ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ‘ಭಾಗ್ಯಲಕ್ಷ್ಮೀ’ ಧಾರಾವಾಹಿಯಲ್ಲಿ (Bhagya Lakshmi Serial) ಶ್ರೇಷ್ಠಾಗೆ ಈಗ ಭಾಗ್ಯಾ ಹಾಗೂ ತಾಂಡವ್ ಅಮ್ಮ ಕುಸುಮಾ ಬೆವರಿಳಿಸುತ್ತಿದ್ದಾರೆ. ಒಂದು ನಿಮಿಷ ಕೂಡ ಕುಳಿತುಕೊಳ್ಳಲು ಬಿಡದೆ ಕೆಲಸ ನೀಡುತ್ತಿದ್ದಾರೆ. ಮೊದಲಿಗೆ ಶ್ರೇಷ್ಠಾಳನ್ನು ಭಾಗ್ಯ ಅಡುಗೆ ಮನೆಗೆ ಕಳುಹಿಸಿದ್ದಳು. ಆದರೆ, ಶ್ರೇಷ್ಠಾಗೆ ಒಂದು ಕಾಫಿ ಮಾಡಲು ಕೂಡ ಬರೋದಿಲ್ಲ. ಅತ್ತ ಬೆಳಗ್ಗಿನ ತಿಂಡಿಗೆ ಏನು ಮಾಡಬೇಕು ಎಂದು ಅರಿಯದೆ ಶ್ರೇಷ್ಠಾ ಮಾಸ್ಟರ್ ಪ್ಲ್ಯಾನ್ ಮಾಡಿ ಏರಿಯಾದ ಬೆಸ್ಟ್ ಹೋಟೆಲ್ನಿಂದ ಬಿಸಿಬೇಳೆ ಬಾತ್ ಮತ್ತು ಕೇಸರಿ ಬಾತ್ ಆರ್ಡರ್ ಮಾಡುತ್ತಾಳೆ. ಆದರೆ, ಈ ವಿಚಾರ ಮನೆಯವರಿಗೆ ತಿಳಿದು ಅತ್ತೆಯಿಂದ ಸರಿಯಾಗಿ ಬೈಸಿಕೊಳ್ಳುತ್ತಾಳೆ.
ಇದಾದ ಬಳಿಕ ಕುಸುಮಾ ಬಟ್ಟೆ ಒಗೆಯಲು ಶ್ರೇಷ್ಠಾ ಬಳಿ ಹೇಳಿದ್ದಾಳೆ. ಇದಕ್ಕೆ ಒಕೆ ಎಂದ ಶ್ರೇಷ್ಠಾ ಎಲ್ಲ ಬಟ್ಟೆಗಳನ್ನು ವಾಷಿಂಗ್ ಮೆಶಿನ್ಗೆ ಹಾಕಲು ಮುಂದಾಗುತ್ತಾಳೆ. ಆದ್ರೆ ಬಟ್ಟೆನ ಕೈಯಲ್ಲೇ ಒಗಿಬೇಕು ಎಂದು ಕುಸುಮಾ ಹೇಳಿದ್ದಾಳೆ. ಅಲ್ಲದೆ ಭಾಗ್ಯ ಬಂದು ವಾಷಿಂಗ್ ಮೆಶಿನ್ನ ವೈಯರ್ ಕಟ್ ಮಾಡಿ ಬಿಡುತ್ತಾಳೆ. ಬೇರೆ ದಾರಿಯಿಲ್ಲದೆ ಶ್ರೇಷ್ಠಾ ಕಲ್ಲಿನ ಮೇಲೆಯೇ ಬಟ್ಟೆಯನ್ನು ಒಗೆದಿದ್ದಾಳೆ.
ಇಲ್ಲಿ ಬಂದು ಆರಾಮವಾಗಿ ಇರೋಣ ಅಂದ್ರೆ ಏನು ನನ್ನ ಕರ್ಮ ಎಂದು ತನಗೆ ತಾನೇ ಬೈದುಕೊಂಡು ಬಟ್ಟೆ ಒಗೆದಿದ್ದಾಳೆ. ಅಷ್ಟೊತ್ತಿಗೆ ಅತ್ತೆ ಕುಸುಮಾ ಬಂದು ಇನ್ನೊಂದಿಷ್ಟು ಬಟ್ಟೆಯನ್ನು ಒಗೆಯಲು ತರುತ್ತಾಳೆ. ಮಾವನವ್ರದ್ದು, ತಾಂಡವ್ಗೆ ಶರ್ಟ್, ಟವೆಲ್ ಎಲ್ಲ ಇದರಲ್ಲಿದೆ ಅದೆಲ್ಲ ಒಗಿಬೇಕು ಎಂದಿದ್ದಾಳೆ. ಇದಾದ ಬಳಿಕ ಅತ್ತೆ ಬಗ್ಗೆ ಶ್ರೇಷ್ಠಾ ತಾಂಡವ್ ಬಳಿ ದೂರು ಹೇಳಿದ್ದಾಳೆ.
ನಿಮ್ಮ ಅಮ್ಮ ಅತಿಯಾಗಿ ಆಡ್ತಾ ಇದ್ದಾರೆ, ಇಷ್ಟೆಲ್ಲ ಕೆಲಸ ನನ್ನ ಕೈಯಿಂದ ಮಾಡೋಕೆ ಆಗಲ್ಲ ಎಂದು ಶ್ರೇಷ್ಠಾ ತಾಂಡವ್ ಬಳಿ ಹೇಳಿದ್ದಾಳೆ. ಇದನ್ನು ಕೇಳಿಸಿದ ತಾಂಡವ್ ಕೋಪದಲ್ಲಿ ಶ್ರೇಷ್ಠಾ.. ನನ್ನ ತಲೆ ಚಿಟ್ ಹಿಡಿಸ್ತಿದ್ದೀಯಾ ನೀನು ಎಂದು ರೇಗಾಡಿದ್ದಾನೆ. ಇದರ ಮಧ್ಯೆ ಅತ್ತ ಕುಸುಮಾ ಭಾಗ್ಯಳನ್ನು ಕರೆದು, ಮೊದಲು ಶ್ರೇಷ್ಠಾಳನ್ನು ಇಲ್ಲಿಂದ ಓಡ್ಸೊ ಬಗ್ಗೆ ಯೋಚನೆ ಮಾಡು.. ಯಾವುದೇ ಕಾರಣಕ್ಕು ನಿನ್ನ ಗುರಿ ಮರಿಬೇಡ ಭಾಗ್ಯ ಎಂದು ಎಚ್ಚರಿಸಿದ್ದಾಳೆ. ಸದ್ಯ ಹೊಸ ಪ್ಲಾನ್ ಏನು ಮಾಡ್ತಾರೆ ಎಂಬುದು ನೋಡಬೇಕಿದೆ.
ಮಾವನಿಗೆ ಹೊಸ ಕಾರು ತೆಗೆಯಲು ಹೊರಟ ಭಾಗ್ಯ:
ಭಾಗ್ಯಾಳ ಮಾವ ಹಳೇ ಸ್ಕೂಟರ್ನಲ್ಲಿ ಹೋಗುವಾಗ ಬ್ರೇಕ್ ಹಿಡಿಯದೆ ಚಿಕ್ಕ ಆ್ಯಕ್ಸಿಡೆಂಟ್ ಆಗಿದೆ. ತಲೆಗೆ ಕೊಂಚ ಪೆಟ್ಟಾಗಿದೆ. ಇದರಿಂದ ಗಾಬರಿಗೊಂಡ ಭಾಗ್ಯ, ಮಾವನಿಗೆ ಹೊಸ ಕಾರು ತೆಗೆದುಕೊಡಲು ಮುಂದಾಗಿದ್ದಾಳೆ. ಮಾವ ನಾನು ತುಂಬಾ ಕಾರು ಶೋ ರೂಮ್ಗೆ ಹೋಗಿ ಒಂದಿಷ್ಟು ಕಾರು ಸೆಲೆಕ್ಟ್ ಮಾಡ್ಕೊಂಡು ಬಂದಿದ್ದೇನೆ, ಇದ್ರಲ್ಲಿ ನಿಮಗೆ ಯಾವ ಕಾರು ಬೇಕು ಹೇಳಿ ಎಂದು ಫೋಟೋ ತೋರಿಸಿದ್ದಾಳೆ. ಇದೆಲ್ಲ ಏನು, ನನಗ್ಯಾಕೆ ತೋರಿಸ್ತಾ ಇದ್ದೀಯಾ ಎಂದು ಮಾವ ಪ್ರಶ್ನಿಸುತ್ತಾರೆ. ನಿಮಗೋಸ್ಕರ ನಿಮ್ಮ ಸೊಸೆ ಹೊಸ ಕಾರು ತೆಗೆದುಕೊಡ್ತಿದ್ದಾಳೆ ಎಂದು ಭಾಗ್ಯ ಹೇಳಿದ್ದಾಳೆ.
BBK 11: ಈ ವಾರ ಯಾರೆಲ್ಲ ನಾಮಿನೇಟ್?: ಭಾನುವಾರ ಅಲ್ಲ ಎಲಿಮಿನೇಷನ್, ಮತ್ಯಾವಾಗ?