ಬಿಗ್ ಬಾಸ್ ಕನ್ನಡ ಸೀಸನ್ 11 ಹತ್ತನೇ ವಾರಕ್ಕೆ ಕಾಲಿಟ್ಟಿದೆ. ಟಾಸ್ಕ್ಗಳ ಕಾವು ಏರುತ್ತಿದ್ದು ಬಿಗ್ ಬಾಸ್ ಕಠಿಣ ಸವಾಲುಗಳನ್ನೇ ಸ್ಪರ್ಧಿಗಳಿಗೆ ನೀಡುತ್ತಿದ್ದಾರೆ. ಸದ್ಯ ಮನೆಯಲ್ಲಿ 12 ಮಂದಿ ಇದ್ದಾರೆ. ಕಳೆದ ವಾರ ಮನೆಯಿಂದ ಶೋಭಾ ಶೆಟ್ಟಿ ತಮ್ಮ ಸ್ವಚ್ಚೆಯಿಂದ ಬಿಗ್ ಬಾಸ್ ಮನೆ ತೊರೆದು ಹೊರಬಂದಿದ್ದಾರೆ. ಐಶ್ವರ್ಯಾ ಸಿಂಧೋಗಿ ಹಾಗೂ ಶಿಶಿರ್ ಶಾಸ್ತ್ರೀ ಡೇಂಜರ್ ಝೋನ್ಗೆ ಬಂದಿದ್ದರು. ಆದರೆ, ಅನಾರೋಗ್ಯದ ಕಾರಣ ನನಗೆ ಇಲ್ಲಿ ಇರಲು ಆಗುತ್ತಿಲ್ಲ ಎಂದು ಹೇಳಿ ಶೋಭಾ ಮನೆ ತೊರೆದರು.
ಇದೀಗ ಈ ವಾರ ಮತ್ತೆ ನಾಮಿನೇಷನ್ ಪ್ರಕ್ರಿಯೆ ನಡೆಯಲಿದೆ. ಈ ವಾರ ಯಾರೆಲ್ಲ ನಾಮಿನೇಟ್ ಆಗಬಹುದು ಎಂಬ ಸಂಭಾವ್ಯ ಪಟ್ಟಿಯನ್ನು ನೋಡುವುದಾದರೆ.. ಇದರಲ್ಲಿ ಮೊದಲ ಹೆಸರು ಐಶ್ವರ್ಯಾ ಸಿಂಧೋಗಿ ಹಾಗೂ ಶಿಶಿರ್ ಶಾಸ್ತ್ರೀ. ಶಿಶಿರ್ ಅವರು ಐಶ್ವರ್ಯಾ ಜೊತೆಗೆನೇ ಹೆಚ್ಚಾಗಿ ಕಾಣಿಸಿಕೊಂಡಿದ್ದರಿಂದ ಟಾಸ್ಕ್ನಲ್ಲಿ ಭಾಗವಹಿಸುವಿಕೆ ಕಮ್ಮಿ ಆಗಿದೆ. ಈ ಕುರಿತು ಕಿಚ್ಚ ಸುದೀಪ್ ಎಚ್ಚರಿಕೆ ನೀಡಿದರೂ ದೊಡ್ಡ ಬದಲಾವಣೆ ಕಂಡಿಲ್ಲ. ಕಳೆದ ವಾರದ ಟಾಸ್ಕ್ನಲ್ಲಿ ಕೂಡ ಶಿಶಿರ್ ಹೆಚ್ಚಾಗಿ ಕಾಣಿಸಿಕೊಂಡಿಲ್ಲ.
ಇನ್ನು ನಾಮಿನೇಷನ್ ಲಿಸ್ಟ್ನಲ್ಲಿ ತ್ರಿವಿಕ್ರಮ್ ಇರುವುದು ಖಚಿತ. ಮನೆಯಲ್ಲಿ ಅನೇಕ ಮಂದಿಗೆ ಮುಖ್ಯವಾಗಿ ಮಹಿಳಾ ಸದಸ್ಯರಿಗೆ ತ್ರಿವಿಕ್ರಮ್ ಬಗ್ಗೆ ಒಳ್ಳೆಯ ಅಭಿಪ್ರಾಯವಿಲ್ಲ. ಹೀಗಾಗಿ ಇವರು ನಾಮಿನೇಟ್ ಆಗಬಹುದು. ಜೊತೆಗೆ ರಜತ್ ಕೂಡ ನಾಮಿನೇಟ್ ಆಗಬಹುದು. ಕಳೆದ ವಾರ ಕೂಡ ರಜತ್ ಆಡಿದ ಮಾತು ಕೆಲವರ ಕೆಂಗಣ್ಣಿಗೆ ಗುರಿಯಾಗಿತ್ತು. ಅಲ್ಲದೆ ಟಾಸ್ಕ್ನಲ್ಲಿ ಬಲಿಷ್ಠ ಇರುವ ಕಾರಣ ಇವರನ್ನು ನಾಮಿನೇಟ್ ಮಾಡಬಹುದು.
ಇವರ ಜೊತೆಗೆ ಚೈತ್ರಾ ಕುಂದಾಪುರ ಬಿಗ್ ಬಾಸ್ ಮನೆಯಲ್ಲಿ ಕೆಲವರ ವಿರೋಧ ಕಟ್ಟಿಕೊಂಡಿದ್ದಾರೆ. ವಟವಟ ಎಂದು ಮಾತನಾಡುತ್ತಿರುವುದು ಅನೇಕರಿಗೆ ಇಷ್ಟವಾಗುತ್ತಿಲ್ಲ. ಹೀಗಾಗಿ ಇವರ ಹೆಸರು ತೆಗೆದುಕೊಳ್ಳಬಹುದು. ಹಾಗೆಯೆ ಗೌತಮಿ ಆಟ ಈಗೀಗ ಹೆಚ್ಚಿನವರಿಗೆ ಇಷ್ಟವಾಗುತ್ತಿಲ್ಲ. ಹೆಚ್ಚಾಗಿ ಮಂಜು ಜೊತೆಗೆನೇ ಕಾಣಿಸಿಕೊಳ್ಳುವ ಇವರು ಕೂಡ ನಾಮಿನೇಟ್ ಆಗುವ ಸಾಧ್ಯತೆ ಇದೆ. ಇದರ ನಡುವೆ ಈ ವಾರದ ಮನೆಯ ಕ್ಯಾಪ್ಟನ್ ಆಗಿ ಆಯ್ಕೆಯಾಗಿರುವ ಧನರಾಜ್ ಆಚಾರ್ ಅವರಿಗೆ ನೇರ ನಾಮಿನೇಷನ್ ಅಧಿಕಾರ ಇರುವ ಕಾರಣ ಇವರು ಯಾರನ್ನು ನಾಮಿನೇಟ್ ಮಾಡುತ್ತಾರೆ ಎಂಬುದು ನೋಡಬೇಕಿದೆ.
BBK 11: ಬಂದ ಎರಡೇ ವಾರಕ್ಕೆ ಬಿಗ್ ಬಾಸ್ ಮನೆ ತೊರೆದ ಶೋಭಾ ಶೆಟ್ಟಿ: ವೀಕ್ಷಕರಿಂದ ಬೇಸರ