ಬಿಗ್ ಬಾಸ್ ಕನ್ನಡ ಸೀಸನ್ 11 ರಲ್ಲಿ (Bigg Boss Kannada 11) ಒಂಬತ್ತನೇ ವಾರ ಶೋಭಾ ಶೆಟ್ಟಿ ಮನೆಯಿಂದ ಹೊರಹೋದರು. ಎಲಿಮಿನೇಷನ್ನಿಂದ ಪಾರಾದರೂ ತನ್ನ ಸ್ವ-ಇಚ್ಚೆಯ ಮೇರೆಗೆ ಶೋಭಾ ಅವರು ಬಿಗ್ ಬಾಸ್ ತೊರೆದರು. ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಕೊಟ್ಟ ಎರಡೇ ವಾರಕ್ಕೆ ಇವರು ಬಿಗ್ ಬಾಸ್ನಿಂದ ಆಚೆ ಬಂದಿರುವುದು ಎಲ್ಲರೂ ಅಚ್ಚರಿ ಮೂಡಿಸಿತು. ಅನಾರೋಗ್ಯದ ಕಾರಣ ಇವರು ಅರ್ಧಕ್ಕೆ ಶೋನಿಂದ ಹಿಂದೆ ಸರಿದರು.
ದೊಡ್ಮನೆಯಿಂದ ಆಚೆ ಬಂದ ಬೆನ್ನಲ್ಲೇ ಇವರು, ಆಟದ ಮೇಲೆ ಗಮನ ಕೊಡಲು ಆರೋಗ್ಯ ಸಹಕರಿಸುತ್ತಿಲ್ಲ. ಮುನ್ನಡೆಯುವ ಇಚ್ಛೆ ಇದ್ದರೂ ದೇಹ ಮುಂದುವರಿಯಲು ಬಿಡುತ್ತಿಲ್ಲ ಎಂದು ಪೋಸ್ಟ್ ಹಂಚಿಕೊಂಡಿದ್ದರು. ಇದೀಗ ಇವರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಶೋಭಾ ಆಸ್ಪತ್ರೆಯ ಬೆಡ್ ಮೇಲೆ ಕಾಣಿಸಿಕೊಂಡಿದ್ದಾರೆ. ಈ ಬಗ್ಗೆ ಖುದ್ದು ನಟಿ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಆಸ್ಪತ್ರೆಯ ಬೆಡ್ ಮೇಲೆ ಕೈಗೆ ಗ್ಲೂಕೋಸ್ ಹಾಕಿಕೊಂಡಿರೋ ಫೋಟೋವನ್ನು ಸ್ಟೋರಿ ಹಾಕಿಕೊಂಡಿದ್ದಾರೆ.
ನಾನು ಶೀಘ್ರದಲ್ಲೇ ಹಿಂತಿರುಗುತ್ತೇನೆ ನಿಮ್ಮ ಪ್ರೀತಿಗಾಗಿ ತುಂಬಾ ಧನ್ಯವಾದಗಳು ಎಂದು ಶೋಭಾ ಶೆಟ್ಟಿ ಫ್ಯಾನ್ಸ್ಗೆ ಸಂದೇಶ ನೀಡಿದ್ದಾರೆ. ಮತ್ತೊಂದು ಪೋಸ್ಟ್ ಹಾಕಿಕೊಂಡಿದ್ದು, ಅದರಲ್ಲಿ ಶೋಭಾ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಮನೆಗೆ ಹೋದಂತಿದೆ. ನಟಿ ರಾಘವೇಂದ್ರ ಸ್ವಾಮಿಯ ಫೋಟೊಗೆ ಪೂಜೆ ಮಾಡುತ್ತಿರುವ ಫೋಟೊ ಹಂಚಿಕೊಂಡು ಪಾಸಿಟಿವ್ ಮಾತ್ರ ಎಂದು ಬರೆದುಕೊಂಡಿದ್ದಾರೆ.
ಕಳೆದ ವಾರ ಎಲಿಮಿನೇಟ್ ಆಗುವ ಸ್ಪರ್ಧಿಗಳ ಲಿಸ್ಟ್ನಲ್ಲಿದ್ದ ಶೋಭಾ ಅವರನ್ನು ಭಾನುವಾರ ಸುದೀಪ್ ಅವರು ಸೇವ್ ಮಾಡಿದ್ದರು. ಕೊನೆಯಲ್ಲಿ ಐಶ್ವರ್ಯಾ ಹಾಗೂ ಶಿಶಿರ್ ಡೇಂಜರ್ ಝೋನ್ನಲ್ಲಿದ್ದರು. ಆದರೆ, ಈ ಸಂದರ್ಭ ಶೋಭಾ ಅವರು ನಾನೇ ಹೊರಹೋಗುತ್ತೇನೆ ಎಂದು ಹೇಳಿದ್ದಾರೆ. ಈ ಮೂಲಕ ಶೋಭಾ ಶೆಟ್ಟಿ ಮನೆಯಿಂದ ವಾಕ್ ಔಟ್ ಆದರು.
ಕನ್ನಡ ಬಿಗ್ ಬಾಸ್ಗೆ ಶಾಕಿಂಗ್ ರೀತಿಯಲ್ಲಿ ಎಂಟ್ರಿ ಕೊಟ್ಟಿದ್ದ ಶೋಭಾ ಮೊದಲ ದಿನವೇ ಸ್ಪರ್ಧಿಗಳ ಎದೆಯಲ್ಲಿ ನಡುಕ ಹುಟ್ಟಿಸಿದ್ದರು. ಅದರಲ್ಲೂ ಬಿಗ್ ಬಾಸ್ ಕೊಟ್ಟ ಟಾಸ್ಕ್ ಆಡುವಾಗ ಕೊನೆಯ ಕ್ಷಣದಲ್ಲಿ ಪ್ರಬಲ ಪೈಪೋಟಿ ನೀಡಿದ್ದರು. ಇದೇ ಟಾಸ್ಕ್ ಆಡುವಾಗ ಆಯಾ ತಪ್ಪಿ ಕೆಳಗೆ ಬಿದ್ದಿದ್ದರು. ಅಲ್ಲಿಂದ ಕೊಂಚ ಡಲ್ ಆದ ಶೋಭಾ ಟಾಸ್ಕ್ನಲ್ಲಿ ಮತ್ತೆ ಕತ್ತು ನೋವು ಮಾಡಿಕೊಂಡಿದ್ದರು. ಇದಾದ ಬಳಿಕ ಅವರ ಆರೋಗ್ಯ ಸಮಸ್ಯೆಗಳು ಕೂಡ ಕಾಣಿಸಿಕೊಂಡಿದ್ದವು.
BBK 11: ಬಿಗ್ ಬಾಸ್ ಮನೆಯ ಕ್ಯಾಪ್ಟನ್ ಆದ ಗೌತಮಿ: ಮೋಕ್ಷಿತಾಗೆ ಭಾರೀ ಮುಖಭಂಗ