Sunday, 5th January 2025

Bhagya Lakshmi Serial: ಕಾಫಿ ಮಾಡೋಕೂ ಬರಲ್ಲ: ಆನ್​ಲೈನ್​ನಲ್ಲಿ​ ಫುಡ್ ಆರ್ಡರ್ ಮಾಡಿ ಮನೆಮಂದಿಗೆ ಬಳಿಸಿದ ಶ್ರೇಷ್ಠಾ

Bhagya Lakshmi Serial (6)

ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ‘ಭಾಗ್ಯಲಕ್ಷ್ಮೀ’ (Bhagya Lakshmi) ಧಾರಾವಾಹಿ ಹೊಸ ತಿರುವು ಪಡೆದುಕೊಂಡಿದೆ. ಸದ್ಯ ಶ್ರೇಷ್ಠಾಳನ್ನು ತಾಂಡವ್ ತನ್ನ ಮನೆಗೆ ಕರೆದುಕೊಂಡು ಬಂದಿದ್ದು, ಎಲ್ಲರ ಜೊತೆ ಇದ್ದಾಳೆ. ಮೊದಲ ದಿನ ಖುಷಿ ಖುಷಿಯಿಂದ ಇಂದ ಶ್ರೇಷ್ಠಾಗೆ ಈಗ ಭಾಗ್ಯ ಹಾಗೂ ತಾಂಡವ್ ಅಮ್ಮ ಕುಸುಮಾ ಬೆವರಿಳಿಸುತ್ತಿದ್ದಾರೆ. ಶ್ರೇಷ್ಠಾ ಈ ಮನೆಯ ಸೊಸೆ, ಭಾಗ್ಯ ಈ ಮನೆಯ ಅತಿಥಿ ಆಗ್ತಾಳೆ ಎಂದು ಶಾಕ್ ಕೊಟ್ಟಿದ್ದಳು ಕುಸುಮಾ.

ಸದಾ ಆರಾಮವಾಗಿ ಇರುತ್ತಿದ್ದ ಶ್ರೇಷ್ಠಾಳಿಗೆ ಸೊಸೆಯಾದವಳ ಜವಾಬ್ದಾರಿ ಹೇಗೆ ಇರುತ್ತದೆ ಎಂದು ತೋರಿಸಲು ಭಾಗ್ಯಾ ಹಾಗೂ ಕುಸುಮಾ ಮುಂದಾಗಿದ್ದಾರೆ. ಒಂದು ನಿಮಿಷ ಕೂಡ ಕುಳಿತುಕೊಳ್ಳಲು ಬಿಡದೆ ಕೆಲಸ ನೀಡುತ್ತಿದ್ದಾರೆ. ಬೆಳಗ್ಗೆ ಎದ್ದ ತಕ್ಷಣ ಭಾಗ್ಯಾಳ ಬಳಿ ಬಂದು ಮಾವನಿಗೆ ಕಾಫಿ ಬೇಕಂತೆ ತಂದುಕೊಡು ಎಂದು ಶ್ರೇಷ್ಠಾ ಹೇಳುತ್ತಾಳೆ. ಅದಕ್ಕೆ ಭಾಗ್ಯ ಹಾಗಿದ್ರೆ ಮಾಡಿಕೊಡು ಎಂದು ಹೇಳಿದ್ದಾಳೆ. ಆಗ ಸಿಟ್ಟಿಗೆದ್ದ ಶ್ರೇಷ್ಠಾ, ಹೇ.. ಭಾಗ್ಯಾ ಯಾಕೆ ದೌಲತ್ತಲ್ಲಿ ಮಾತಾಡ್ತಾ ಇದ್ದೀಯಾ?, ಹೋಗಿ ಕಾಫಿ ಮಾಡ್ಕೊಂಡು ಬಾ ಎಂದು ಹೇಳುತ್ತಾಳೆ.

ಆಗ ಭಾಗ್ಯಾ, ಶ್ರೇಷ್ಠಾಳ ಕೈ ಹಿಡಿದುಕೊಂಡು ಅಡುಗೆ ಮನೆಗೆ ಕರೆದುಕೊಂಡು ಹೋಗುತ್ತಾಳೆ. ಆಗ ಶ್ರೇಷ್ಠಾ ನಾನು ನಿನಗೆ ಕಾಫಿ ಮಾಡಿಕೊಡು ಅಂತ ಹೇಳಿದ್ದು ಅಂತಾಳೆ. ಅದಕ್ಕೆ ಭಾಗ್ಯಾ, ಅದು ಹೇಗೆ ಆಗುತ್ತೆ, ಇದು ನಿನ್ನ ಅಡುಗೆ ಮನೆ, ಇನ್ಮೇಲೆ ಅಡುಗೆ ನೀನೇ ಮಾಡಬೇಕು ಎಂದು ಹೇಳುತ್ತಾಳೆ. ಅತ್ತ ಕುಸುಮಾ, ನನ್ನ ಸೊಸೆಗೆ ಎಲ್ಲ ಕೆಲಸ ಬರುತ್ತೆ, ಅವಳು ಮಾಡ್ತಾಳೆ ಎಂದು ಹೇಳುತ್ತಾಳೆ.

ಅದರಂತೆ ಶ್ರೇಷ್ಠಾ ಹಾಗೋ ಹೇಗೋ ಕಾಫಿ ಮಾಡ್ಕೊಂಡು ಬರ್ತಾಳೆ. ಆದ್ರೆ, ಅದನ್ನ ಯಾರೂ ಕುಡಿಯಲು ಆಗಲ್ಲ. ಬಳಿಕ ಕುಸುಮಾ, ಶ್ರೇಷ್ಠಾಗೆ ಕಾಫಿ ಮಾಡೋದು ಹೇಗೆ ಎಂದು ಹೇಳಿ ಆರೀತಿ ಮಾಡ್ಕೊಂಡು ಬಾ ಎಂದು ಪುನಃ ಹೇಳಿದ್ದಾಳೆ. ಅಭ್ಯಾಸ ಆಗುವ ತನಕ ಅಷ್ಟೆ, ಒಂದು ನಾಲ್ಕು ಸಲ ಮಾಡಿದ್ರೆ ಎಲ್ಲ ಸರಿಯಾಗುತ್ತೆ, ಈಗ ಇನ್ನೊಂದು ಸಲ ಕಾಫಿ ಮಾಡ್ಕೊಂಡು ಬಾ ಎಂದು ಕುಸುಮಾ ಹೇಳಿದ್ದಾಳೆ. ಅದಕ್ಕೆ ಶ್ರೇಷ್ಠಾ ಶಾಕ್ ಆಗಿ, ಏನು ಇನ್ನೊಂದು ಸಲನಾ?, ಬೇಕಿದ್ರೆ ನಾಳೆ ನಾನು ಕರೆಕ್ಟ್ ಆಗಿ ಮಾಡ್ತೀನಿ ಎನ್ನುತ್ತಾಳೆ. ಆಗ, ಏನೂ ಆಗಲ್ಲ.. ನಾನು ಹೇಳಿದ ಹಾಗೇ ಕರೆಕ್ಟ್ ಆಗಿ ಮಾಡ್ಕೊಂಡು ಬಾ.. ಎಲ್ಲರೂ ನಿನ್ನ ನೋಡಿ ನಗುತ್ತಿದ್ದಾರೆ ಅವರಿಗೆಲ್ಲ ಸರಿಯಾದ ಉತ್ತರ ಕೊಡ್ಬೇಕು ಎಂದು ಕುಸುಮಾ ಶ್ರೇಷ್ಠಾಳನ್ನು ಮತ್ತೆ ಅಡುಗೆ ಮನೆಗೆ ಕಳುಹಿಸಿದ್ದಾಳೆ.

ಇನ್ನು ತಿಂಡಿಗೆ ಏನು ಮಾಡಬೇಕು ಎಂದು ಅರಿಯದೆ ಶ್ರೇಷ್ಠಾ ಮಾಸ್ಟರ್ ಪ್ಲ್ಯಾನ್ ಮಾಡಿದ್ದಾಳೆ. ಈ ಏರಿಯಾದ ಬೆಸ್ಟ್ ಹೋಟೆಲ್​ನಿಂದ ಬಿಸಿಬೇಳೆ ಬಾತ್ ಮತ್ತು ಕೇಸರಿ ಬಾತ್ ಆರ್ಡರ್ ಮಾಡುತ್ತೇನೆ ಎಂದು ಆನ್​ಲೈನ್​ನಲ್ಲಿ ಆರ್ಡರ್ ಮಾಡಿ ತಂದಿದ್ದಾಳೆ. ಮನೆಮಂದಿಗೆ ಇದನ್ನೆಲ್ಲ ಬಳಿಸುತ್ತಿರುವಾಗ ಬಿರುಗಾಳಿಯಂತೆ ಬಂದ ಭಾಗ್ಯ, ಇದು ಯಾವುದೂ ಈ ಶ್ರೇಷ್ಠಾ ಮಾಡಿಲ್ಲ ಅತ್ತೆ, ನಾನು ಅಡುಗೆ ಮನೆಗೆ ಹೋಗಿ ನೋಡ್ಕೊಂಡು ಬಂದೆ, ಯಾವ ವಸ್ತುನೂ ಖಾಲಿಯಾಗಿಲ್ಲ ಎಂದು ಹೇಳಿದ್ದಾಳೆ. ಸದ್ಯ ಶ್ರೇಷ್ಠಾ ಏನು ಮಾಡ್ತಾಳೆ ಎಂಬುದು ಮುಂದಿನ ಸಂಚಿಕೆಯಲ್ಲಿ ನೋಡಬೇಕಿದೆ.

BBK 11: ಫೈನಲ್ ಸ್ಪರ್ಧಿಗಳು ಯಾರೆಂದು ರಜತ್ ಬಳಿ ಗುಟ್ಟಾಗಿ ಹೇಳಿದ ಪತ್ನಿ ಅಕ್ಷಿತಾ