಗಾಬರಿಗೊಂಡ ತಾಂಡವ್ ಪ್ರಿನ್ಸಿಪಾಲ್ ಚೇಂಬರ್​ನಿಂದ ಶ್ರೇಷ್ಠಾ ಮನೆ ಕಡೆಗೆ ಹೋಗುತ್ತಾನೆ.

ದಾರಿಯಲ್ಲಿ ಹೋಗುತ್ತಿರುವಾಗ ಮತ್ತೊಂದು ಮೆಸೇಜ್ ಬರುತ್ತದೆ. ‘‘ಸೂಸೈಡ್ ಮಾಡಿಕೊಳ್ತಾ ಇದ್ದೇನೆ, ಇದಕ್ಕೆಲ್ಲ ಕಾರಣ ನೀನೆ, ಇಂತಿ ಶ್ರೇಷ್ಠಾ’’ ಎಂಬ ಸಂದೇಶ ಇರುತ್ತದೆ. ಅತ್ತ ಶ್ರೇಷ್ಠಾ ಆತ್ಮಹತ್ಯೆ ಮಾಡಿಕೊಳ್ಳಲು ಬಿಲ್ಡಿಂಗ್ ಮೇಲೆ ನಿಂತಿರುತ್ತಾಳೆ. ಶ್ರೇಷ್ಠಾ ಕಾಲ್ ಮಾಡಿ ನೀನು ಈಗಲೇ ನಾನು ಕಳುಹಿಸಿದ ಲೊಕೇಷನ್​ಗೆ ಬರಬೇಕು ಇಲ್ಲಾಂದ್ರೆ ಇಲ್ಲಿಂದ ಬಿದ್ದು ಸತ್ತೋಗ್ತೀನಿ ಎಂದು ಹೆದರಿಸುತ್ತಾಳೆ. ಅದರಂತೆ ತಾಂಡವ್ ಆ ಲೊಕೇಷನ್​ಗೆ ಹೋದಾಗ ಬಿಲ್ಡಿಂಗ್ ಮೇಲೆ ಶ್ರೇಷ್ಠಾ ನಿಂತಿರುವುದನ್ನು ಕಂಡು ಗಾಬರಿಗೊಳ್ಳುತ್ತಾನೆ.

ಶ್ರೇಷ್ಠಾಳನ್ನು ಕನ್ವೆನ್ಸ್ ಮಾಡಲು, ನಿನ್ನ ಹೇಗಾದರು ಮಾಡಿ ನಾನು ನಮ್ಮ ಮನೆಗೆ ಕರೆದುಕೊಂಡು ಹೋಗುತ್ತೇನೆ ಎಂದು ತಾಂಡವ್ ಮಾತು ಕೊಡುತ್ತಾನೆ. ಇದಕ್ಕೆ ಒಪ್ಪಿದ ಶ್ರೇಷ್ಠಾ ಕೆಳಗೆ ಬಂದು ತಾಂಡವ್ ಜೊತೆ ಕಾರಿನಲ್ಲಿ ಕುಳಿತುಕೊಳ್ಳುತ್ತಾಳೆ. ಅತ್ತ ಭಾಗ್ಯ ಅದು ಹೇಗೆ ಶ್ರೇಷ್ಠಾಳನ್ನು ಮನೆಗೆ ಕರ್ಕೊಂಡು ಬರ್ತಾರೆ ಅಂತ ನಾನು ನೋಡ್ತೀನಿ ಎಂದು ಹೇಳುತ್ತಾಳೆ. ಆದರೆ, ನಂತರ ನಡೆದಿದ್ದು ಅಚ್ಚರಿ.

ಹೇಳಿದಂತೆ ತಾಂಡವ್, ಶ್ರೇಷ್ಠಾಳನ್ನು ಮನೆಗೆ ಕರ್ಕೊಂಡು ಬರುತ್ತಾನೆ. ಆದರೆ, ಆರಂಭದಲ್ಲಿ ಸವಾಲು ಹಾಕಿದ್ದ ಭಾಗ್ಯ, ಶ್ರೇಷ್ಠಾ-ತಾಂಡವ್ ಮನೆಯೊಳಗೆ ಕಾಲಿಡುವ ಮುನ್ನ ಆರತಿಯೊಂದಿಗೆ ಬರಮಾಡಿಕೊಳ್ಳಲು ಮುಂದಾಗುತ್ತಾಳೆ. ಅರೇ.. ಇದು ಹೇಗಾಯಿತು?, ಮನೆಯೊಳಗೆ ಏನು ಮಾತುಕತೆ ನಡೆಯಿತು?, ಭಾಗ್ಯಾಳ ಈ ಹೊಸ ಪ್ಲಾನ್ ಏನು? ಎಂಬುದು ಇಂದಿನ ಸಂಚಿಕೆಯಲ್ಲಿ ತಿಳಿದುಬರಲಿದೆ.

BBK 11: ಬಿಗ್ ಬಾಸ್ ಮನೆಯಿಂದ ಇಂದೇ ಎಲಿಮಿನೇಟ್ ಆಗ್ತಾರ ಓರ್ವ ಸ್ಪರ್ಧಿ?