ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ‘ಭಾಗ್ಯಲಕ್ಷ್ಮೀ’ ಧಾರಾವಾಹಿ (Bhagya Lakshmi Serial) ಹೊಸ ತಿರುವು ಪಡೆದುಕೊಂಡಿದೆ. ಸದ್ಯ ಶ್ರೇಷ್ಠಾಳನ್ನು ತಾಂಡವ್ ತನ್ನ ಮನೆಗೆ ಕರೆದುಕೊಂಡು ಬಂದಿದ್ದು, ಎಲ್ಲರ ಜೊತೆ ಇದ್ದಾಳೆ. ಮೊದಲ ದಿನ ಖುಷಿ ಖುಷಿಯಿಂದ ಇಂದ ಶ್ರೇಷ್ಠಾಗೆ ಈಗ ಭಾಗ್ಯಾ ಹಾಗೂ ತಾಂಡವ್ ಅಮ್ಮ ಕುಸುಮಾ ಬೆವರಿಳಿಸುತ್ತಿದ್ದಾರೆ. ಒಂದು ನಿಮಿಷ ಕೂಡ ಕುಳಿತುಕೊಳ್ಳಲು ಬಿಡದೆ ಕೆಲಸ ನೀಡುತ್ತಿದ್ದಾರೆ.
ಮೊದಲಿಗೆ ಶ್ರೇಷ್ಠಾಳನ್ನು ಭಾಗ್ಯ ಅಡುಗೆ ಮನೆಗೆ ಕಳುಹಿಸಿದ್ದಳು. ಆದರೆ, ಶ್ರೇಷ್ಠಾಗೆ ಒಂದು ಕಾಫಿ ಮಾಡಲು ಕೂಡ ಬರೋದಿಲ್ಲ. ಅತ್ತ ಬೆಳಗ್ಗಿನ ತಿಂಡಿಗೆ ಏನು ಮಾಡಬೇಕು ಎಂದು ಅರಿಯದೆ ಶ್ರೇಷ್ಠಾ ಮಾಸ್ಟರ್ ಪ್ಲ್ಯಾನ್ ಮಾಡಿ ಏರಿಯಾದ ಬೆಸ್ಟ್ ಹೋಟೆಲ್ನಿಂದ ಬಿಸಿಬೇಳೆ ಬಾತ್ ಮತ್ತು ಕೇಸರಿ ಬಾತ್ ಆರ್ಡರ್ ಮಾಡುತ್ತಾಳೆ. ಆದರೆ, ಈ ವಿಚಾರ ಮನೆಯವರಿಗೆ ತಿಳಿದು ಅತ್ತೆಯಿಂದ ಸರಿಯಾಗಿ ಬೈಸಿಕೊಳ್ಳುತ್ತಾಳೆ.
ಇದಾದ ಬಳಿಕ ಕುಸುಮಾ ಬಟ್ಟೆ ಒಗೆಯಲು ಶ್ರೇಷ್ಠಾ ಬಳಿ ಹೇಳಿದ್ದಾಳೆ. ಇದಕ್ಕೆ ಒಕೆ ಎಂದ ಶ್ರೇಷ್ಠಾ ಎಲ್ಲ ಬಟ್ಟೆಗಳನ್ನು ವಾಷಿಂಗ್ ಮೆಶಿನ್ಗೆ ಹಾಕಲು ಮುಂದಾಗುತ್ತಾಳೆ. ಆಗ ಕುಸುಮಾ ಬಂದು, ಬಟ್ಟೆ ಎಲ್ಲ ವಾಷಿಂಗ್ ಮೆಶಿನ್ಗೆ ಹಾಕು ಅಂತ ಯಾರು ಹೇಳಿದ್ದು ಎಂದು ಕೇಳುತ್ತಾಳೆ. ಅದಕ್ಕೆ ಶ್ರೇಷ್ಠಾ ನೀವೇ ಅಲ್ವ ಹೇಳಿದ್ದು ನಾಳೆ ಪೂಜೆ ಇದೆ ಬಟ್ಟೆ ಎಲ್ಲ ಒಗಿಬೇಕು ಅಂದ್ರಲ್ಲ ಎಂದಿದ್ದಾಳೆ. ನಾನು ಬಟ್ಟೆ ಒಗಿಬೇಕು ಎಂದಿದ್ದೀನಿ.. ನಮ್ಮನೆಲಿ ವಾಷಿಂಗ್ ಮೆಶಿನ್ ಇದೆ, ಆದ್ರೆ ಭಾಗ್ಯ ಯಾವತ್ತೂ ಬಟ್ಟೆನ ಕೈಯಲ್ಲೇ ಒಗಿಯೋದು.. ನೀನು ಕೂಡ ಕೈಯಲ್ಲೇ ಒಗಿಬೇಕು ಎಂದು ಹೇಳಿದ್ದಾಳೆ.
ಆಗ ಅಲ್ಲಿಗೆ ಭಾಗ್ಯ ಬಂದಿದ್ದಾಳೆ, ಏನಾಯಿತು ಅತ್ತೆ ಎಂದು ಕೇಳುತ್ತಾಳೆ. ನೋಡು ಭಾಗ್ಯ ಈ ಬಟ್ಟೆಯನ್ನೆಲ್ಲ ವಾಷಿಂಗ್ ಮೆಶಿನ್ಗೆ ಹಾಕ್ತಾಳಂತೆ ಎಂದು ಕುಸುಮಾ ಹೇಳುತ್ತಾಳೆ. ಅದಕ್ಕೆ ಭಾಗ್ಯ, ಇಲ್ಲ ಶ್ರೇಷ್ಠಾ ಇದನ್ನೆಲ್ಲ ಕೈಯಲ್ಲಿ ಒಗಿದ್ರೆ ಮಾತ್ರ ಕ್ಲೀನ್ ಆಗೋದು, ಕೈಯಲ್ಲೇ ಒಗಿ ಎಂದು ಹೇಳಿದ್ದಾಳೆ. ಅದರಂತೆ ಶ್ರೇಷ್ಠಾ ಬಟ್ಟೆಗಳನ್ನೆಲ್ಲ ಬಟ್ಟೆ ಒಗಿಯುವ ಕಲ್ಲುಗಳ ಬಳಿ ತಂದು ರಾಶಿ ಹಾಕುತ್ತಾಳೆ. ಇಲ್ಲಿ ಬಂದು ಆರಾಮವಾಗಿ ಇರೋಣ ಅಂದ್ರೆ ಏನು ನನ್ನ ಕರ್ಮ ಎಂದು ತನಗೆ ತಾನೇ ಬೈದುಕೊಳ್ಳುತ್ತಾಳೆ.
ಬಳಿಕ ಬ್ರೋಕರ್ಗೆ ಕಾಲ್ ಮಾಡಿ ಮನೆಕೆಲಸದವಳ ನಂಬರ್ ಕೇಳುತ್ತಾಳೆ ಶ್ರೇಷ್ಠಾ. ನಂಬರ್ ಸಿಕ್ಕಿದ ನಂತರ ಮನೆ ಕೆಲಸದವಳಿಗೆ ಕಾಲ್ ಮಾಡಿ ನಾಳೆಯಿಂದ ಬರುವಂತೆ ಹೇಳುತ್ತಾಳೆ. ಅಷ್ಟೊತ್ತಿಗೆ ಅತ್ತೆ ಕುಸುಮಾ ಬಂದು ಇನ್ನೊಂದಿಷ್ಟು ಬಟ್ಟೆಯನ್ನು ಒಗೆಯಲು ತರುತ್ತಾಳೆ. ಮಾವನವ್ರದ್ದು, ತಾಂಡವ್ಗೆ ಶರ್ಟ್, ಟವೆಲ್ ಎಲ್ಲ ಇದರಲ್ಲಿದೆ ಅದೆಲ್ಲ ಒಗಿಬೇಕು ಎಂದಿದ್ದಾಳೆ. ಇದನ್ನೆಲ್ಲ ಇವತ್ತೇ ಯಾಕೆ ಒಗಿಬೇಕು ಎಂದು ಶ್ರೇಷ್ಠಾ ಪ್ರಶ್ನಿಸುತ್ತಾಳೆ. ಇದರಿಂದ ಸಿಟ್ಟಿಗೆದ್ದ ಕುಸುಮಾ, ನೀನು ಬೆಳಗ್ಗಿಂದ ಏನು ಕಡ್ದು ಕಟ್ಟೆ ಹಾಕಿದ್ದೀಯಾ ಅಂತ ಇಷ್ಟು ಸುಸ್ತಾಗಿರೊ ರೀತಿ ಮಾತಾಡ್ತಾ ಇದ್ದೀಯಾ ಎಂದು ಜೋರು ಮಾಡಿದ್ದಾರೆ.
BBK 11: ಕೊಟ್ಟ ಮಾತಿನಂತೆ ಧನರಾಜ್ ಮನೆಗೆ ತೆರಳಿ ತೊಟ್ಟಿಲು ಗಿಫ್ಟ್ ಕೊಟ್ಟ ಗೋಲ್ಡ್ ಸುರೇಶ್