ಬಿಗ್ ಬಾಸ್ ಕನ್ನಡ ಸೀಸನ್ 11 (Bigg Boss Kannada 11) ಹನ್ನೊಂದರೆ ವಾರಕ್ಕೆ ಕಾಲಿಟ್ಟಿದೆ. ಟಾಸ್ಕ್ಗಳ ಕಾವು ಏರುತ್ತಿದ್ದು ಬಿಗ್ ಬಾಸ್ ಕಠಿಣ ಸವಾಲುಗಳನ್ನೇ ಸ್ಪರ್ಧಿಗಳಿಗೆ ನೀಡುತ್ತಿದ್ದಾರೆ. ಸದ್ಯ ಮನೆಯಲ್ಲಿ 12 ಮಂದಿ ಇದ್ದಾರೆ. ಕಳೆದ ವಾರ ಮನೆಯಿಂದ ಯಾರೂ ಎಲಿಮಿನೇಟ್ ಆಗಿರಲಿಲ್ಲ. ವೋಟಿಂಗ್ ಲೈನ್ಸ್ ತೆರೆದಿರದ ಕಾರಣ ನಾಮಿನೇಟ್ ಆಗಿದ್ದ ಸದಸ್ಯರು ಸೇಫ್ ಆಗಿದ್ದರು. ಆದರೆ, ಚೈತ್ರಾ ಕುಂದಾಪುರ ಹಾಗೂ ಐಶ್ವರ್ಯಾ ಸಿಂಧೋಗಿ ಅವರು ಡೇಂಜರ್ ಝೋನ್ನಲ್ಲಿದ್ದಾರೆ ಎಂಬ ಸುಳಿವನ್ನು ಸುದೀಪ್ ನೀಡಿದರು.
ಇದೀಗ ಈ ವಾರ ಮತ್ತೆ ನಾಮಿನೇಷನ್ ಪ್ರಕ್ರಿಯೆ ನಡೆಯಲಿದೆ. ಈ ವಾರ ಯಾರೆಲ್ಲ ನಾಮಿನೇಟ್ ಆಗಬಹುದು ಎಂಬ ಸಂಭಾವ್ಯ ಪಟ್ಟಿಯನ್ನು ನೋಡುವುದಾದರೆ.. ಇದರಲ್ಲಿ ಮೊದಲ ಹೆಸರು ಐಶ್ವರ್ಯಾ ಸಿಂಧೋಗಿ ಹಾಗೂ ಶಿಶಿರ್ ಶಾಸ್ತ್ರೀ. ಶಿಶಿರ್ ಅವರು ಐಶ್ವರ್ಯಾ ಜೊತೆಗೆನೇ ಹೆಚ್ಚಾಗಿ ಕಾಣಿಸಿಕೊಂಡಿದ್ದರಿಂದ ಟಾಸ್ಕ್ನಲ್ಲಿ ಭಾಗವಹಿಸುವಿಕೆ ಕಮ್ಮಿ ಆಗಿದೆ. ಈ ಕುರಿತು ಕಿಚ್ಚ ಸುದೀಪ್ ಎಚ್ಚರಿಕೆ ನೀಡಿದರೂ ದೊಡ್ಡ ಬದಲಾವಣೆ ಕಂಡಿಲ್ಲ.
ಇನ್ನು ನಾಮಿನೇಷನ್ ಲಿಸ್ಟ್ನಲ್ಲಿ ತ್ರಿವಿಕ್ರಮ್ ಇರುವುದು ಖಚಿತ. ಮನೆಯಲ್ಲಿ ಅನೇಕ ಮಂದಿಗೆ ಮುಖ್ಯವಾಗಿ ಮಹಿಳಾ ಸದಸ್ಯರಿಗೆ ತ್ರಿವಿಕ್ರಮ್ ಬಗ್ಗೆ ಒಳ್ಳೆಯ ಅಭಿಪ್ರಾಯವಿಲ್ಲ. ಹೀಗಾಗಿ ಇವರು ನಾಮಿನೇಟ್ ಆಗಬಹುದು. ಜೊತೆಗೆ ರಜತ್ ಕೂಡ ನಾಮಿನೇಟ್ ಆಗಬಹುದು. ಕಳೆದ ವಾರ ರಜತ್ ಟಾಸ್ಕ್ ಚೆನ್ನಾಗಿ ಆಡಿದ್ದರೂ ಇವರು ಆಡುವ ಮಾತು ಕೆಲವರ ಕೆಂಗಣ್ಣಿಗೆ ಗುರಿಯಾಗಿದೆ. ಅಲ್ಲದೆ ಟಾಸ್ಕ್ನಲ್ಲಿ ಬಲಿಷ್ಠ ಇರುವ ಕಾರಣ ಇವರನ್ನು ನಾಮಿನೇಟ್ ಮಾಡಬಹುದು.
ಇವರ ಜೊತೆಗೆ ಚೈತ್ರಾ ಕುಂದಾಪುರ ಬಿಗ್ ಬಾಸ್ ಮನೆಯಲ್ಲಿ ಕೆಲವರ ವಿರೋಧ ಕಟ್ಟಿಕೊಂಡಿದ್ದಾರೆ. ವಟವಟ ಎಂದು ಮಾತನಾಡುತ್ತಿರುವುದು ಅನೇಕರಿಗೆ ಇಷ್ಟವಾಗುತ್ತಿಲ್ಲ. ಹೀಗಾಗಿ ಇವರ ಹೆಸರು ತೆಗೆದುಕೊಳ್ಳಬಹುದು. ಮೋಕ್ಷಿತಾ ಕೂಡ ನಾಮಿನೇಟ್ ಆಗುವ ಸಾಧ್ಯತೆ ಇದೆ. ಕ್ಯಾಪ್ಟನ್ಸಿ ಟಾಸ್ಕ್ ಕ್ವಿಟ್ ಮಾಡಿ ಬಿಗ್ ಬಾಸ್ ನಿಯಮ ಮುರಿದ ಕಾರಣ ಇವರ ಹೆಸರು ತೆಗೆದುಕೊಳ್ಳಬಹುದು. ಇದರ ನಡುವೆ ಈ ವಾರದ ಮನೆಯ ಕ್ಯಾಪ್ಟನ್ ಆಗಿ ಆಯ್ಕೆಯಾಗಿರುವ ಗೌತಮಿ ಜಾಧವ್ ಅವರಿಗೆ ನೇರ ನಾಮಿನೇಷನ್ ಅಧಿಕಾರ ಇರುವ ಕಾರಣ ಇವರು ಯಾರನ್ನು ನಾಮಿನೇಟ್ ಮಾಡುತ್ತಾರೆ ಎಂಬುದು ನೋಡಬೇಕಿದೆ.
BBK 11: ಅತಿಥಿಗಳಿಗೆ ಗೌರವವೂ ಕೊಡದೆ ಅವರೆದುರೇ ಕಿತ್ತಾಡಿಕೊಂಡ ಮಂಜು-ಶಿಶಿರ್