Thursday, 12th December 2024

Bigg Boss Kannada: ಊಟಕ್ಕಾಗಿ ಟಾಸ್ಕ್: ಕ್ಯಾಮೆರಾ ಮುಂದೆ ಬಂದು ಕಣ್ಣೀರಿಟ್ಟ ಸ್ಪರ್ಧಿಗಳು

BBK 11

ಕಿಚ್ಚನ ಮೊದಲ ಪಂಚಾಯಿತಿ ಮುಕ್ತಾಯದ ಬಳಿಕ ಬಿಗ್ ಬಾಸ್ ಕನ್ನಡ ಸೀಸನ್ 11 ರಲ್ಲಿ (Bigg Boss Kannada) ಟಾಸ್ಕ್ ಕಾವು ಏರುತ್ತಿದೆ. ದೊಡ್ಮನೆಯಲ್ಲಿ ಒಂದೊಂದೆ ಟಾಸ್ಕ್ ಶುರುವಾಗುತ್ತಿದೆ. ಮನೆಯಲ್ಲಿನ ಮೂಲ ಸೌಕರ್ಯ ಪಡೆಯಲು ಬಿಗ್ ಬಾಸ್ ಇಂದುಕೂಡ ಸ್ಪರ್ಧಿಗಳಿಗೆ ವಿಶೇಷ ಟಾಸ್ಕ್ ನೀಡಿದ್ದಾರೆ. ಇದು ಸ್ವರ್ಗ -ನರಕದ ಸ್ಪರ್ಧಿಗಳ ನಡುವೆ ನಡೆಯುವ ಆಟವಾಗಿದೆ.

ಬಿಗ್ ಬಾಸ್ ಮನೆ ಮಂದಿಗೆ ಬಾಲ್‌ ಟಾಸ್ಕ್‌ವೊಂದು ನೀಡಿದ್ದಾರೆ. ಈ ಟಾಸ್ಕ್ ಪ್ರಕಾರ ಒಂದು ವೇಳೆ ನರಕವಾಸಿಗಳು ಗೆದ್ದರೆ, ಸ್ವರ್ಗ ನಿವಾಸಿಗಳು ದಿನಕ್ಕೆ ಮೂರು ಬಾರಿ ನರಕ ವಾಸಿಗಳಿಗೆ ಅಡುಗೆ ತಯಾರಿ ಮಾಡಿಕೊಡಬೇಕು. ಬೇಗನೆ ಯಾರು ಟಾಸ್ಕ್ ಮುಗಿಸುತ್ತಾರೊ ಅಂದರೆ ಅತಿ ಕಡಿಮೆ ಸಮಯದಲ್ಲಿ ಚೆಂಡನ್ನು ಅಂತಿಮ ಸ್ಥಾನಕ್ಕೆ ಯಾವ ತ.ಡ ವರ್ಗಾಯಿಸುತ್ತೊ ಅವರು ಗೆಲ್ಲುತ್ತಾರೆ. ಈ ಟಾಸ್ಕ್‌ ಅನ್ನು ಮುಗಿಸಲು ಸ್ವರ್ಗ ನಿವಾಸಿಗಳು 24 ನಿಮಿಷ ತೆಗೆದುಕೊಂಡಿದ್ದಾರೆ. ನರಕ ವಾಸಿಗಳ ಸಮಯ ರಿವೀಲ್ ಆಗಿಲ್ಲ.

ಆದರೆ, ನರಕದಲ್ಲಿರುವ ಮೋಕ್ಷತಾ ಪೈ ಹಾಗೂ ಚೈತ್ರಾ ಕುಂದಾಪುರ ಬಿಗ್ ಬಾಸ್ ಕ್ಯಾಮೆರಾ ಮುಂದೆ ಬಂದು ಕಣ್ಣೀರು ಹಾಕಿದ್ದಾರೆ. ತುಕಾಲಿ ಮಾನಸಾ ಅತ್ತಿದ್ದಾರೆ. ನರಕ ವಾಸಿಗಳು ಈ ಟಾಸ್ಕ್​ನಲ್ಲಿ ಸೋತಿರಬಹುದು ಎಂದು ವೀಕ್ಷಕರು ಹೇಳುತ್ತಿದ್ದಾರೆ. ನರಕದವರು ಈ ಟಾಸ್ಕ್​ ಸೋಲಲು ಚೈತ್ರಾ ಕುಂದಾಪುರ ಅವರೇ ಕಾರಣ ಆದಂತಿದೆ. ಅತ್ತ ಸ್ವರ್ಗ ವಾಸಿಗಳಿಂದ ಉಗ್ರಂ ಮಂಜು ಅವರು ಟಾಸ್ಕ್‌ ಅಚ್ಚುಕಟ್ಟಾಗಿ ನಿಭಾಯಿಸಿದಂತಿದೆ.

ಇನ್ನು ನರಕಕ್ಕೆ ಬಂದಿರುವ ಜಗದೀಶ್ ಅವರು ಇಲ್ಲೂ ತಮ್ಮ ಗೇಮ್ ಪ್ಲಾನ್ ಮುಂದುವರೆಸಿದ್ದಾರೆ. ಕ್ಯಾಪ್ಟನ್ ಹಂಸ ಅವರ ವಿಶೇಷ ಅಧಿಕಾರದ ಮೇರೆಗೆ ನರಕದ ಸ್ಪರ್ಧಿ ರಂಜಿತ್ ಕುಮಾರ್ ಸ್ವರ್ಗಕ್ಕೆ ಬಂದಿದ್ದು, ಸ್ವರ್ಗದಲ್ಲಿದ್ದ ಜಗದೀಶ್ ನರಕಕ್ಕೆ ತೆರಳಿದ್ದಾರೆ. ನರಕದಲ್ಲಿ ಮೋಕ್ಷಿತಾ ಪೈ ಮತ್ತು ಮಾನಸಾ ಜೊತೆ ಮಾತನಾಡುತ್ತಾ ಜಗದೀಶ್ ಅವರು ‘ಈ ವಾರದ ಕಂಟೆಂಟ್ ಇನ್ನೂ ಖರಾಬ್ ಆಗಿರುತ್ತೆ’ ಎಂದು ಹೇಳಿದ್ದಾರೆ.

BBK 11: ಧರ್ಮ-ಐಶ್ವರ್ಯ ಲವ್ ​ಸ್ಟೋರಿಗೆ ಸಿಕ್ತು ಪುಷ್ಟಿ: ಇವರು ಬಿಗ್ ಬಾಸ್ ಮನೆಯ ಮುದ್ದು ಜೋಡಿ ಎಂದ ನೆಟ್ಟಿಗರು