ಬಿಗ್ ಬಾಸ್ ಕನ್ನಡ ಸೀಸನ್ 11 (Bigg Boss Kannada 11) ಅಂತಿಮ ಘಟ್ಟದತ್ತ ಸಾಗುತ್ತಿದೆ. ಇನ್ನೇನು ಎರಡು ವಾರಗಳಲ್ಲಿ ಶೋ ಮುಕ್ತಾಯಗೊಳ್ಳಲಿದ್ದು, ಗ್ರ್ಯಾಂಡ್ ಫಿನಾಲೆಗೆ ವೇದಿಕೆ ಸಜ್ಜಾಗುತ್ತಿದೆ. ಇದರ ನಡುವೆ ಕಳೆದ ವಾರ ಚೈತ್ರಾ ಕುಂದಾಪುರ ದೊಡ್ಮನೆಯಿಂದ ಔಟ್ ಆಗಿ ಆಚೆ ಬಂದಿದ್ದಾರೆ. ಸದ್ಯ ಮನೆಯಲ್ಲಿ ಎಂಟು ಮಂದಿ ಇದ್ದಾರಷ್ಟೆ. ಹೀಗಾಗಿ ಈ ವಾರ ಟ್ವಿಸ್ಟ್-ಟರ್ನ್ಗಳ ಜೊತೆ ಟಾಸ್ಕ್ಗಳ ಕಾವು ಮತ್ತಷ್ಟು ಏರಲಿದೆ.
ವಾರದ ಮೊದಲ ದಿನವೇ ಬಿಗ್ ಬಾಸ್ ದೊಡ್ಡ ಘೋಷಣೆ ಮಾಡಿದ್ದಾರೆ. ಈ ವಾರ ಮಿಡ್ ವೀಕ್ ಎಲಿಮಿನೇಷನ್ ಇರಲಿದೆ. ಟಾಸ್ಕ್ ಗೆಲ್ಲುವ ಸ್ಪರ್ಧಿ ಎಲಿಮಿನೇಷನ್ ತೂಗುಗತ್ತಿಯಿಂದ ಪಾರಾಗಲಿದ್ದಾರೆ ಎಂದು ಬಿಗ್ ಬಾಸ್ ಹೇಳಿದ್ದಾರೆ. ಹೀಗಾಗಿ ಸ್ಪರ್ಧಿಗಳು ಟಾಸ್ಕ್ಗಳನ್ನು ಗೆಲ್ಲಲೇಬೇಕಾದ ಇಕ್ಕಟ್ಟಿಗೆ ಸಿಲುಕಿದ್ದಾರೆ. ಜಿದ್ದಾಜಿದ್ದಿನ ಪೈಪೋಟಿ ಶುರುವಾಗಿದೆ. ಈ ನಡುವೆ ಮೋಕ್ಷಿತಾ ಹಾಗೂ ಭವ್ಯಾ ಗೌಡ ಆಕ್ಷೇಪಾರ್ಹ ಪ್ಲಾನ್ ಒಂದನ್ನು ಮಾಡಿ ಸಿಕ್ಕಿಬಿದ್ದಿದ್ದಾರೆ.
ರಜತ್ ಅವರನ್ನು ಟಾಸ್ಕ್ನಿಂದ ಹೊರಗಿಡಲು ಭವ್ಯಾ-ಮೋಕ್ಷಿ ಸ್ಕೆಚ್ ಹಾಕಿದ್ದಾರೆ. ಹೆಚ್ಚು ಮರದ ತುಂಡುಗಳನ್ನು ನೆಟ್ನೊಳಗೆ ಹಾಕಬೇಕು. ಯಾರ ಭಾವಚಿತ್ರದ ನೆಟ್ನಲ್ಲಿ ಹೆಚ್ಚು ಮರದ ತುಂಡುಗಳಿವೆಯೋ ಅವರು ಟಾಸ್ಕ್ನಿಂದ ಹೊರ ಉಳಿಯುತ್ತಾರೆಂದು ಬಿಗ್ ಬಾಸ್ ಟಾಸ್ಕ್ ನಿಯಮಗಳನ್ನು ತಿಳಿಸಿದ್ದಾರೆ. ಅಂತೆಯೇ ರಜತ್ ಅವರ ಫೋಟೋ ಇರುವ ನೆಟ್ಗೆ ಇವರಿಬ್ಬರು ಪ್ಲ್ಯಾನ್ ಮಾಡಿದಂತೆ ಮರದ ತುಂಡನ್ನು ಎಸೆದಿದ್ದಾರೆ.
ಇವರಿಬ್ಬರ ಗೇಮ್ ಪ್ಲ್ಯಾನ್ ಅನ್ನು ಅರಿತ ರಜತ್ ಟಾಸ್ಕ್ ಮುಗಿದ ಬಳಿಕ ಅಸಮಾಧಾನಗೊಂಡಿದ್ದಾರೆ. ನೀವಿಬ್ಬರು ಏನು ಮಾತನಾಡಿಕೊಂಡಿದ್ರಿ ಅಂತಾ ನನಗೆ ಚೆನ್ನಾಗಿ ಗೊತ್ತಿತ್ತು. ಮೋಕ್ಷಿತಾ ನಿಮ್ಮಿಂದ ನಾನು ಇದನ್ನು ನಿರೀಕ್ಷೆ ಮಾಡಿರಲಿಲ್ಲ ಎಂದು ಬೇಸರದಿಂದ ಹೇಳಿದ್ದಾರೆ. ಅಲ್ಲದೇ ತ್ರಿವಿಕ್ರಂ ಕೂಡ ಮೋಕ್ಷಿತಾ ಮೇಲೆ ಗರಂ ಆಗಿದ್ದು, ಟಿಕೆಟ್ ಟು ಫಿನಾಲೆಗೆ ಹೋಗಬಾರದು ಎಂದು ನೀವು ಭವ್ಯ ಹೆಸರು ತೆಗೆದುಕೊಳ್ತೀರಿ. ನಾಮಿನೇಷನ್ನಿಂದ ದೂರ ಇರಬೇಕು ಅನ್ಕೊಂಡು ನೀವು ಅದೇ ಭವ್ಯ ಜೊತೆ ಸೇರಿಕೊಂಡು ಆಡ್ತೀರಿ ಎಂದು ಹೇಳಿದ್ದಾರೆ.
ನೀಯತ್ತಾಗೆ ಆಡಿದ್ದು ನಾವು ಅಂತಾ ಮೋಕ್ಷಿತಾ ತಿಳಿಸಿದ್ದು, ಸಮರ್ಥನೆ ಬೇಡ, ನಿನ್ ಮನ್ಸಿಗೆ ಗೊತ್ತು ಸಾಕು ಎಂದು ರಜತ್ ತಿಳಿಸಿದ್ದಾರೆ. ಇದನ್ನು ಕಂಡ ವೀಕ್ಷಕರು ಭವ್ಯಾ ಮೋಸದಾಟ ಆಡಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಹೇಳಿಕೊಳ್ಳುತ್ತಿದ್ದಾರೆ. ಒಟ್ಟಾರೆ ಬಿಗ್ ಬಾಸ್ ಫಿನಾಲೆಗೆ ಎರಡು ವಾರ ಇರುವಾಗ ಫ್ರೆಂಡ್ಶಿಪ್ ಅನ್ನೆಲ್ಲ ಗಂಟು-ಮೂಟೆ ಕಟ್ಟಿ ಗೆಲುವಿಗಾಗಿ ಸ್ಪರ್ಧಿಗಳು ನಾನಾ ಮಾರ್ಗ ಹುಡುಕುತ್ತಿದ್ದಾರೆ.
BBK 11: ನಾನು ಆಟ ಶುರು ಮಾಡಿ ಬಹಳ ದಿನ ಆಯ್ತು: ಹನುಮಂತನ ಮಾತಿಗೆ ಕಿಚ್ಚ ಫಿದಾ, ಮನೆಮಂದಿ ಶಾಕ್