Saturday, 14th December 2024

BBK 11: ಇಲ್ಲಿ​ಗೆ ಯಾವನೂ ಕಾಲಿಡಬಾರದು ಹಾಗೇ ಮಾಡ್ತೀನಿ: ಬಿಗ್ ಬಾಸ್​ಗೇ ಧಮ್ಕಿ ಹಾಕಿದ ಲಾಯರ್ ಜಗದೀಶ್

Jagadish Bigg Boss

ಬಿಗ್ ಬಾಸ್ ಕನ್ನಡ ಸೀಸನ್ 11 (Bigg Boss Kannada 11) ಶುರುವಾಗಿ ಮೂರು ದಿನ ಕಳೆದಿದ್ದು, ಈ ಮೂರು ದಿನ ಕೂಡ ಬರೀ ಜಗಳಗಳೇ ನಡೆದಿವೆ. ಅದರಲ್ಲೂ ಬುಧವಾರ ಮನೆ ರಣರಂಗವಾಗಿದೆ. ಲಾಯರ್ ಜಗದೀಶ್ (Lawyer Jagadish) ಇಡೀ ಮನೆಯನ್ನು ಎದುರು ಹಾಕಿಕೊಂಡಿದ್ದಾರೆ. ಒಂದಲ್ಲ ಒಂದು ವಿಚಾರಕ್ಕೆ ಪ್ರತಿಯೊಬ್ಬರ ಬಳಿ ಕುಂತಲ್ಲಿ-ನಿಂತಲ್ಲಿ ಜಗಳವಾಡುತ್ತಿದ್ದಾರೆ. ಜಗದೀಶ್ ಜಗಳ ಇಂದು ಕೂಡ ಮುಂದುವರೆದಂತೆ ಕಾಣುತ್ತಿದೆ. ಕಲರ್ಸ್ ಕನ್ನಡ ನಾಲ್ಕನೇ ದಿನದ ಪ್ರೊಮೋ ಬಿಟ್ಟಿದ್ದು, ಇದರಲ್ಲಿ ಲಾಯರ್ ಬಿಗ್ ಬಾಸ್​ಗೇ ಧಮ್ಕಿ ಹಾಕಿದ್ದಾರೆ.

ಲಾಯರ್ ಜಗದೀಶ್ ಏನು ಹೇಳಿದ್ದಾರೆ?

‘ನನಗೆ ಇಲ್ಲಿ ಇರಲು ಇಷ್ಟ ಆಗುತ್ತಿಲ್ಲ, ನಾನು ಇಲ್ಲಿಂದ ಹೊರಗಡೆ ಹೋಗುತ್ತೇನೆ. ನಾನು ಮನಸ್ಸು ಮಾಡಿದ್ರೆ ಇಲ್ಲಿ ಹೆಲಿಕಾಫ್ಟರ್ ಕೂಡ ತರಿಸ್ತೇನೆ, ಅಷ್ಟು ತಾಕತ್ತಿದೆ. ಹೊರಗಡೆ ನೀವು ಏನೆಲ್ಲ ಮಾಫಿಯ ನಡೆಸ್ತಾ ಇದ್ದೀರಾ ಅದೆಲ್ಲ ಎಕ್ಸ್​ಪೋಸ್ ಆಗುತ್ತೆ. ಈ ಪ್ರೊಗ್ರಾಂ ಹಾಳು ಮಾಡಿಲ್ಲ ನನ್ನ ಹೆಸರು ಬೇರೆ ಇಡಿ. ಯಾವನೂ ಕಾಲಿಡಬಾರದು ಇಲ್ಲಿಗೆ. ಬಿಗ್ ಬಾಸ್ ನಿಮ್ಮನ್ನು ಎಕ್ಸ್​ಪೋಸ್ ಮಾಡುತ್ತೇನೆ. ನಮ್ಮನ್ನ ಎದುರು ಹಾಕಿಕೊಂಡು ಕರ್ನಾಟಕದಲ್ಲಿ ಬಿಗ್ ಬಾಸ್ ಓಡಿಸ್ತೀರಾ?’ ಎಂದು ಜಗದೀಶ್ ಅವರು ಆಡಿರುವ ಮಾತುಗಳು ಪ್ರೊಮೋದಲ್ಲಿದೆ.

ಜಗದೀಶ್ vs ಮಾನಸ-ಮಂಜು

ಬಿಗ್ ಬಾಸ್ ಮನೆಯಲ್ಲಿ ಮೂರನೇ ದಿನ ಎಲಿಮಿನೇಷನ್​ನಿಂದ ಪಾರಾಗಲು ನಾಮಿನೇಟ್ ಆಗಿದ್ದ ಸದಸ್ಯರಿಗೆ ಟಾಸ್ಕ್ ನೀಡಲಾಗಿತ್ತು. ಟಾಸ್ಕ್ ನಡೆಯುವ ವೇಳೆ ಉಸ್ತುವಾರಿ ಧನರಾಜ್ ಆಚಾರ್ ಅವರನ್ನು ಜಗದೀಶ್ ಬೇಕೆಂದೇ ಟ್ರಿಗರ್ ಮಾಡಿ ಗಲಾಟೆ ಶುರುಮಾಡಿಕೊಂಡಿದ್ದರು. ‘ಇಟ್ಟುದ್ದ ಇದ್ದಾನೆ, ಅವನು ಕಾಮಿಡಿ ಪೀಸ್’ ಎಂದು ಧನರಾಜ್​ಗೆ ಜಗದೀಶ್ ಹೇಳಿದ್ದಾರೆ. ಇದು ಮಾನಸ ಅವರಿಗೆ ನೋವುಂಟು ಮಾಡಿದೆ. ‘ಕಾಮಿಡ್ ಪೀಸ್ ಅಂದ್ರೆ ವೇಸ್ಟ್ ಅಲ್ಲ, ನೂರು ಜನರನ್ನು ನಗಿಸ್ತಾರೆ, ಸಾವಿರ ಟೆನ್ಶನ್ ಇರುತ್ತೆ’ ಎಂದಿದ್ದಾರೆ. ಇದಕ್ಕೆ ಜಗದೀಶ್ ಅವರು ಏನು ಟೆನ್ಶನ್, ಏನು ಟೆನ್ಶನ್, ನಿನ್ನಾಟ ನಾನು ನೋಡಿದ್ದೇನೆ ಹೋಗಮ್ಮ ನೀನು, ಯಾವ ಸೀಮೆ ಹೆಂಗಸು ಅವಳು’ ಎಂದು ಮತ್ತಷ್ಟು ರೇಗಾಡಿದ್ದಾರೆ.

ಜಗದೀಶ್ ಅವರ ‘ಯಾವ ಸೀಮೆ ಹೆಂಗಸು ಅವಳು’ ಎಂಬ ಪದ ಬಳಕೆ ಕೇಳಿ ಇಡೀ ಮನೆ ಇವರ ವಿರುದ್ಧ ನಿಂತಿದೆ. ‘ಹೆಂಗಸರಿಗೆ ಗೌರವ ಕೊಡಿ. ಒಂದು ಹೆಂಗಸಿಗೆ ಸರಿಯಾಗಿ ಮರಿಯಾದೆ ಕೊಟ್ಟು ಮಾತಾಡಿ, ಇದು ನಮ್ ಮನೆ, ನಮ್ಮ ಮನೆಯ ಹೆಂಗಸಿನ ಬಗ್ಗೆ ಮಾತಾಡಿದ್ರೆ ನಾವೂ ಮಾತಾಡ್ತೀವಿ. ನೀವು ಹೆಂಗಸರ ಬಗ್ಗೆ ಮಾತನಾಡಬಾರದು’ ಎಂದು ಉಗ್ರಂ ಮಂಜು ನೇರವಾಗಿ ಹೇಳಿದ್ದಾರೆ.

Ugram Manju: ಟಾಸ್ಕ್​ಗು ಸೈ-ನಗಿಸೋಕು ಜೈ: ನಾಮಿನೇಟ್ ಆಗಿದ್ದ ಉಗ್ರಂ ಮಂಜು ಈಗ ಸೇಫ್