Friday, 1st November 2024

BBK 11: ಹೊರ ಹೋದ ಬಳಿಕವೂ ನಿಮ್ಮ ಜೊತೆ ಮಾತಾಡಲ್ಲ: ಕೊನೆಯಾಯ್ತು ಐಶ್ವರ್ಯ-ಭವ್ಯಾ ಫ್ರೆಂಡ್​ಶಿಪ್

Bhavya Aishwarya

ಬಿಗ್ ಬಾಸ್ (Bigg Boss Kannada 11) ಮನೆ ಎಂದಮೇಲೆ ಅಲ್ಲಿ ಸಣ್ಣ-ಪುಟ್ಟ ಮನಸ್ತಾಪಗಳು ಬಂದೇ ಬರುತ್ತವೆ. ಇದು ವ್ಯಕ್ತಿತ್ವಗಳ ಆಟ ಆಗಿರುವುದರಿಂದ ನಾನಾ ಬಗೆಯ ವ್ಯಕ್ತಿತ್ವ ಹೊಂದಿರುವವರ ಜೊತೆ ಸೆಟ್ ಆಗಲು ಒಂದಿಷ್ಟು ಸಮಯ ತೆಗೆದುಕೊಳ್ಳುತ್ತದೆ. ಬಳಿಕ ಈ ಮನೆಯಲ್ಲಿ ಅಣ್ಣ, ತಮ್ಮ, ಫ್ರೆಂಡ್ಸ್ ಎಲ್ಲರೂ ಸಿಗುತ್ತಾರೆ. ಈ ಸಂಬಂಧವನ್ನು ಮನೆಯಿಂದ ಹೊರಹೋದ ಬಳಿಕವೂ ಕಾಪಾಡಿಕೊಂಡವರು ನಮ್ಮ ಕಣ್ಣ ಮುಂದೆಯೇ ಇದ್ದಾರೆ. ಆದರೆ, ಇದೀಗ ಬಿಗ್ ಬಾಸ್ ಅರ್ಧ ದಾರಿ ಹಿಡಿಯುವ ಮುನ್ನವೇ ಹೊರ ಹೋದ ಬಳಿಕವೂ ನಿಮ್ಮ ಜೊತೆ ಮಾತಾಡಲ್ಲ ಎಂಬ ಮಾತು ಭವ್ಯಾ ಗೌಡ ಅವರಿಂದ ಬಂದಿದೆ.

ಬಿಗ್ ​ಬಾಸ್ ಶೋ​ಗೆ ಬರುವ ಮುನ್ನವೇ ಐಶ್ವರ್ಯಾ ಹಾಗೂ ಭವ್ಯಾ ಗೌಡ ಒಳ್ಳೆಯ ಸ್ನೇಹಿತರಾಗಿದ್ದರು. ಇಬ್ಬರೂ ಕಲರ್ಸ್​ ಕನ್ನಡದ ಧಾರಾವಾಹಿಯಲ್ಲಿ ಒಟ್ಟಾಗಿ ನಟಿಸಿದ್ದರು. ಆದರೀಗ ಈಗ ಭವ್ಯಾ ಗೌಡ ಹಾಗೂ ಐಶ್ವರ್ಯಾ ಮಧ್ಯೆ ಕಿತ್ತಾಟ ನಡೆದಿದೆ. ಇದರಿಂದ ಇಬ್ಬರ ಗೆಳೆತನ ಕೂಡ ಕೊನೆಯಾಗಿದೆ.

ಬಿಗ್ ಬಾಸ್ ಮನೆಯಲ್ಲಿ ಇದ್ದಾಗಲೂ ಹೊರ ಹೋದ ಬಳಿಕವೂ ಐಶ್ವರ್ಯಾ ಜೊತೆ ಮಾತನಾಡಲ್ಲ ಎಂದು ಭವ್ಯಾ ಹೇಳಿದ್ದಾರೆ. ನಾಮಿನೇಷ್ ಪ್ರಕ್ರಿಯೆ ವೇಳೆ ಭವ್ಯಾ ಗೌಡ, ಐಶ್ವರ್ಯ ಅವರನ್ನು ನಾಮಿನೇಟ್ ಮಾಡಿದ್ದಾರೆ. ನಾಮಿನೇಟ್ ಮಾಡೋವಾಗ ತುಂಬಾ ವೈಯಕ್ತಿಕವಾಗಿ ತೆಗೆದುಕೊಳ್ಳುತ್ತಾರೆ. ವ್ಯಕ್ತಿತ್ವದ ಬಗ್ಗೆ ಮಾತಾಡಿದಿರಿ, ಮೊದಲು ನಿಮ್ಮ ವ್ಯಕ್ತಿತ್ವ ಏನು ಅನ್ನೋದನ್ನು ನೋಡಿಕೊಳ್ಳಿ. ಬೇರೆಯವರ ವಿಚಾರದಲ್ಲಿ ಮೂಗು ತೂರಿಸೋಕೆ ಹೋಗಬೇಡಿ. ಬಿಗ್ ಬಾಸ್ ಮನೆಯಲ್ಲಿ ಇದ್ದಾಗಲೂ ಹೊರ ಹೋದ ಬಳಿಕವೂ ನಿಮ್ಮ ಜೊತೆ ಮಾತನಾಡಲ್ಲ ಎಂದು ನೇರವಾಗಿ ಹೇಳಿದ್ದಾರೆ.

ಇಬ್ಬರು ಬಿಗ್​ಬಾಸ್​ ಮನೆಯಲ್ಲಿ ಪದೇ ಪದೇ ಒಂದಲ್ಲಾ ಒಂದು ವಿಚಾರಕ್ಕೆ ಗಲಾಟೆ ಮಾಡಿಕೊಳ್ಳುತ್ತಲೇ ಇದ್ದರು. ಆದರೆ ಈ ಬಾರಿ ಭವ್ಯಾ ಗೌಡ ನೇರವಾಗಿ ಎಲ್ಲವನ್ನೂ ಹೇಳಿಬಿಟ್ಟಿದ್ದಾರೆ. ಆದರೆ, ಐಶ್ವರ್ಯ ಅವರು ಇದಾದ ಬಳಿಕವೂ ಭವ್ಯಾ ಅವರನ್ನು ಮಾತನಾಡಿಸಿದ್ದಾರೆ. ಇದನ್ನು ಸ್ವತಃ ಭವ್ಯಾ ಅವರೇ ತ್ರಿವಿಕ್ರಮ್ ಬಳಿ ಹೇಳಿಕೊಂಡಿದ್ದಾರೆ. ಐಶ್ವರ್ಯ ಗುಡ್ ನೈಟ್, ಗುಡ್ ಮಾರ್ನಿಂಗ್ ಹೇಳುತ್ತಾಳೆ, ನನಗೆ ಅವಳ ಜೊತೆ ಹೇಗೆ ಮಾತನಾಡ ಬೇಕು ಅಂತನೇ ಗೊತ್ತಾಗಲ್ಲ ಎಂದು ಹೇಳಿದ್ದಾರೆ.

BBK 11: ಈ ವೀಕೆಂಡ್ ಸುದೀಪ್ ಬರ್ತಾರ, ಇಲ್ವಾ?: ಇಲ್ಲಿದೆ ನೋಡಿ ಮಾಹಿತಿ