Monday, 6th January 2025

Bhagya Lakshmi Serial: ಮನೆಯವರ ಎದುರು ಬಯಲಾಯ್ತು ಶ್ರೇಷ್ಠಾ ಕಳ್ಳಾಟ: ಅತ್ತೆಯಿಂದ ಸಖತ್ ಕ್ಲಾಸ್

Bhagya Lakshmi Serial (7)

ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ‘ಭಾಗ್ಯಲಕ್ಷ್ಮೀ’ ಧಾರಾವಾಹಿ (Bhagya Lakshmi Serial) ಹೊಸ ತಿರುವು ಪಡೆದುಕೊಂಡಿದೆ. ಸದ್ಯ ಶ್ರೇಷ್ಠಾಳನ್ನು ತಾಂಡವ್ ತನ್ನ ಮನೆಗೆ ಕರೆದುಕೊಂಡು ಬಂದಿದ್ದು, ಎಲ್ಲರ ಜೊತೆ ಇದ್ದಾಳೆ. ಮೊದಲ ದಿನ ಖುಷಿ ಖುಷಿಯಿಂದ ಇಂದ ಶ್ರೇಷ್ಠಾಗೆ ಈಗ ಭಾಗ್ಯ ಹಾಗೂ ತಾಂಡವ್ ಅಮ್ಮ ಕುಸುಮಾ ಬೆವರಿಳಿಸುತ್ತಿದ್ದಾರೆ. ಒಂದು ನಿಮಿಷ ಕೂಡ ಕುಳಿತುಕೊಳ್ಳಲು ಬಿಡದೆ ಕೆಲಸ ನೀಡುತ್ತಿದ್ದಾರೆ.

ಇದು ನಿನ್ನ ಅಡುಗೆ ಮನೆ, ಇನ್ಮೇಲೆ ಅಡುಗೆ ನೀನೇ ಮಾಡಬೇಕು ಎಂದು ಶ್ರೇಷ್ಠಾಗೆ ಭಾಗ್ಯಾ ಹೇಳಿದ್ದಾಳೆ. ಅತ್ತ ಕುಸುಮಾ, ನನ್ನ ಸೊಸೆಗೆ ಎಲ್ಲ ಕೆಲಸ ಬರುತ್ತೆ, ಅವಳು ಮಾಡ್ತಾಳೆ ಎಂದು ಹೇಳಿದ್ದಾಳೆ. ಆದರೆ, ಶ್ರೇಷ್ಠಾಗೆ ಒಂದು ಕಾಫಿ ಮಾಡಲು ಕೂಡ ಬರೋದಿಲ್ಲ. ಹಾಗೋ ಹೇಗೋ ಕಾಫಿ ಮಾಡ್ಕೊಂಡು ಬರ್ತಾಳೆ. ಆದ್ರೆ, ಅದನ್ನ ಯಾರೂ ಕುಡಿಯಲು ಆಗಲ್ಲ. ಬಳಿಕ ಕುಸುಮಾ, ಶ್ರೇಷ್ಠಾಗೆ ಕಾಫಿ ಮಾಡೋದು ಹೇಗೆ ಎಂದು ಹೇಳಿ ಆರೀತಿ ಮಾಡ್ಕೊಂಡು ಬಾ ಎಂದು ಪುನಃ ಹೇಳಿದ್ದಾಳೆ.

ಇನ್ನು ತಿಂಡಿಗೆ ಏನು ಮಾಡಬೇಕು ಎಂದು ಅರಿಯದೆ ಶ್ರೇಷ್ಠಾ ಮಾಸ್ಟರ್ ಪ್ಲ್ಯಾನ್ ಮಾಡಿದ್ದಾಳೆ. ಈ ಏರಿಯಾದ ಬೆಸ್ಟ್ ಹೋಟೆಲ್​ನಿಂದ ಬಿಸಿಬೇಳೆ ಬಾತ್ ಮತ್ತು ಕೇಸರಿ ಬಾತ್ ಆರ್ಡರ್ ಮಾಡುತ್ತೇನೆ ಎಂದು ಆನ್​ಲೈನ್​ನಲ್ಲಿ ಆರ್ಡರ್ ಮಾಡಿ ತಂದಿದ್ದಾಳೆ. ಮನೆಮಂದಿಗೆ ಇದನ್ನೆಲ್ಲ ಬಳಿಸುತ್ತಿರುವಾಗ ಬಿರುಗಾಳಿಯಂತೆ ಬಂದ ಭಾಗ್ಯ, ಇದು ಯಾವುದೂ ಈ ಶ್ರೇಷ್ಠಾ ಮಾಡಿಲ್ಲ ಅತ್ತೆ, ನಾನು ಅಡುಗೆ ಮನೆಗೆ ಹೋಗಿ ನೋಡ್ಕೊಂಡು ಬಂದೆ, ಯಾವ ವಸ್ತುನೂ ಖಾಲಿಯಾಗಿಲ್ಲ ಎಂದು ಹೇಳಿದ್ದಾಳೆ.

ಅತ್ತ ಮಾವಾ ಕೂಡ, ನಮ್ಮ 4th ಕ್ರಾಸ್​ನಲ್ಲಿ ಹೋಟೆಲ್ ಇದೆ ಅಲ್ವಾ, ಅಲ್ಲಿಯ ಫುಡ್ ಇದು ಎಂದು ಎಲ್ಲರ ಮುಂದೆ ಹೇಳಿದ್ದಾರೆ. ಆ ಹೋಟೆಲ್​ನಲ್ಲಿ ತುಂಬಾ ವರ್ಷದಿಂದ ನಾನು ತಿಂತಾ ಇದ್ದೀನಿ, ಅಲ್ಲಿನ ಟೇಸ್ಟ್​ನ ನಾನು ಯಾವತ್ತೂ ಮರಿಯೋಕೆ ಆಗಲ್ಲ. ಇಲ್ಲಿರುವ ಬಿಸಿ ಬೇಳೆ ಬಾತ್ ಖಂಡಿತಾ ಅಲ್ಲಿದೇ ಎಂದು ಹೇಳಿದ್ದಾರೆ.

ಇದರಿಂದ ಕೋಪಗೊಂಡ ಶ್ರೇಷ್ಠಾ, ಇಲ್ಲ ಮಾವ ಖಂಡಿತ ಇಲ್ಲ, ಇದೆಲ್ಲ ನಾನೇ ಮಾಡಿದ್ದು. ಒಬ್ಬೊಬ್ಬರು ಒಂದೊಂದು ಮಾತಾಡ್ತಾ ಇದ್ದೀರಿ ಅಲ್ವಾ.. ಇದನ್ನೆಲ್ಲ ಮಾಡಿದ್ದು ನಾನೇ.. ನಿಮ್ಗೆ ನಂಬಕಾದ್ರೆ ನಂಬಿ, ಇಲ್ಲಾಂದ್ರೆ ಸುಮ್ನೆ ಇರಿ. ನಿಮ್ಗೆಲ್ಲ ನನ್ನ ಈ ಮನೆ ಸೊಸೆ ಆಗಿ ಸ್ವೀಕರಿಸಲು ಕಷ್ಟ ಆಗ್ತಿದೆ, ಅದಕ್ಕೆ ಈ ರೀತಿ ನಾಟಕ ಮಾಡ್ತಾ ಇದ್ದೀರ ಎಂದು ಹೇಳುತ್ತಾಳೆ.

ಆಗ ಮನೆ ಬೆಲ್ ರಿಂಗ್ ಆಗುತ್ತದೆ. ಈ ವೇಳೆ ಶ್ರೇಷ್ಠಾ ನೀವು ತಿಂತಾ ಇರಿ ನಾನು ಯಾರು ಅಂತ ನೋಡ್ಕೊಂಡು ಬರ್ತೇನೆ ಎಂದು ಬಾಗಿಲು ಬಳಿ ಹೋಗ್ತಾಳೆ. ಬಾಗಿಲು ತೆಗೆಯುವ ಹೊತ್ತಿಗೆ ಅತ್ತೆ ಕುಸುಮಾ ಕೂಡ ಶ್ರೇಷ್ಠಾ ಜೊತೆ ಬರ್ತಾರೆ. ಬೆಲ್ ಮಾಡಿದವನ ಬಳಿ ಯಾರಪ್ಪ ನೀನು ಎಂದು ಕುಸುಮ ಕೇಳಿದ್ದಾಳೆ. ಆಗ ಆ ವ್ಯಕ್ತಿ ನಾನು ಫುಡ್ ಡೆಲಿವರಿ ಬಾಯ್, ಬಿಸಿ ಬೇಳೆ ಬಾತ್-ಕೇಸರಿ ಬಾತ್ ಆರ್ಡರ್ ಮಾಡಿದ್ದು ನೀವೇ ತಾನೆ ಎಂದು ಶ್ರೇಷ್ಠಾ ಬಳಿ ಕೇಳುತ್ತಾನೆ. ಇಲ್ಲಿಗೆ ಶ್ರೇಷ್ಠಾಳ ಎಲ್ಲ ಕಳ್ಳಾಟ ಬಯಲಾಗಿದೆ. ಸದ್ಯ ಕುಸುಮಾ-ಭಾಗ್ಯ ಏನು ಮಾಡ್ತಾರೆ ಎಂಬುದು ಮುಂದಿನ ಸಂಚಿಕೆಯಲ್ಲಿ ನೋಡಬೇಕಿದೆ.

BBK 11: ಮೂರು ತಿಂಗಳಾಯ್ತು: ಕಿಸ್ ಟಾಸ್ಕ್​ನಲ್ಲಿ ಧನರಾಜ್ ಕಾಮಿಡಿ ಝಲಕ್