ಬಿಗ್ ಬಾಸ್ ಕನ್ನಡ ಸೀಸನ್ 11 ರಲ್ಲಿ (Bigg Boss kannada 11) ಹದಿಮೂರನೇ ವಾರ ಸಾಗುತ್ತಿದೆ. ಟಾಸ್ಕ್ಗಳ ಕಾವು ಏರುತ್ತಿದ್ದು ಬಿಗ್ ಬಾಸ್ ಕಠಿಣ ಸವಾಲುಗಳನ್ನೇ ಸ್ಪರ್ಧಿಗಳಿಗೆ ನೀಡುತ್ತಿದ್ದಾರೆ. ಸದ್ಯ ಮನೆಯಲ್ಲಿ 10 ಮಂದಿ ಇದ್ದಾರಾಷ್ಟೆ. ಕಳೆದ ವಾರ ಮನೆಯಿಂದ ಯಾರೂ ಎಲಿಮಿನೇಟ್ ಆಗಿರಲಿಲ್ಲ. ಆದರೆ, ತ್ರಿವಿಕ್ರಮ್ ಅವರನ್ನು ಫೇಕ್ ಎಲಿಮಿನೇಟ್ ಮಾಡಿ ಎಚ್ಚರಿಕೆ ನೀಡಿದ್ದರು. ಐಶ್ವರ್ಯಾ ಸಿಂಧೋಗಿ ಡೇಂಜರ್ ಝೋನ್ನಲ್ಲಿರುವುದನ್ನು ಮತ್ತೊಮ್ಮೆ ಒತ್ತಿ ಹೇಳಿದರು.
ಇದೀಗ ಈ ವಾರ ಮತ್ತೆ ನಾಮಿನೇಷನ್ ಪ್ರಕ್ರಿಯೆ ನಡೆದಿದೆ. ಈ ವಾರ ಘಟಾನುಘಟಿ ಸ್ಪರ್ಧಿಗಳೇ ಮನೆಯಿಂದ ಹೊರಹೋಗಲು ನಾಮಿನೇಟ್ ಆಗಿದ್ದಾರೆ. ಈ ಬಾರಿಯ ನಾಮಿನೇಷನ್ ಪ್ರಕ್ರಿಯೆಯನ್ನು ಬಿಗ್ ಬಾಸ್ ವಿಶೇಷವಾಗಿ ನೀಡಿದರು. ಅದೇನೆಂದರೆ, ನಾಮಿನೇಟ್ ಆಗೋ ಸ್ಪರ್ಧಿಗೆ ಕೃತಕವಾಗಿ ತಯಾರಿಸಿರುವ ಬಾಟಲಿಗಳಿಂದ ಹೊಡೆದು ನಾಮಿನೇಟ್ ಮಾಡಬೇಕಿದೆ. ಮೊದಲು ನಾಮಿನೇಟ್ ಮಾಡಬೇಕು. ಸೂಕ್ತ ಕಾರಣ ಕೊಡಬೇಕು. ಆ ಮೇಲೆ ಬಾಟಲಿಯಿಂದ ತಲೆಗೆ ಹೊಡೆಯಬೇಕು. ಇದು ಈ ವಾರದ ನಾಮಿನೇಷನ್ ಪ್ರಕ್ರಿಯೆ ಆಗಿತ್ತು.
ನಾಮಿನೇಟ್ ಆದ ಸ್ಪರ್ಧಿಗಳ ಲಿಸ್ಟ್ನಲ್ಲಿ ಮೊದಲಿಗೆ ಚೈತ್ರಾ ಕುಂದಾಪುರ ಹೆಸರು ಇದೆ. ಚೈತ್ರಾರರನ್ನು ನಾಮಿನೇಟ್ ಮಾಡಲು ಖಾರವಾದ ರೀಸನ್ ಕೊಟ್ಟ ರಜತ್, ಚೈತ್ರಾ ಅವರು ಬೇರೆ ಬೇರೆ ಟಾಸ್ಕ್ನಲ್ಲಿ ಕಾಣಲಿಲ್ಲ, ಸೀರೆ ಒಗಿಯುವುದರಲ್ಲಿ ಕಾಣಲಿಲ್ಲ ನಿಮ್ಮ ಆ ಟ್ಯಾಲೆಂಟ್ ಇನ್ನೂ ಯಾಕಾದ್ರೂ ಬಿಗ್ಬಾಸ್ ಮನೆಯಲ್ಲಿ ಇದ್ದೀಯಮ್ಮಾ. ನಿನ್ನ ದಮ್ಮಯಾ ಅಮ್ಮ ಮನೆಗೆ ಹೋಗು ಅಂಥ ರಜತ್ ಚೈತ್ರಾಗೆ ಕೈ ಮುಗಿದಿದ್ದರು.
ಮತ್ತೊಂದೆಡೆ ಉಗ್ರಂ ಮಂಜು ಕೂಡ ನಾಮಿನೇಟ್ ಆಗಿದ್ದಾರೆ. ನೀವು ಮನೆಯಲ್ಲಿ ಕಾಣಿಸಿಕೊಂಡಿಲ್ಲ ಎಂದು ಮೋಕ್ಷಿತಾ ಕಾರಣ ಕೊಟ್ಟರು. ಅತ್ತ ಮಂಜು ತ್ರಿವಿಕ್ರಮ್ನನ್ನು ನಾಮಿನೇಟ್ ಮಾಡಿದಾಗ ಜಗಳ ನಡೆಯಿತು. ಕ್ಯಾಪ್ಟನ್ಸಿ ಓಟದಲ್ಲಿ ಸರಿಯಾದ ರೀಸನ್ ಕೊಡದೇ ಅದರಿಂದ ಆಚೆ ಹಾಕಿದ್ರಿ ಎಂದು ಮಂಜು ಹೇಳಿದ್ದಾರೆ. ಆಗ ರಾಜನ ಟಾಸ್ಕ್ನಲ್ಲಿ ಕುಳಿತುಕೊಂಡು ಮಾತಾಡೋಣ ಅಂತ ಹೇಳಿದ್ರು ಗಲಾಟೆ ಮಾಡಿಕೊಂಡ್ರಿ ಅಂತ ತ್ರಿವಿಕ್ರಮ್ ತಿರುಗೇಟು ಕೊಟ್ಟಿದ್ದಾರೆ. ಇದೇ ವಿಚಾರದ ಮಧ್ಯೆ ತ್ರಿವಿಕ್ರಮ್ ಮಂಜುಗೆ ಗೊತ್ತಿದೆ ನಿಮ್ಮ ಕ್ಯಾರೆಕ್ಟರ್ ಏನ್ ಅಂತ ನಮಗೂ ಗೊತ್ತು ಸ್ವಾಮಿ ಎಂದು ಹೇಳಿದ್ದಾರೆ.
ಒಟ್ಟಾರೆ ಈ ವಾರ ಮನೆಯಿಂದ ಹೊರಹೋಗಲು ಒಟ್ಟು 8 ಮಂದಿ ನಾಮಿನೇಟ್ ಆಗಿದ್ದಾರೆ. ಇದರಲ್ಲಿ ಚೈತ್ರಾ ಕುಂದಾಪುರ, ಗೌತಮಿ ಜಾಧವ್, ಉಗ್ರಂ ಮಂಜು, ಧನರಾಜ್ ಆಚಾರ್, ಹನುಮಂತ, ಮೋಕ್ಷಿತಾ ಪೈ, ತ್ರಿವಿಕ್ರಮ್ ಮತ್ತು ಐಶ್ವರ್ಯಾ ಹೆಸರು ಇದೆ.
BBK 11: ನಾಮಿನೇಷನ್ ವೇಳೆ ಬಿಗ್ ಬಾಸ್ನ ಬಿಗ್ ಕಂಟೆಸ್ಟೆಂಟ್ ತ್ರಿವಿಕ್ರಮ್-ಮಂಜು ನಡುವೆ ಗಲಾಟೆ