Saturday, 4th January 2025

Bhagya Lakshmi Serial: ರಿವೀಲ್ ಆಯಿತು ಕುಸುಮಾ-ಭಾಗ್ಯಾಳ ಮಾಸ್ಟರ್ ಪ್ಲ್ಯಾನ್: ಪರದಾಡಿದ ಶ್ರೇಷ್ಠಾ

Bhagya Lakshmi Serial (4)

ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ‘ಭಾಗ್ಯಲಕ್ಷ್ಮೀ’ ಧಾರಾವಾಹಿಗೆ (Bhagya Lakshmi Serial) ಜನರಿಂದ ಉತ್ತಮ ಪ್ರತಿಕ್ರಿಯೆ ಕೇಳಿಬರುತ್ತದೆ. ಭಾಗ್ಯಾಳ ಹೊಸ ಅಧ್ಯಾಯ ಅದ್ಭುತವಾಗಿ ಮೂಡಿಬರುತ್ತದೆ. ಟಿಆರ್​ಪಿಯಲ್ಲಿ ಕೂಡ ಉತ್ತಮ ರೇಟಿಂಗ್ ಪಡೆದುಕೊಂದೆ. ಸದ್ಯ ಶ್ರೇಷ್ಠಾಳನ್ನು ತಾಂಡವ್ ತನ್ನ ಮನೆಗೆ ಕರೆದುಕೊಂಡು ಬಂದಿದ್ದು, ಎಲ್ಲರ ಜೊತೆ ಇದ್ದಾಳೆ. ಭಾಗ್ಯಾ ಹಾಗೂ ತಾಂಡವ್ ಅಮ್ಮ ಕುಸುಮಾ ಶ್ರೇಷ್ಠಾಳನ್ನು ಆರತಿ ಎತ್ತಿ ಮನೆಯೊಳಗೆ ಕರೆಸಿಕೊಂಡಿದ್ದರು.

ಮನೆಗೆ ಹೋದರೆ ಕುಸುಮಾ, ಭಾಗ್ಯಾ ಏನು ಮಾಡುತ್ತಾರೋ, ನನ್ನನ್ನು ಮತ್ತೆ ಮನೆಯಿಂದ ಹೊರ ಹಾಕಬಹುದು ಎಂಬ ಭಯದಿಂದಲೇ ಶ್ರೇಷ್ಠಾ, ಮನೆಗೆ ಬರುತ್ತಾಳೆ. ಆದರೆ ಅಲ್ಲಿ ನೋಡಿದರೆ ಯಾರೂ ಊಹಿಸಲಾಗದಂತೆ ಶ್ರೇಷ್ಠಾ ಹಾಗೂ ತಾಂಡವ್‌ ಇಬ್ಬರನ್ನೂ ಆರತಿ ಮಾಡಿ ಮನೆ ಒಳಗೆ ಬರಮಾಡಿಕೊಳ್ಳಲಾಗುತ್ತದೆ.

ಶ್ರೇಷ್ಠಾ-ತಾಂಡವ್‌ ಖುಷಿಯಾಗಿ ಮನೆ ಒಳಗೆ ಬರುತ್ತಾರೆ. ಆದರೆ, ಕುಸುಮಾ ಮಾತು ಕೇಳಿ ಎಲ್ಲರೂ ಶಾಕ್‌ ಆಗುತ್ತಾರೆ. ಭಾಗ್ಯಾ ಹಾಗೂ ಕುಸುಮಾ ಬಿಟ್ಟು ಉಳಿದ ಎಲ್ಲ ಮನೆಯ ಸದಸ್ಯರು ಇವರು ಆಗಮನದಿಂದ ಕೋಪಗೊಂಡಿದ್ದರು. ಇವರ ಪ್ಲ್ಯಾನ್ ಏನು ಎಂಬುದು ಯಾರಿಗೂ ಅರ್ಥವಾಗುತ್ತಿರಲಿಲ್ಲ. ಎಲ್ಲರೂ ಒಟ್ಟಿಗೆ ಕೂತು ಊಟ ಮಾಡುವಾಗ ಕುಸುಮಾ, ನನ್ ಮಗ ನಿನ್ನ ಮನಸಾರೆ ಇಷ್ಟಪಟ್ಟಿದ್ದಾರೆ, ಮಗ ಇಷ್ಟಪಟ್ಟಿದ್ದನ್ನ ನಾನು ನೆರವೇರಿಸದಿದ್ರೆ ಒಳ್ಳೆ ತಾಯಿ ಆಗ್ತೀನಾ.. ಇನ್ಮೇಲೆ ನೀನು ಈ ಮನೆ ಮೆಚ್ಚಿದ ಸೊಸೆ.. ನಾಳೆಯಿಂದ ಶ್ರೇಷ್ಠಾ ಈ ಮನೆಯ ಸೊಸೆ, ಭಾಗ್ಯ ಈ ಮನೆಯ ಅತಿಥಿ ಆಗ್ತಾಳೆ ಎಂದು ಶಾಕ್ ಕೊಟ್ಟಿದ್ದಳು ಕುಸುಮಾ.

ಅದರಂತೆ ಮರುದಿನ ಇವರಿಬ್ಬರ ಪ್ಲ್ಯಾನ್ ರಿವೀಲ್ ಆಗಿದೆ. ಸದಾ ಆರಾಮವಾಗಿ ಇರುತ್ತಿದ್ದ ಶ್ರೇಷ್ಠಾಳಿಗೆ ಸೊಸೆಯಾದವಳ ಜವಾಬ್ದಾರಿ ಹೇಗೆ ಇರುತ್ತದೆ ಎಂದು ತೋರಿಸಲು ಭಾಗ್ಯಾ ಹಾಗೂ ಕುಸುಮಾ ಮುಂದಾಗಿದ್ದಾರೆ. ಬೆಳಗ್ಗೆ ಎದ್ದ ತಕ್ಷಣ ಭಾಗ್ಯಾಳ ಬಳಿ ಬಂದು ಮಾವನಿಗೆ ಕಾಫಿ ಬೇಕಂತೆ ತಂದುಕೊಡು ಎಂದು ಶ್ರೇಷ್ಠಾ ಹೇಳುತ್ತಾಳೆ. ಅದಕ್ಕೆ ಭಾಗ್ಯ ಹಾಗಿದ್ರೆ ಮಾಡಿಕೊಡು ಎಂದು ಹೇಳಿದ್ದಾಳೆ. ಆಗ ಸಿಟ್ಟಿಗೆದ್ದ ಶ್ರೇಷ್ಠಾ, ಹೇ.. ಭಾಗ್ಯಾ ಯಾಕೆ ದೌಲತ್ತಲ್ಲಿ ಮಾತಾಡ್ತಾ ಇದ್ದೀಯಾ?, ಹೋಗಿ ಕಾಫಿ ಮಾಡ್ಕೊಂಡು ಬಾ ಎಂದು ಹೇಳುತ್ತಾಳೆ.

ಆಗ ಭಾಗ್ಯಾ, ಶ್ರೇಷ್ಠಾಳ ಕೈ ಹಿಡಿದುಕೊಂಡು ಅಡುಗೆ ಮನೆಗೆ ಕರೆದುಕೊಂಡು ಹೋಗುತ್ತಾಳೆ. ಆಗ ಶ್ರೇಷ್ಠಾ ನಾನು ನಿನಗೆ ಕಾಫಿ ಮಾಡಿಕೊಡು ಅಂತ ಹೇಳಿದ್ದು ಅಂತಾಳೆ. ಅದಕ್ಕೆ ಭಾಗ್ಯಾ, ಅದು ಹೇಗೆ ಆಗುತ್ತೆ, ಇದು ನಿನ್ನ ಅಡುಗೆ ಮನೆ, ಇನ್ಮೇಲೆ ಅಡುಗೆ ನೀನೇ ಮಾಡಬೇಕು ಎಂದು ಹೇಳುತ್ತಾಳೆ. ಅತ್ತ ಕುಸುಮಾ, ನನ್ನ ಸೊಸೆಗೆ ಎಲ್ಲ ಕೆಲಸ ಬರುತ್ತೆ, ಅವಳು ಮಾಡ್ತಾಳೆ ಎಂದು ಹೇಳುತ್ತಾಳೆ.

ಆಗ ಭಾಗ್ಯಾಗೆ ಒಂದು ಫೋನ್ ಬರುತ್ತೆ, ಫೋನ್​ನಲ್ಲಿ ನಮ್ಮ ಮನೆ ಕೆಲಸ ಮಾಡಿಕೊಡೋದಕ್ಕೆ ಒಬ್ರು ಬಂದಿದ್ದಾರೆ, ನನ್ಗೆ ಕಷ್ಟ ಆಗಬಾರದು ಅಂತ ನಮ್ಮ ಯಜಮಾನ್ರು ಒಬ್ಳು ಕೆಲಸದವಳನ್ನ ಕರ್ಕೊಂಡು ಬಂದಿದ್ದಾರೆ ಎಂದು ಹೇಳುತ್ತಾಳೆ. ಹೀಗೆ ಶ್ರೇಷ್ಠಾಳನ್ನ ಸರಿಯಾಗಿ ಬೆಂಡೆತ್ತಲು ಅತ್ತೆ-ಸೊಸೆ ಸಖತ್ ಪ್ಲ್ಯಾನ್ ಮಾಡಿದ್ದಾರೆ. ಇದನ್ನು ಕಂಡು ಮನೆಯವರು ಕೂಡ ಖುಷಿ ಆಗಿದ್ದಾರೆ.

BBK 11: ಸದ್ಯಕ್ಕಿಲ್ಲ ಬಿಗ್ ಬಾಸ್ ಫಿನಾಲೆ: ವೀಕ್ಷಕರಿಗೆ ಸಿಕ್ಕತು ಭರ್ಜರಿ ಗುಡ್ ನ್ಯೂಸ್