Sunday, 5th January 2025

BBK 11: ಟಿಆರ್​ಪಿಯಲ್ಲಿ ಬಿಗ್ ಬಾಸ್​ಗೆ ಬಿಗ್ ಶಾಕ್: ದಾಖಲೆ ಸೃಷ್ಟಿಸಿದ ‘ಸರಿಗಮಪ’

BBK 11 TRP (8)

ಬಿಗ್ ಬಾಸ್ ಕನ್ನಡ ಸೀಸನ್ 11 (Bigg Boss Kannada 11) ಶತಕದ ದಿನದತ್ತ ಮುನ್ನುಗ್ಗುತ್ತಿದೆ. ಸದ್ಯ ಮಹತ್ವದ ಘಟ್ಟದತ್ತ ತಲುಪಿರುವ ಈ ರಿಯಾಲಿಟಿ ಶೋಗೆ ದೊಡ್ಡ ಆಘಾತ ಉಂಟಾಗಿದೆ. ಇಷ್ಟು ದಿನ ಎಲ್ಲ ಧಾರಾವಾಹಿಯನ್ನು ಹಿಂದಿಕ್ಕಿ ಕನ್ನಡ ನಂಬರ್ ಒನ್ ಶೋ ಆಗಿ ಮೆರೆಯುತ್ತಿದ್ದ ಬಿಗ್ ಬಾಸ್​ಗೆ ಬಿಗ್ ಶಾಕ್ ಆಗಿದೆ. ಟಿಆರ್​ಪಿ ವಿಚಾರದಲ್ಲಿ ಬಿಗ್ ಬಾಸ್ ಅನ್ನು ಝೀ ಕನ್ನಡದ ಸರಿಗಮಪ ಶೋ ಹಿಂದಿಕ್ಕಿ ದಾಖಲೆ ಬರೆದಿದೆ.

ಸದ್ಯ 52ನೇ ವಾರದ ಟಿಆರ್​ಪಿ ಹೊರಬಿದ್ದಿದೆ. ಇದರ ಪ್ರಕಾರ, ಬಿಗ್ ಬಾಸ್​ಗೆ ಗ್ರಾಮಾಂತರ ಹಾಗೂ ನಗರ ಭಾಗದಲ್ಲಿ ವಾರದ ದಿನ 8 ಟಿವಿಆರ್ ಸಿಕ್ಕಿದೆ. ಅದೇ ಕಿಚ್ಚ ಸುದೀಪ್ ಬರುವ ಶನಿವಾರ ವಾರದ ಕತೆ ಕಿಚ್ಚನ ಜೊತೆ ಎಪಿಸೋಡ್​ಗೆ 9.1 ಟಿವಿಆರ್ ಹಾಗೂ ಭಾನುವಾರದ ಸೂಪರ್ ಸಂಡೇ ವಿಥ್ ಸುದೀಪ್ ಎಪಿಸೋಡ್​ಗೆ 10 ಟಿವಿಆರ್​ ಸಿಕ್ಕಿದೆ.

ವಾರಾಂತ್ಯದಲ್ಲಿ ಪಂಚಾಯಿತಿಗೆ ಕಿಚ್ಚ ಸುದೀಪ್ ಬರುವ ಕಾರಣ ಶೋಗೆ ಭರ್ಜರಿ ಟಿಆರ್​ಪಿ ದೊರೆಯುತ್ತಿದೆ. ಈ ಹಿಂದೆ ಎಲ್ಲ ಧಾರಾವಾಹಿಯನ್ನು ಹಿಂದಿಕ್ಕಿ ಇದೇ ನಂಬರ್ ಒನ್ ಶೋ ಆಗಿತ್ತು. ಆದರೀಗ ಅಚ್ಚರಿ ಎಂಬಂತೆ ಬಿಗ್ ಬಾಸ್ ಟಿಆರ್​ಪಿಯನ್ನು ಸರಿಗಮಪ ಹಿಂದಿಕ್ಕಿದೆ. ಸರಿಗಮಪ ಆಡಿಷನ್ ಇತ್ತೀಚೆಗೆ ಪೂರ್ಣಗೊಂಡಿದೆ. ಶನಿವಾರ ಹಾಗೂ ಭಾನುವಾರ ಸಂಜೆ 7.30ರಿಂದ 9 ಗಂಟೆವರೆಗೆ ಈ ಶೋ ಜೀ ಕನ್ನಡದಲ್ಲಿ ಪ್ರಸಾರ ಕಾಣುತ್ತಿದೆ.

ಸರಿಗಮಪದ ಆಡಿಷನ್ ಎಪಿಸೋಡ್ ಉತ್ತಮ ಟಿಆರ್​ಪಿ ಪಡೆದುಕೊಂಡಿದೆ. ನಗರ ಹಾಗೂ ಗ್ರಾಮಾಂತರ ಭಾಗದಲ್ಲಿ 11.1 ಟಿವಿಆರ್ ಹಾಗೂ ಗ್ರಾಮೀಣ ಭಾಗದಲ್ಲಿ 13.1 ಟಿವಿಆರ್ ಈ ಶೋಗೆ ಸಿಕ್ಕಿದೆ. ಈ ಮೂಲಕ ಬಿಗ್ ಬಾಸ್​ನ ಶೋ ಹಿಂದಿಕ್ಕಿದೆ. ಅನುಶ್ರೀ ನಿರೂಪಣೆಯಲ್ಲಿ ಮೂಡಿಬರುತ್ತಿರುವ ಸರಿಗಮಪ ಶೋನಲ್ಲಿ ರಾಜೇಶ್ ಕೃಷ್ಣನ್, ವಿಜಯ್ ಪ್ರಕಾಶ್ ಹಾಗೂ ಅರ್ಜುನ್ ಜನ್ಯ ಜಡ್ಜ್ ಸ್ಥಾನದಲ್ಲಿ ಇದ್ದಾರೆ.

ಇನ್ನು ಧಾರಾವಾಹಿ ವಿಚಾರಕ್ಕೆ ಬರೋದಾದರೆ ಪುಟ್ಟಕ್ಕನ ಮಕ್ಕಳು ಧಾರಾವಾಹಿಗೆ ಮತ್ತದೆ ಬಿಗ್ ಶಾಕ್ ಆಗಿದೆ. ಎರಡನೇ ಸ್ಥಾನಕ್ಕೆ ಕುಸಿದಿದ್ದ ಈ ಧಾರಾವಾಹಿಗೆ ಮತ್ತೊಮ್ಮೆ ಹಿನ್ನಡೆಯಾಗಿದ್ದು, ಇದೀಗ ಮೂರನೇ ಸ್ಥಾನದಲ್ಲಿದೆ. ಸಮಯ ಬದಲಾವಣೆಯ ನಂತರ ಟಿಆರ್​ಪಿ ಕುಸಿಯುತ್ತಾ ಬರುತ್ತಿದೆ. ಝೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಲಕ್ಷ್ಮೀ ನಿವಾಸ ಧಾರಾವಾಹಿ ಮೊದಲ ಸ್ಥಾನ ಕಾಪಾಡಿಕೊಂಡಿದೆ. ಎರಡನೇ ಸ್ಥಾನದಲ್ಲಿ ಅಮೃತಧಾರೆ ಹಾಗೂ ಅಣ್ಣಯ್ಯ ಧಾರಾವಾಹಿಗಳು ಇವೆ. ಶ್ರಾವಣಿ ಸುಬ್ರಮಣ್ಯ ಹಾಗೂ ಭಾಗ್ಯ ಲಕ್ಷ್ಮೀ ಧಾರಾವಾಹಿ ನಾಲ್ಕನೇ ಮತ್ತು ಸ್ಥಾನದಲ್ಲಿದೆ.

BBK 11: ಬಿಗ್ ಬಾಸ್ ಮನೆಯಲ್ಲಿ ಕಿಸ್ ಟಾಸ್ಕ್: ಮುತ್ತುಕೊಟ್ಟು ಸುಸ್ತಾದ ಸ್ಪರ್ಧಿಗಳು