Sunday, 15th December 2024

BBK 11: ನೀನು ಯಾವನೋ: ಬಿಗ್ ಬಾಸ್ ಮನೆ ಮತ್ತೆ ರಣರಂಗ, ಏಕವಚನದಲ್ಲಿ ಜಗದೀಶ್ ಬೆವರಿಳಿಸಿದ ಕ್ಯಾಪ್ಟನ್ ಹಂಸ

Jagadish vs Hamsa

ಬಿಗ್ ಬಾಸ್ ಕನ್ನಡ ಸೀಸನ್ 11 (Bigg Boss Kannada) ಈ ಬಾರಿ ಹೆಚ್ಚು ಜಗಳಗಳಿಂದಲೇ ಸುದ್ದಿ ಆಗುತ್ತಿದೆ. ಶೋ ಪ್ರಾರಂಭವಾಗಿ ಒಂದು ವಾರ ಕಳೆದರೂ ಸ್ಪರ್ಧಿಗಳು ಇನ್ನೂ ಪರಸ್ಪರ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಂಡಿಲ್ಲ. ಪ್ರತಿದಿನ ಒಂದಲ್ಲ ಒಂದು ವಿಚಾರಕ್ಕೆ ಜಗಳಗಳು ನಡೆಯುತ್ತಲೇ ಇದೆ. ಎರಡನೇ ವಾರಕ್ಕೆ ಕ್ಯಾಪ್ಟನ್ ಬಂದಿದ್ದರೂ ಮನೆಯಲ್ಲಿ ಫೈಟ್ ಕಡಿಮೆ ಆಗಿಲ್ಲ. ಈ ಬಾರಿ ಸ್ವತಃ ಕ್ಯಾಪ್ಟನ್ ಹಂಸ ಅವರೇ ತಾಳ್ಮೆ ಕಳೆದುಕೊಂಡು ಜಗದೀಶ್ ಮೇಲೆ ರೇಗಾಡಿದ್ದಾರೆ.

ಮೊದಲ ವಾರ ಸ್ವರ್ಗ ಮತ್ತು ನರಕ ವಾಸಿಗಳ ಎಲ್ಲ ಸರ್ಧಿಗಳ ಕೆಂಗಣ್ಣಿಗೆ ಗುರಿಯಾಗಿದ್ದ ಜಗದೀಶ್ ಎರಡನೇ ವಾರ ಕೂಡ ಮತ್ತದೆ ತಪ್ಪು ಮಾಡುತ್ತಿದ್ದಾರೆ. ಅನಗತ್ಯವಾಗಿ ಮನೆ ಮಂದಿಯನ್ನು ಕೆರಳಿಸುತ್ತಿದ್ದಾರೆ. ಈ ಬಾರಿ ಬಲೆಗೆ ಬಿದ್ದಿದ್ದು ಕ್ಯಾಪ್ಟನ್ ಹಂಸ. ಆದರೆ, ಬಾಯಿ ಮುಚ್ಚಿ ಕೂರದ ಹಂಸ ಅವರು ಜಗದೀಶ್ ಅವರಿಗೆ ಸರಿಯಾಗೇ ಕ್ಲಾಸ್ ತೆಗೆದುಕೊಂಡಿದ್ದಾರೆ.

ನರಕಕ್ಕೆ ಶಿಫ್ಟ್ ಆಗಿರುವ ಜಗದೀಶ್ ಅವರು ಹಂಸ ಬಳಿ ‘ನನಗೆ ತಲೆ ನೋವು, ಮಾತ್ರೆ ಬೇಕು’ ಎಂದು ಕೇಳಿದ್ದಾರೆ. ಇದಕ್ಕೆ ಕ್ಯಾಪ್ಟನ್ ನೀವು ಕ್ಯಾಮೆರಾ ಮುಂದೆ ಬಿಗ್​ ಬಾಸ್​ನ ಕೇಳಿ ಎಂದಿದ್ದಾರೆ. ಆಗ ಜಗದೀಶ್ ಅವರು, ನೀವು ಯಾಕೆ ಕ್ಯಾಪ್ಟನ್ ಆಗಿದ್ದೀರಾ? ಆಗಲ್ಲ ಅಂತ ಬರೆದುಕೊಟ್ಟು ಹೋಗಿ ಎಂದು ​ ಹೇಳಿದ್ದಾರೆ. ಜಗದೀಶ್​ ಮಾತಿಗೆ ಹಂಸ ಕೂಡ ಕೆರಳಿದ್ದಾರೆ. ಕೊಡೋಕೆ ಆಗಲ್ಲ ಏನ್ ಮಾಡ್ತೀರಾ? ಎಂದಿದ್ದಾರೆ. ಇದಕ್ಕೆ ಜಗದೀಶ್ ಅವರು ನೀನೇನು ಡಾನ್ ಅಲ್ಲ, ಡಾನ್​ಗಳನ್ನ ನಾನು ತುಂಬಾ ನೋಡಿದ್ದೇನೆ ಎಂದರು. ನೀವು ಕೂಡ ಡಾನ್ ಅಲ್ಲ ಎಂದು ಹಂಸ ಸರಿಯಾಗಿ ತಿರುಗೇಟು ನೀಡಿದ್ದಾರೆ.

ನೀವು ಹೇಳಿದ್ದನ್ನು ತರಿಸಿಕೊಡಲು ಆಗಲ್ಲ ಎಂದು ಜಗದೀಶ್​​ಗೆ ಹಂಸ ಅವರು ನೇರವಾಗಿ ಹೇಳಿದ್ದಾರೆ. ಇಲ್ಲಿಗೆ ಸುಮ್ಮನಾಗದ ಜಗದೀಶ್, ನಿನಗೆ ಆ ಕೆಪಾಸಿಟಿ ಇಲ್ಲ ಅಂದ್ರೆ ಬಿಗ್ ಬಾಸ್​ಗೆ ಬರೆದುಕೊಟ್ಟು ಹೊರಗೆ ಹೋಗಿ ಎಂದಿದ್ದಾರೆ. ಜಗದೀಶ್ ಮಾತಿಂದ ಮತ್ತಷ್ಟು ಕೋಪಗೊಂಡ ಹಂಸ, ನೀನ್ ಯಾವನೋ ಹೇಳೋಕೆ ಎಂದು ಏಕವಚನದಲ್ಲೇ ಜಗಳವಾಡಿದ್ದಾರೆ. ಹೀಗೆ ಬಿಗ್ ಬಾಸ್ ಎರಡನೇ ವಾರ ಕೂಡ ಹೊತ್ತಿ ಇರಿಯುವಂತೆ ಕಾಣುತ್ತಿದೆ.

‘ಈ ವಾರದ ಇನ್ನೂ ಖರಾಬ್ ಆಗಿರುತ್ತೆ’:

ನರಕಕ್ಕೆ ಬಂದಿರುವ ಜಗದೀಶ್ ಅವರು ಇಲ್ಲೂ ತಮ್ಮ ಗೇಮ್ ಪ್ಲಾನ್ ಮುಂದುವರೆಸಿದ್ದಾರೆ. ಕ್ಯಾಪ್ಟನ್ ಹಂಸ ಅವರ ವಿಶೇಷ ಅಧಿಕಾರದ ಮೇರೆಗೆ ನರಕದ ಸ್ಪರ್ಧಿ ರಂಜಿತ್ ಕುಮಾರ್ ಸ್ವರ್ಗಕ್ಕೆ ಬಂದಿದ್ದು, ಸ್ವರ್ಗದಲ್ಲಿದ್ದ ಜಗದೀಶ್ ನರಕಕ್ಕೆ ತೆರಳಿದ್ದಾರೆ. ನರಕದಲ್ಲಿ ಮೋಕ್ಷಿತಾ ಪೈ ಮತ್ತು ಮಾನಸಾ ಜೊತೆ ಮಾತನಾಡುತ್ತಾ ಜಗದೀಶ್ ಅವರು ‘ಈ ವಾರದ ಕಂಟೆಂಟ್ ಇನ್ನೂ ಖರಾಬ್ ಆಗಿರುತ್ತೆ’ ಎಂದು ಹೇಳಿದ್ದಾರೆ. ಈ ಮೂಲಕ ಈ ವಾರವೂ ಜಗದೀಶ್ ಅವರು ಮನೆ ಮಂದಿಯೊಂದಿಗೆ ಜಗಳ ಆಡುವುದು ಫಿಕ್ಸ್.

Bigg Boss Kannada: ಊಟಕ್ಕಾಗಿ ಟಾಸ್ಕ್: ಕ್ಯಾಮೆರಾ ಮುಂದೆ ಬಂದು ಕಣ್ಣೀರಿಟ್ಟ ಸ್ಪರ್ಧಿಗಳು