Saturday, 4th January 2025

Bhagya Lakshmi Serial: ಕೂತ್ಕೊಂಡ್ರೂ ಕೆಲಸ.. ನಿಂತ್ಕೊಂಡ್ರೂ ಕೆಲಸ..: ಮನೆಬಿಟ್ಟೇ ಓಡಿ ಹೋಗ್ತಾಳ ಶ್ರೇಷ್ಠಾ?

Bhagya Lakshmi Serial (5)

ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ‘ಭಾಗ್ಯಲಕ್ಷ್ಮೀ’ ಧಾರಾವಾಹಿಗೆ (Bhagya Lakshmi Serial) ಜನರಿಂದ ಉತ್ತಮ ಪ್ರತಿಕ್ರಿಯೆ ಕೇಳಿಬರುತ್ತದೆ. ಭಾಗ್ಯಾಳ ಹೊಸ ಅಧ್ಯಾಯ ಅದ್ಭುತವಾಗಿ ಮೂಡಿಬರುತ್ತದೆ. ಟಿಆರ್​ಪಿಯಲ್ಲಿ ಕೂಡ ಉತ್ತಮ ರೇಟಿಂಗ್ ಪಡೆದುಕೊಂದೆ. ಸದ್ಯ ಶ್ರೇಷ್ಠಾಳನ್ನು ತಾಂಡವ್ ತನ್ನ ಮನೆಗೆ ಕರೆದುಕೊಂಡು ಬಂದಿದ್ದು, ಎಲ್ಲರ ಜೊತೆ ಇದ್ದಾಳೆ. ಮೊದಲ ದಿನ ಖುಷಿ ಖುಷಿಯಿಂದ ಇಂದ ಶ್ರೇಷ್ಠಾಗೆ ಈಗ ಭಗ್ಯಾ ಹಾಗೂ ತಾಂಡವ್ ಅಮ್ಮ ಕುಸುಮಾ ಬೆವರಿಳಿಸುತ್ತಿದ್ದಾರೆ.

ಭಾಗ್ಯಾ ಹಾಗೂ ಕುಸುಮಾ ಬಿಟ್ಟು ಉಳಿದ ಎಲ್ಲ ಮನೆಯ ಸದಸ್ಯರು ಇವರು ಆಗಮನದಿಂದ ಕೋಪಗೊಂಡಿದ್ದರು. ಇವರ ಪ್ಲ್ಯಾನ್ ಏನು ಎಂಬುದು ಯಾರಿಗೂ ಅರ್ಥವಾಗುತ್ತಿರಲಿಲ್ಲ. ಎಲ್ಲರೂ ಒಟ್ಟಿಗೆ ಕೂತು ಊಟ ಮಾಡುವಾಗ ಕುಸುಮಾ, ನನ್ ಮಗ ನಿನ್ನ ಮನಸಾರೆ ಇಷ್ಟಪಟ್ಟಿದ್ದಾರೆ, ಮಗ ಇಷ್ಟಪಟ್ಟಿದ್ದನ್ನ ನಾನು ನೆರವೇರಿಸದಿದ್ರೆ ಒಳ್ಳೆ ತಾಯಿ ಆಗ್ತೀನಾ.. ಇನ್ಮೇಲೆ ನೀನು ಈ ಮನೆ ಮೆಚ್ಚಿದ ಸೊಸೆ.. ನಾಳೆಯಿಂದ ಶ್ರೇಷ್ಠಾ ಈ ಮನೆಯ ಸೊಸೆ, ಭಾಗ್ಯ ಈ ಮನೆಯ ಅತಿಥಿ ಆಗ್ತಾಳೆ ಎಂದು ಶಾಕ್ ಕೊಟ್ಟಿದ್ದಳು ಕುಸುಮಾ.

ಅದರಂತೆ ಮರುದಿನ ಇವರಿಬ್ಬರ ಪ್ಲ್ಯಾನ್ ರಿವೀಲ್ ಆಗಿದೆ. ಸದಾ ಆರಾಮವಾಗಿ ಇರುತ್ತಿದ್ದ ಶ್ರೇಷ್ಠಾಳಿಗೆ ಸೊಸೆಯಾದವಳ ಜವಾಬ್ದಾರಿ ಹೇಗೆ ಇರುತ್ತದೆ ಎಂದು ತೋರಿಸಲು ಭಾಗ್ಯಾ ಹಾಗೂ ಕುಸುಮಾ ಮುಂದಾಗಿದ್ದಾರೆ. ಒಂದು ನಿಮಿಷ ಕೂಡ ಕುಳಿತುಕೊಳ್ಳಲು ಬಿಡದೆ ಕೆಲಸ ನೀಡುತ್ತಿದ್ದಾರೆ. ಇದನ್ನೆಲ್ಲ ಮಾಡಲಾಗದೆ ಮನೆ ಬಿಟ್ಟೇ ಶ್ರೇಷ್ಠಾ ಓಡಿ ಹೋಗುತ್ತಾಳ ಎಂಬುದು ನೋಡಬೇಕಿದೆ.

ಬೆಳಗ್ಗೆ ಎದ್ದ ತಕ್ಷಣ ಭಾಗ್ಯಾಳ ಬಳಿ ಬಂದು ಮಾವನಿಗೆ ಕಾಫಿ ಬೇಕಂತೆ ತಂದುಕೊಡು ಎಂದು ಶ್ರೇಷ್ಠಾ ಹೇಳುತ್ತಾಳೆ. ಅದಕ್ಕೆ ಭಾಗ್ಯ ಹಾಗಿದ್ರೆ ಮಾಡಿಕೊಡು ಎಂದು ಹೇಳಿದ್ದಾಳೆ. ಆಗ ಸಿಟ್ಟಿಗೆದ್ದ ಶ್ರೇಷ್ಠಾ, ಹೇ.. ಭಾಗ್ಯಾ ಯಾಕೆ ದೌಲತ್ತಲ್ಲಿ ಮಾತಾಡ್ತಾ ಇದ್ದೀಯಾ?, ಹೋಗಿ ಕಾಫಿ ಮಾಡ್ಕೊಂಡು ಬಾ ಎಂದು ಹೇಳುತ್ತಾಳೆ.

ಆಗ ಭಾಗ್ಯಾ, ಶ್ರೇಷ್ಠಾಳ ಕೈ ಹಿಡಿದುಕೊಂಡು ಅಡುಗೆ ಮನೆಗೆ ಕರೆದುಕೊಂಡು ಹೋಗುತ್ತಾಳೆ. ಆಗ ಶ್ರೇಷ್ಠಾ ನಾನು ನಿನಗೆ ಕಾಫಿ ಮಾಡಿಕೊಡು ಅಂತ ಹೇಳಿದ್ದು ಅಂತಾಳೆ. ಅದಕ್ಕೆ ಭಾಗ್ಯಾ, ಅದು ಹೇಗೆ ಆಗುತ್ತೆ, ಇದು ನಿನ್ನ ಅಡುಗೆ ಮನೆ, ಇನ್ಮೇಲೆ ಅಡುಗೆ ನೀನೇ ಮಾಡಬೇಕು ಎಂದು ಹೇಳುತ್ತಾಳೆ. ಅತ್ತ ಕುಸುಮಾ, ನನ್ನ ಸೊಸೆಗೆ ಎಲ್ಲ ಕೆಲಸ ಬರುತ್ತೆ, ಅವಳು ಮಾಡ್ತಾಳೆ ಎಂದು ಹೇಳುತ್ತಾಳೆ.

ಅದರಂತೆ ಶ್ರೇಷ್ಠಾ ಒಂದಿಷ್ಟು ಕೆಲಸ ಮಾಡಿ ಸುಸ್ತಾದಾಗ ಸೋಫಾ ಮೇಲೆ ಕುಳಿತುಕೊಳ್ಳಲು ಮುಂದಾಗುತ್ತಾಳೆ. ಆಗ ಕುಸುಮಾ, ಶ್ರೇಷ್ಠಾ ಏನು ಕುಳಿತುಕೊಂಡು ಬಿಟ್ಟೆ ಎಂದು ಕೇಳಿದ್ದಾಳೆ. ಅದಕ್ಕೆ ಅತ್ತೆ ಕೆಲಸ ಮುಗೀತಲ್ಲ ಸುಸ್ತಾಯಿತು ಹಾಗೆ ಕೂತ್ಕೊಂಡೆ ಎಂದಿದ್ದಾಳೆ. ಇದನ್ನು ಕೇಳಿ, ಏನು ಕೆಲ್ಸ ಮುಗೀತಾ.. ಈಗ ಶುರುವಾಗಿದೆ.. ಈ ಲೋಟವನ್ನೆಲ್ಲ ಸಿಂಕ್​ನಲ್ಲಿಟ್ಟು ತೊಳೆದು ಆಮೇಲೆ ತಿಂಡಿ ಶುರುಮಾಡು ಎಂದು ಕುಸುಮಾ ಹೇಳಿದ್ದಾಳೆ.

ಈ ಮಾತು ಕೇಳಿ ಶ್ರೇಷ್ಠಾ ಮತ್ತೊಮ್ಮೆ ಶಾಕ್ ಆಗಿ ಏನು ತಿಂಡಿನಾ? ಎಂದು ಪ್ರಶ್ನಿಸಿದ್ದಾಳೆ. ಆಗ ಭಾಗ್ಯ ಬಂದು ಅತ್ತೆ ಹೇಳ್ತಿರೋದು ಸರಿಯಾಗೇ ಇದೆ ಎಂದು ಹೇಳಿದ್ದಾಳೆ. ಸದ್ಯ ಶ್ರೇಷ್ಠಾ ಅರ್ಧ ಹೊತ್ತು ಕೂಡ ಕೆಲಸ ಮಾಡಲಾಗದೆ ಸುಸ್ತಾಗಿದ್ದಾಳೆ. ಈ ಎಲ್ಲ ವಿಚಾರವನ್ನು ತಾಂಡವ್​ಗೆ ಹೋಗಿ ಹೇಳುವುದು ಖಚಿತ. ಸದ್ಯ ತಾಂಡವ್ ಏನು ಮಾಡ್ತಾನೆ ಅಥವಾ ಶ್ರೇಷ್ಠಾ ಮನೆಬಿಟ್ಟೇ ಹೋಗ್ತಾಳ ಎಂಬುದು ಮುಂದಿನ ಸಂಚಿಕೆಯಲ್ಲಿ ನೋಡಬೇಕಿದೆ.

BBK 11: ಬಿಗ್ ಬಾಸ್ ಕನ್ನಡ ಸೀಸನ್ 11 ಫಿನಾಲೆಗೆ ದಿನಾಂಕ ಫಿಕ್ಸ್: ಯಾವಾಗ ನೋಡಿ