Friday, 3rd January 2025

BBK 11: ಈ ವಾರ ದೊಡ್ಮನೆಯಿಂದ ಹೊರಹೋಗಲು ಯಾರೆಲ್ಲ ನಾಮಿನೇಟ್?

BBK 11

ಬಿಗ್ ಬಾಸ್ ಕನ್ನಡ ಸೀಸನ್ 11 ರಲ್ಲಿ (Bigg Boss Kannada 11) ಭಾನುವಾರ ಮತ್ತೋರ್ವ ಸ್ಪರ್ಧಿ ಔಟ್ ಆದರು. 90 ದಿನಗಳನ್ನು ಪೂರೈಸಿರುವ ಶೋನಲ್ಲಿ ಐಶ್ವರ್ಯಾ ಸಿಂಧೋಗಿ ಎಲಿಮಿನೇಟ್ ಆಗಿ ಹೊರಬಂದರು. ಕಳೆದ ಕೆಲವು ವಾರಗಳಿಂದ ಇವರು ಡೇಂಜರ್ ಝೋನ್​ನಲ್ಲೇ ಇದ್ದರು. ಅಂತಿಮವಾಗಿ ಬಿಗ್ ಬಾಸ್ ಪ್ರಯಾಣವನ್ನು ಮಹತ್ವದ ಘಟ್ಟದಲ್ಲೇ ಕೊನೆಗೊಳಿಸಿದ್ದಾರೆ. ಸದ್ಯ ದೊಡ್ಮನೆಯಲ್ಲಿ ಒಂಬತ್ತು ಮಂದಿ ಇದ್ದಾರಷ್ಟೆ. ಹೀಗಾಗಿ ಈ ವಾರ ಇನ್ನಷ್ಟು ರೋಚಕತೆ ಸೃಷ್ಟಿಸಿದ್ದು, ಉಳಿದುಕೊಳ್ಳಲು ಸ್ಪರ್ಧಿಗಳು ಶ್ರಮಪಡಬೇಕಿದೆ.

ಇದೀಗ ಈ ವಾರ ಮತ್ತೆ ನಾಮಿನೇಷನ್ ಪ್ರಕ್ರಿಯೆ ನಡೆಯಲಿದೆ. ಈ ವಾರ ಯಾರೆಲ್ಲ ನಾಮಿನೇಟ್ ಆಗಬಹುದು ಎಂಬ ಸಂಭಾವ್ಯ ಪಟ್ಟಿಯನ್ನು ನೋಡುವುದಾದರೆ.. ಇದರಲ್ಲಿ ಮೊದಲ ಹೆಸರು ಚೈತ್ರಾ ಕುಂದಾಪುರ ಇರುವುದು ಖಚಿತ. ಚೈತ್ರಾ ಬಿಗ್ ಬಾಸ್ ಮನೆಯಲ್ಲಿ ಬಹುತೇಕ ಎಲ್ಲರ ವಿರೋಧ ಕಟ್ಟಿಕೊಂಡಿದ್ದಾರೆ. ವಟವಟ ಎಂದು ಮಾತನಾಡುತ್ತಿರುವುದು ಅನೇಕರಿಗೆ ಇಷ್ಟವಾಗುತ್ತಿಲ್ಲ. ಜೊತೆಗೆ ಈಗ ಸುಳ್ಳು ಹೇಳುತ್ತಿದ್ದಾರೆ ಎಂಬ ಆರೋಪ ಕೂಡ ಇವರ ಮೇಲಿದೆ. ಹೀಗಾಗಿ ಇವರ ಹೆಸರು ಇರಲಿದೆ.

ನಾಮಿನೇಷನ್ ಲಿಸ್ಟ್​ನಲ್ಲಿ ತ್ರಿವಿಕ್ರಮ್ ಇರುವುದು ಕೂಡ ಖಚಿತ. ಮನೆಯಲ್ಲಿ ಅನೇಕ ಮಂದಿಗೆ ಮುಖ್ಯವಾಗಿ ಮಹಿಳಾ ಸದಸ್ಯರಿಗೆ ತ್ರಿವಿಕ್ರಮ್ ಬಗ್ಗೆ ಒಳ್ಳೆಯ ಅಭಿಪ್ರಾಯವಿಲ್ಲ. ಹೀಗಾಗಿ ಇವರು ನಾಮಿನೇಟ್ ಆಗಬಹುದು. ಜೊತೆಗೆ ರಜತ್ ಕೂಡ ನಾಮಿನೇಟ್ ಆಗಬಹುದು. ಕಳೆದ ವಾರ ರಜತ್ ಟಾಸ್ಕ್ ಚೆನ್ನಾಗಿ ಆಡಿಲ್ಲ. ಜೊತೆಗೆ ಇವರು ಆಡುವ ಮಾತು ಕೆಲವರ ಕೆಂಗಣ್ಣಿಗೆ ಗುರಿಯಾಗುತ್ತಿದೆ.

ಮೋಕ್ಷಿತಾ ಕೂಡ ನಾಮಿನೇಟ್ ಆಗುವ ಸಾಧ್ಯತೆ ಇದೆ. ಉಗ್ರಂ ಮಂಜು ಕಳೆದ ಕೆಲ ವಾರಗಳಿಂದ ಫುಲ್ ಡಲ್ ಆಗಿದ್ದಾರೆ. ಹಿಂದಿನ ರೀತಿ ಕಾಣಿಸಿಕೊಂಡಿಲ್ಲ. ಈ ಕಾರಣಕ್ಕೆ ಇವರು ನಾಮಿನೇಟ್ ಆಗಬಹುದು. ಕಳೆದ ವಾರ ಕಳಪೆ ಪಡೆದುಕೊಂಡ ಹನುಮಂತ ಕೂಡ ನಾಮಿನೇಟ್ ಆಗುವ ಸಾಧ್ಯತೆ ಇದೆ. ಇನ್ನು ಈ ವಾರದ ಕ್ಯಾಪ್ಟನ್ ಆಗಿರುವ ಭವ್ಯಾ ಯಾರನ್ನು ನೇರ ನಾಮಿನೇಟ್ ಮಾಡುತ್ತಾರೆ ಎಂಬುದು ನೋಡಬೇಕಿದೆ.

BBK 11: ಕಿಚ್ಚ ಸುದೀಪ್ ನಟನೆಯ ಮುಂದಿನ ಸಿನಿಮಾದಲ್ಲಿ ಐಶ್ವರ್ಯಾ ಸಿಂಧೋಗಿ?