Monday, 13th January 2025

Bhagya Lakshmi Serial: ಮನೆ ಕೆಲಸದವಳನ್ನು ನೇಮಿಸಿ ಆಫೀಸ್ ಹೊರಟ ಶ್ರೇಷ್ಠಾ: ಭಾಗ್ಯಾ-ಕುಸುಮಾಳ ಮುಂದಿನ ನಡೆ ಏನು?

Bhagya lakshmi serial (11)

ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ‘ಭಾಗ್ಯಲಕ್ಷ್ಮೀ’ ಧಾರಾವಾಹಿಯಲ್ಲಿ (Bhagya Lakshmi Serial) ಶ್ರೇಷ್ಠಾ-ಭಾಗ್ಯಾ ಹಾಗೂ ಕುಸುಮಾ ನಡುವಣ ಆಟ ಉತ್ತಮವಾಗಗಿ ಮೂಡಿಬರುತ್ತದೆ. ವೀಕ್ಷಕರಿಗೆ ಇಷ್ಟವಾಗುವಂತೆ ಎಪಿಸೋಡ್​ಗಳು ಬರುತ್ತಿದ್ದು, ಶ್ರೇಷ್ಠಾಳಿಗೆ ಬುದ್ದಿ ಕಲಿಸುವ ಭಾಗ್ಯಾ ಹಾಗೂ ತಾಂಡವ್ ಅಮ್ಮ ಕುಸುಮಾಳ ಎಪಿಸೋಡ್​ಗೆ ಉತ್ತಮ ಟಿಆರ್​ಪಿ ಬಂದಿದೆ. ಸದ್ಯ ಶ್ರೇಷ್ಠಾ ಮನೆಸೊಸೆಯ ಪಟ್ಟ ಭದ್ರ ಪಡಿಸಿಕೊಳ್ಳಲು ನಾನಾಕಸರತ್ತು ನಡೆಸುತ್ತಿದ್ದಾಳೆ. ಆದರೆ, ಈ ಪ್ಲ್ಯಾನ್​ಗಳೆಲ್ಲ ಫೇಲ್ ಆಗುತ್ತಿದೆ.

ಸತ್ಯನಾರಾಯಣ ಪೂಜೆಯಲ್ಲಿ ಶ್ರೇಷ್ಠಾ ನೈವೇದ್ಯದ ಬದಲು ಉಪ್ಪಿಟ್ಟು ತಂದುಕೊಟ್ಟು ಪಚೀತಿ ಮಾಡಿದ್ದು ಗೊತ್ತೇ ಇದೆ. ಬಳಿಕ ಭಾಗ್ಯಾ ದೇವರಿಗೆ ನೈವೇದ್ಯ ತಯಾರಿ ಮಾಡುತ್ತಾಳೆ. ಈ ಎಲ್ಲ ಘಟನೆಯಿಂದ ಕೋಪಗೊಂಡ ಶ್ರೇಷ್ಠಾ, ನಾನು ಇಲ್ಲಿಗೆ ಸೋಲಲು ಬಂದಿಲ್ಲ. ಗೆಲ್ಲಲು ಬಂದಿರುವುದು, ಗೆದ್ದು ತೋರಿಸುತ್ತೇನೆ ಎಂದು ಎಲ್ಲರ ಮುಂದೆ ಮತ್ತೆ ಸವಾಲು ಹಾಕುತ್ತಾಳೆ. ನಾನು ಭಾಗ್ಯಾಳನ್ನು ಅನುಸರಿಸಿದರೆ ಆಗುವುದಿಲ್ಲ, ಇನ್ಮುಂದೆ ಶ್ರೇಷ್ಠಾ ಆಗಿಯೇ ಎಲ್ಲರಿಗೂ ಬುದ್ಧಿ ಕಲಿಸುತ್ತೇನೆ ಎಂದು ನಿರ್ಧರಿಸುತ್ತಾಳೆ.

ಮರುದಿನ ಆಫೀಸಿಗೆ ಹೊರಡುವ ಶ್ರೇಷ್ಠಾ, ಮನೆ ಕೆಲಸ ಮಾಡಲು ಕೆಲಸದವಳನ್ನು ಗೊತ್ತು ಮಾಡುತ್ತಾಳೆ. ಮನೆ ಕೆಲಸ ಮಾಡಲು ಕಂಡಿಷನ್‌ ಮೇಲೆ ಕಂಡಿಷನ್ ಹಾಕುವ ಕೆಲಸದವಳು ಎಲ್ಲಾ ಕೆಲವನ್ನು ಮಾಡಿ ಮುಗಿಸುತ್ತಾಳೆ. ಇದೇ ಖುಷಿಗೆ ಶ್ರೇಷ್ಠಾ ಎಲ್ಲರನ್ನೂ ಡೈನಿಂಗ್‌ ಟೇಬಲ್‌ ಬಳಿ ಕೂರಿಸಿ, ಇನ್ಮುಂದೆ ನಾನು ಅಫೀಸಿಗೆ ಹೋಗುತ್ತೇನೆ, ಮನೆ ಕೆಲಸ ಮಾಡಲು ಇವಳನ್ನು ಕರೆದು ತಂದಿರುವೆ ಎಂದು ಪರಿಚಯ ಮಾಡಿಸುತ್ತಾಳೆ.

ಇದನ್ನು ಕೇಳಿ ಭಾಗ್ಯಾ ಹಾಗೂ ಕುಸುಮ ಶಾಕ್ ಆಗುತ್ತಾರೆ. ಸೊಸೆ ಎಂದರೆ ಮನೆ ಕೆಲಸದವಳನ್ನು ಇಟ್ಟು ಮನೆ ನಿಭಾಯಿಸುವುದಾ? ಎಂದು ಪೂಜಾ ಕೇಳುತ್ತಾಳೆ. ಸೊಸೆ ಎಂದರೆ ಆಫೀಸಿನಲ್ಲೂ ಕೆಲಸ ಮಾಡಿ, ಮನೆ ಕೆಲಸವನ್ನೂ ನಿಭಾಯಿಸುವುದು, ಅದನ್ನು ಶ್ರೇಷ್ಠಾ ಸರಿಯಾಗಿ ಮಾಡುತ್ತಿದ್ದಾಳೆ ಎಂದು ತಾಂಡವ್‌ ಹೇಳುತ್ತಾನೆ. ಹಾಗೆಯೆ ಮನೆ ಸೊಸೆಯನ್ನು ಆಫೀಸಿಗೆ ಕಳುಹಿಸದಷ್ಟು ಹಿಂದಿನ ಕಾಲದವರು ನಮ್ಮ ಅತ್ತೆ ಅಲ್ಲ ಎಂದು ಶ್ರೇಷ್ಠಾ ಹೇಳುತ್ತಾಳೆ.

ಇನ್ನೇನು ಎಲ್ಲ ಸರಿ ಆಯಿತು ಎನ್ನವ ಹೊತ್ತಿಗೆ ಶ್ರೇಷ್ಠಾ ಹಾಗೂ ತಾಂಡವ್‌ನನ್ನು ನಿಲ್ಲಿಸಿ ಮನೆ ಕೆಲಸದವಳು ಕಂಡಿಷನ್ ಹಾಕುತ್ತಾಳೆ. ನಾನು ಬೆಳಗಿನಿಂದ ಸಂಜೆವರೆಗೂ ಇಲ್ಲಿ ಇರಬೇಕೆಂದರೆ ನನ್ನ ಕಂಡಿಷನ್‌ಗೆ ನೀವು ಒಪ್ಪಬೇಕು. ನನಗೆ ಮನೆಯಲ್ಲಿ ಧಾರಾವಾಹಿ ನೋಡಲು ಅವಕಾಶ ಮಾಡಿಕೊಡಬೇಕು. ಮಧ್ಯಾಹ್ನ 1 ಗಂಟೆ ನಿದ್ರೆ ಮಾಡುತ್ತೇನೆ, ಸಂಜೆ 7ಕ್ಕೆ ವಾಪಸ್‌ ಹೋಗುತ್ತೇನೆ ಎನ್ನುತ್ತಾಳೆ. ಈ ಕಂಡಿಷನ್ ಆಗಿಲ್ಲ ಎಂದಾದರೆ ನಾನು ಇಲ್ಲಿ ಇರೋದಿಲ್ಲ ಎಂದು ಮನೆಗೆಲಸದವಳು ಹೇಳಿದ್ದಾಳೆ. ಅವಳ ಕಂಡಿಷನ್‌ ಅತಿ ಎನಿಸಿದರೂ ತಲೆನೋವು ತಪ್ಪಿದರೆ ಸಾಕು ಅಂತ ತಾಂಡವ್, ಶ್ರೇಷ್ಠಾ ಒಪ್ಪುತ್ತಾರೆ.

ಒಲೆ ಮೇಲೆ ಇಟ್ಟ ಅಡುಗೆಯನ್ನು ಮರೆತು ಮನೆ ಕೆಲಸದವಳು ಟಿವಿ ನೋಡುತ್ತಾ ಕೂರುತ್ತಾಳೆ. ಅವಳನ್ನು ನೋಡಿ ಭಾಗ್ಯಾ ಸಿಟ್ಟಾಗುತ್ತಾಳೆ. ಕುಸುಮಾ ಬಂದು ಟಿವಿಯನ್ನು ಆಫ್ ಮಾಡುತ್ತಾಳೆ. ಆಗ ಮನೆ ಕೆಲಸದವಳು ಬಂದು, ಹಲೋ.. ಟಿವಿ ಯಾಕೆ ಆಫ್ ಮಾಡಿದ್ರಿ ಎಂದು ಪ್ರಶ್ನಿಸಿದ್ದಾಳೆ. ಇದರಿಂದ ಕೋಪಗೊಂಡ ಕುಸುಮಾ, ಇನ್ನೇನು ಮಾಡ್ಬೇಕು?, ನೀನು ಮಾಡ್ತಿರೊ ಪುಂಡಾಟಕ್ಕೆ ಪ್ರಶಸ್ತಿ ಕೊಟ್ಟು ಸನ್ಮಾನ ಮಾಡ್ಬೇಕಾ. ನಿನ್ಗೆ ನೀನು ತುಂಬಾ ಜಾಸ್ತಿ ಮಾತಾಡ್ತಾ ಇದ್ದಿ ಅಂತ ಅನಿಸೋದಿಲ್ವಾ ಎಂದು ಕೇಳಿದ್ದಾಳೆ. ಸದ್ಯ ತಾಂಡವ್-ಶ್ರೇಷ್ಠಾ ಆಫೀಸಿನಲ್ಲಿದ್ದರೆ ಇತ್ತ ಮನೆಕೆಲಸದವಳನ್ನು ಭಾಗ್ಯಾ-ಕುಸುಮಾ ಹೊರಹಾಕಲು ಪ್ಲ್ಯಾನ್ ಮಾಡುತ್ತಿದ್ದಾರೆ.

BBK 11: ನಾನು ಆಟ ಶುರು ಮಾಡಿ ಬಹಳ ದಿನ ಆಯ್ತು: ಹನುಮಂತನ ಮಾತಿಗೆ ಕಿಚ್ಚ ಫಿದಾ, ಮನೆಮಂದಿ ಶಾಕ್

Leave a Reply

Your email address will not be published. Required fields are marked *