Wednesday, 11th December 2024

Prashanth Sambargi: ಲಾಯರ್ ಜಗದೀಶ್ ಬಗ್ಗೆ ಫೇಸ್​ಬುಕ್​ನಲ್ಲಿ ಬಾಂಬ್ ಸಿಡಿಸಿದ ಪ್ರಶಾಂತ್ ಸಂಬರ್ಗಿ

Prashanth Sambargi vs Lawyer Jagadish

ಬಿಗ್ ಬಾಸ್ ಕನ್ನಡ ಸೀಸನ್ 11 (Bigg Boss Kannada 11) ರೋಚಕತೆ ಪಡೆಯುತ್ತಿದೆ. ಬಿಗ್ ಬಾಸ್​ಗೆನೇ ಚಾಲೆಂಜ್ ಹಾಕಿರುವ ಲಾಯರ್ ಜಗದೀಶ್ (Lawyer Jagadish) ವಿರುದ್ಧ ಇಡೀ ಮನೆ ತಿರುಗಿ ನಿಂತಿದೆ. ಮನೆಯೊಳಗೆ ಸಖತ್ ಸೌಂಡ್ ಮಾಡುತ್ತಿರುವ ಜಗದೀಶ್ ಇದೀಗ ಮನೆಯ ಹೊರಗಡೆ ಕೂಡ ಸುದ್ದಿಯಾಗಿದ್ದಾರೆ. ಇವರ ಕುರಿತು ಸಾಮಾಜಿಕ ಹೋರಾಟಗಾರ ಮತ್ತು ಮಾಜಿ ಬಿಗ್ ಬಾಸ್ ಸ್ಪರ್ಧಿ ಪ್ರಶಾಂತ್ ಸಂಬರ್ಗಿ ಫೇಸ್​ಬುಕ್​ನಲ್ಲಿ ಶಾಕಿಂಗ್ ವಿಚಾರ ಹಂಚಿಕೊಂಡಿದ್ದಾರೆ.

ಬಿಗ್ ಬಾಸ್​ಗೆ ಬರುವ ಮುನ್ನ ಕಾಂಟ್ರವರ್ಸಿ ಮೂಲಕವೇ ಹೆಚ್ಚು ಸುದ್ದಿಯಾಗಿದ್ದ ಲಾಯರ್ ಜಗದೀಶ್ ಸೋಷಿಯಲ್ ಮೀಡಿಯಾದಲ್ಲಿ ಲೈವ್ ಬಂದು ನ್ಯಾಯ-ನೀತಿಯ ಕುರಿತು ಮಾತನಾಡುತ್ತಿದ್ದರು. ಆದರೀಗ ಜಗದೀಶ್ ಅವರ ಕಾನೂನು ಪದವಿ ಹಿಂತೆಗೆದುಕೊಳ್ಳಲಾಗಿದೆ ಎಂಬ ಸುದ್ದಿ ಹರಿದಾಡುತ್ತಿದೆ. ಈ ಕುರಿತು ಪ್ರಶಾಂತ್ ಸಂಬರ್ಗಿ ಫೇಸ್​ಬುಕ್​ನಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ.

ಪ್ರಶಾಂತ್ ಸಂಬರ್ಗಿ ಪೋಸ್ಟ್​ನಲ್ಲಿ ಏನಿದೆ?:

‘‘ಬಿಗ್ ಬಾಸ್ ಜಗದೀಶನ ಲಾ ಡಿಗ್ರಿ ಕ್ಯಾನ್ಸಲ್ ಆಗಿದೆ. ಆತನ 2nd PUC ಮಾರ್ಕ್ಸ್ ಕಾರ್ಡ್ ನಕಲಿ ಆಗಿರುವುದರಿಂದ, ನಂತರದ ಡಿಗ್ರಿಗಳು (ಕಾನೂನು ಡಿಗ್ರಿ ಸೇರಿ) ಮಾನ್ಯವಲ್ಲದಿದ್ದುದರಿಂದ ಆತನ ಸನ್ನದ್ದು ವಾಪಾಸ್ ಕೊಡುವಂತೆ ಬಾರ್ ಕೌನ್ಸಿಲ್ ಆದೇಶ ನೀಡಿದೆ. ಇವರನ್ನು ಲಾಯರ್ ಎಂದು ಕರೆಯಬೇಡಿ ಅದು ವಕೀಲರಿಗೆ ಮಾಡುವ ಅವಮಾನ,’’ ಎಂದು ಬರೆದುಕೊಂಡು ಫೋಟೋ ಹಂಚಿಕೊಂಡಿದ್ದಾರೆ.

ಬಿಗ್ ಬಾಸ್​ಗೇ ಧಮ್ಕಿ ಹಾಕಿದ ಜಗದೀಶ್:

ಬಿಗ್ ಬಾಸ್ ಮನೆಯಲ್ಲಿ ಜಗದೀಶ್ ಆವಾಜ್ ಇಂದು ನಾಲ್ಕನೇ ದಿನ ಕೂಡ ಮುಂದುವರೆದಂತಿದೆ. ಕಲರ್ಸ್ ಕನ್ನಡ ನಾಲ್ಕನೇ ದಿನದ ಪ್ರೊಮೋ ಬಿಟ್ಟಿದ್ದು, ಇದರಲ್ಲಿ ಲಾಯರ್ ಬಿಗ್ ಬಾಸ್​ಗೆನೇ ಧಮ್ಕಿ ಹಾಕಿದ್ದಾರೆ. ‘ನನಗೆ ಇಲ್ಲಿ ಇರಲು ಇಷ್ಟ ಆಗುತ್ತಿಲ್ಲ, ನಾನು ಇಲ್ಲಿಂದ ಹೊರಗಡೆ ಹೋಗುತ್ತೇನೆ. ನಾನು ಮನಸ್ಸು ಮಾಡಿದ್ರೆ ಇಲ್ಲಿ ಹೆಲಿಕಾಫ್ಟರ್ ಕೂಡ ತರಿಸ್ತೇನೆ, ಅಷ್ಟು ತಾಕತ್ತಿದೆ. ಹೊರಗಡೆ ನೀವು ಏನೆಲ್ಲ ಮಾಫಿಯ ನಡೆಸ್ತಾ ಇದ್ದೀರಾ ಅದೆಲ್ಲ ಎಕ್ಸ್ಪೋಸ್ ಆಗುತ್ತೆ. ಈ ಪ್ರೊಗ್ರಾಂ ಹಾಳು ಮಾಡಿಲ್ಲ ನನ್ನ ಹೆಸರು ಬೇರೆ ಇಡಿ. ಯಾವನೂ ಕಾಲಿಡಬಾರದು ಇಲ್ಲಿಗೆ. ನಮ್ಮನ್ನ ಎದುರು ಹಾಕಿಕೊಂಡು ಕರ್ನಾಟಕದಲ್ಲಿ ಬಿಗ್ ಬಾಸ್ ಓಡಿಸ್ತೀರಾ?’ ಎಂದು ಜಗದೀಶ್ ಅವರು ಆಡಿರುವ ಮಾತುಗಳು ಪ್ರೊಮೋದಲ್ಲಿದೆ.

BBK 11: ಇಲ್ಲಿ​ಗೆ ಯಾವನೂ ಕಾಲಿಡಬಾರದು ಹಾಗೇ ಮಾಡ್ತೀನಿ: ಬಿಗ್ ಬಾಸ್​ಗೇ ಧಮ್ಕಿ ಹಾಕಿದ ಲಾಯರ್ ಜಗದೀಶ್