ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ‘ಭಾಗ್ಯಲಕ್ಷ್ಮೀ’ ಧಾರಾವಾಹಿ (Bhagya Lakshmi Serial) ವೀಕ್ಷಕರ ಗಮನ ಸೆಳೆಯುತ್ತಿದೆ. ಶ್ರೇಷ್ಠಾಗೆ ಬುದ್ದಿ ಕಲಿಸುವ ಭಾಗ್ಯಾ ಹಾಗೂ ತಾಂಡವ್ ಅಮ್ಮ ಕುಸುಮಾಳ ಎಪಿಸೋಡ್ ಅದ್ಭುತವಾಗಿ ಮೂಡಿಬರುತ್ತದೆ. ಒಂದು ನಿಮಿಷ ಕೂಡ ಕುಳಿತುಕೊಳ್ಳಲು ಬಿಡದೆ ಸೊಸೆಯಾದವಳ ಜವಾಬ್ದಾರಿ ಹೇಗೆಲ್ಲ ಇರುತ್ತೆ ಎಂದು ಕಲಿಸಿ ಬೆವರಿಳಿಸುತ್ತಿದ್ದಾರೆ.
ಮೊದಲಿಗೆ ಶ್ರೇಷ್ಠಾಳನ್ನು ಭಾಗ್ಯ ಅಡುಗೆ ಮನೆಗೆ ಕಳುಹಿಸಿದ್ದಳು. ಆದರೆ, ಶ್ರೇಷ್ಠಾಗೆ ಒಂದು ಕಾಫಿ ಮಾಡಲು ಕೂಡ ಬರೋದಿಲ್ಲ. ಅತ್ತ ಬೆಳಗ್ಗಿನ ತಿಂಡಿಗೆ ಏನು ಮಾಡಬೇಕು ಎಂದು ಅರಿಯದೆ ಶ್ರೇಷ್ಠಾ ಮಾಸ್ಟರ್ ಪ್ಲ್ಯಾನ್ ಮಾಡಿ ಏರಿಯಾದ ಬೆಸ್ಟ್ ಹೋಟೆಲ್ನಿಂದ ಬಿಸಿಬೇಳೆ ಬಾತ್ ಮತ್ತು ಕೇಸರಿ ಬಾತ್ ಆರ್ಡರ್ ಮಾಡುತ್ತಾಳೆ. ಆದರೆ, ಈ ವಿಚಾರ ಮನೆಯವರಿಗೆ ತಿಳಿದು ಅತ್ತೆಯಿಂದ ಸರಿಯಾಗಿ ಬೈಸಿಕೊಳ್ಳುತ್ತಾಳೆ.
ಇದಾದ ಬಳಿಕ ಕುಸುಮಾ ಬಟ್ಟೆ ಒಗೆಯಲು ಶ್ರೇಷ್ಠಾ ಬಳಿ ಹೇಳಿದ್ದಾಳೆ. ಇದಕ್ಕೆ ಒಕೆ ಎಂದ ಶ್ರೇಷ್ಠಾ ಎಲ್ಲ ಬಟ್ಟೆಗಳನ್ನು ವಾಷಿಂಗ್ ಮೆಶಿನ್ಗೆ ಹಾಕಲು ಮುಂದಾಗುತ್ತಾಳೆ. ಆದ್ರೆ ಬಟ್ಟೆನ ಕೈಯಲ್ಲೇ ಒಗಿಬೇಕು ಎಂದು ಕುಸುಮಾ ಹೇಳಿದ್ದಾಳೆ. ಅಲ್ಲದೆ ಭಾಗ್ಯ ಬಂದು ವಾಷಿಂಗ್ ಮೆಶಿನ್ನ ವೈಯರ್ ಕಟ್ ಮಾಡಿ ಬಿಡುತ್ತಾಳೆ. ಬೇರೆ ದಾರಿಯಿಲ್ಲದೆ ಶ್ರೇಷ್ಠಾ ಕಲ್ಲಿನ ಮೇಲೆಯೇ ಬಟ್ಟೆಯನ್ನು ಒಗೆದಿದ್ದಾಳೆ. ಇಲ್ಲಿ ಬಂದು ಆರಾಮವಾಗಿ ಇರೋಣ ಅಂದ್ರೆ ಏನು ನನ್ನ ಕರ್ಮ ಎಂದು ತನಗೆ ತಾನೇ ಬೈದುಕೊಂಡು ಬಟ್ಟೆ ಒಗೆದಿದ್ದಾಳೆ.
ಇದಾದ ಬಳಿಕ ಅತ್ತೆ ಬಗ್ಗೆ ಶ್ರೇಷ್ಠಾ ತಾಂಡವ್ ಬಳಿ ದೂರು ಹೇಳಿದ್ದಾಳೆ. ನಿಮ್ಮ ಅಮ್ಮ ಅತಿಯಾಗಿ ಆಡ್ತಾ ಇದ್ದಾರೆ, ಇಷ್ಟೆಲ್ಲ ಕೆಲಸ ನನ್ನ ಕೈಯಿಂದ ಮಾಡೋಕೆ ಆಗಲ್ಲ ಎಂದು ಶ್ರೇಷ್ಠಾ ತಾಂಡವ್ ಬಳಿ ಹೇಳಿದ್ದಾಳೆ. ಇದನ್ನು ಕೇಳಿಸಿದ ತಾಂಡವ್ ಕೋಪದಲ್ಲಿ ಶ್ರೇಷ್ಠಾ.. ನನ್ನ ತಲೆ ಚಿಟ್ ಹಿಡಿಸ್ತಿದ್ದೀಯಾ ನೀನು ಎಂದು ರೇಗಾಡಿದ್ದಾನೆ.
ಇದರ ಮಧ್ಯೆ ಮನೆಯಲ್ಲಿ ಪೂಜೆಯ ತಯಾರಿ ನಡೆಯುತ್ತಿದೆ. ಭಾಗ್ಯ ಬೆಳಗ್ಗೆ ಬೇಗನೆ ಎದ್ದು ಪೂಜೆಗೆ ತಯಾರು ಮಾಡಲು ಹೊರಡುತ್ತಾಳೆ. ಆದರೆ, ಆಗ ಕುಸುಮಾ ಬಂದು, ನೀನು ಪೂಜೆಗೆಲ್ಲ ತಯಾರು ಮಾಡೋದು ಬೇಡ, ಇದು ಸದ್ಯಕ್ಕೆ ನಮ್ಮ ಮನೆ ಅಲ್ಲ, ಅದು ಆ ಶ್ರೇಷ್ಠಾಳ ಮನೆ, ಅವಳು ಈ ಮನೆಯಲ್ಲಿ ಇರೋ ತನಕ ಇದು ನಮ್ಮ ಮನೆ ಆಗಲ್ಲ ಈ ಪೂಜೆ ನಮ್ಮ ಮನೆ ಪೂಜೆ ಅನ್ಸಲ್ಲ. ಹಾಗಾಗಿ ಮೊದಲು ಅವಳನ್ನು ಇಲ್ಲಿಂದ ಓಡ್ಸೊ ಬಗ್ಗೆ ಯೋಚನೆ ಮಾಡಬೇಕು, ನನ್ನ ಮಗನ ಕಣ್ಣು ಮೊದಲ ತೆರೆಸ್ಬೇಕು.. ಯಾವುದೇ ಕಾರಣಕ್ಕು ನಿನ್ನ ಗುರಿ ಮರಿಬೇಡ ಭಾಗ್ಯ ಎಂದು ಹೇಳಿದ್ದಾಳೆ.
ಇನ್ನು ತಾಂಡವ್ ಬಂದು, ನಮ್ಮ ಮನೇಲಿ ನಡೆಯುತ್ತಿರುವ ಪೂಜೆಗೆ ನೈವೇದ್ಯವನ್ನು ಭಾಗ್ಯ ಮಾಡೋದು ಬೇಡ ಎಂದು ಜಗಳ ಆಡಿದ್ದಾನೆ. ಪೂಜೆಗೆ ಸಂಬಂಧ ಪಟ್ಟಿರುವ ಎಲ್ಲ ಕೆಲಸನೂ ಈ ಮನೆಯ ಸೊಸೆಯಾಗಿರುವ ಶ್ರೇಷ್ಠಾ ಮಾಡ್ತಾಳೆ. ಆಗ ಅತ್ತೆ ಕುಸುಮಾ ಬಂದು ಹಾಗಾದ್ರೆ ಪೂಜೇಲಿ ಅಥವಾ ವ್ಯವಸ್ಥೆಯಲ್ಲಿ ಯಾವುದೇ ಏರುಪೇರಾಗಬಾರದು ಎಂದು ಖಡಕ್ ಆಗಿ ಹೇಳುತ್ತಾರೆ. ಇದನ್ನು ಕೇಳಿ ಶ್ರೇಷ್ಠಾ ಒಮ್ಮೆ ಬೆಚ್ಚಿಬಿದ್ದಿದ್ದಾಳೆ. ಸದ್ಯ ಪೂಜೆಯ ಜವಾಬ್ದಾರಿಯನ್ನು ಶ್ರೇಷ್ಠಾ ಹೇಗೆ ನಿರ್ವಹಿಸುತ್ತಾಳೆ ಎಂಬುದು ಕುತೂಹಲ ಕೆರಳಿಸಿದೆ.
BBK 11: ಈ ದಿನಾಂಕದಂದು ನಡೆಯಲಿದೆ ಬಿಗ್ ಬಾಸ್ ಕನ್ನಡ ಸೀಸನ್ 11 ಫಿನಾಲೆ