ಬಿಗ್ ಬಾಸ್ ಕನ್ನಡ ಸೀಸನ್ 11 (Bigg Boss Kannada 11) 15ನೇ ವಾರಕ್ಕೆ ಕಾಲಿಟ್ಟಿದೆ. ಫಿನಾಲೆಗೆ ಇನ್ನೇನು ಕೆಲವೇ ದಿನಗಳು ಬಾಕಿ ಉಳಿದಿದ್ದು ಆಟ ಇನ್ನಷ್ಟು ರೋಚಕತೆ ಸೃಷ್ಟಿಸಿದೆ. ಕಳೆದ ವಾರ ಮನೆಯಿಂದ ಯಾರೂ ಎಲಿಮಿನೇಟ್ ಆಗಿರಲಿಲ್ಲ. ನಾಮಿನೇಷನ್ ಪ್ರಕ್ರಿಯೆ ಕೂಡ ನಡೆದಿರಲಿಲ್ಲ. ಇದೀಗ ಈ ವಾರ ಡಬಲ್ ಎಲಿಮಿನೇಷನ್ ಇರುವ ಸಾಧ್ಯತೆ ಇದೆ ಜೊತೆಗೆ ಇದರಲ್ಲಿ ಒಂದು ಮಿಡಲ್ ವೀಕ್ ಎಲಿಮಿನೇಷನ್ ಇರಲಿದೆ ಎನ್ನಲಾಗಿದೆ.
ಕಳೆದ ವಾರ ಫ್ಯಾಮಿಲಿ ವೀಕ್ ಆಗಿತ್ತು. ಕೆಲವೇ ವಾರಗಳಲ್ಲಿ ಫಿನಾಲೆ ನಡೆಯಲಿದ್ದು, ಇದಕ್ಕೂ ಮುನ್ನ ಇರುವ 9 ಸ್ಪರ್ಧಿಗಳಿಗೆ ಜೋಶ್ ಬರಲು ಕುಟುಂಬದವರನ್ನು ಮನೆಯೊಳಗೆ ಕರೆಸಲಾಗಿತ್ತು. ಸ್ಪರ್ಧಿಗಳ ಅಮ್ಮಂದಿರು, ಅಪ್ಪಂದಿರು ಮಡದಿ, ಮಕ್ಕಳು ಬಿಗ್ ಬಾಸ್ಗೆ ಬಂದಿದ್ದಾರೆ. ಮನೆಯಲ್ಲಿರುವ 9 ಸ್ಪರ್ಧಿಗಳ ಕುಟುಂಬದವರು ಆಗಮಿಸಿದ್ದರು.
ಹೀಗಾಗಿ ಕಳೆದ ವಾರ ಎಲಿಮಿನೇಷನ್ ಪ್ರಕ್ರಿಯೆ ಇರಲಿಲ್ಲ. ಇದೀಗ ಈ ವಾರ ಮತ್ತೆ ನಾಮಿನೇಷನ್ ಪ್ರಕ್ರಿಯೆ ನಡೆಯಲಿದೆ. ಈ ವಾರ ಯಾರೆಲ್ಲ ನಾಮಿನೇಟ್ ಆಗಬಹುದು ಎಂಬ ಸಂಭಾವ್ಯ ಪಟ್ಟಿಯನ್ನು ನೋಡುವುದಾದರೆ.. ಇದರಲ್ಲಿ ಮೊದಲ ಹೆಸರು ಚೈತ್ರಾ ಕುಂದಾಪುರ ಇರುವುದು ಖಚಿತ. ಚೈತ್ರಾ ಬಿಗ್ ಬಾಸ್ ಮನೆಯಲ್ಲಿ ಬಹುತೇಕ ಎಲ್ಲರ ವಿರೋಧ ಕಟ್ಟಿಕೊಂಡಿದ್ದಾರೆ. ವಟವಟ ಎಂದು ಮಾತನಾಡುತ್ತಿರುವುದು ಅನೇಕರಿಗೆ ಇಷ್ಟವಾಗುತ್ತಿಲ್ಲ. ಜೊತೆಗೆ ಈಗ ಸುಳ್ಳು ಹೇಳುತ್ತಿದ್ದಾರೆ ಎಂಬ ಆರೋಪ ಕೂಡ ಇವರ ಮೇಲಿದೆ. ಹೀಗಾಗಿ ಇವರ ಹೆಸರು ಇರಲಿದೆ.
ನಾಮಿನೇಷನ್ ಲಿಸ್ಟ್ನಲ್ಲಿ ತ್ರಿವಿಕ್ರಮ್ ಇರುವುದು ಕೂಡ ಖಚಿತ. ಮನೆಯಲ್ಲಿ ಅನೇಕ ಮಂದಿಗೆ ಮುಖ್ಯವಾಗಿ ಮಹಿಳಾ ಸದಸ್ಯರಿಗೆ ತ್ರಿವಿಕ್ರಮ್ ಬಗ್ಗೆ ಒಳ್ಳೆಯ ಅಭಿಪ್ರಾಯವಿಲ್ಲ. ಹೀಗಾಗಿ ಇವರು ನಾಮಿನೇಟ್ ಆಗಬಹುದು. ಮೋಕ್ಷಿತಾ ಕೂಡ ನಾಮಿನೇಟ್ ಆಗುವ ಸಾಧ್ಯತೆ ಇದೆ. ಉಗ್ರಂ ಮಂಜು ಕಳೆದ ಕೆಲ ವಾರಗಳಿಂದ ಫುಲ್ ಡಲ್ ಆಗಿದ್ದಾರೆ. ಹಿಂದಿನ ರೀತಿ ಕಾಣಿಸಿಕೊಂಡಿಲ್ಲ. ಈ ಕಾರಣಕ್ಕೆ ಇವರು ನಾಮಿನೇಟ್ ಆಗಬಹುದು.
ಟಿಕೆಟ್ ಟು ಫಿನಾಲೆ ಪಾಸ್:
ಭಾನುವಾರ ಸುದೀಪ್ ಅವರು ವೇದಿಕೆ ಮೇಲೆ ದೊಡ್ಡ ಅನೌನ್ಸ್ಮೆಂಟ್ ಮಾಡಿದ್ದಾರೆ. ಮುಂದಿನ ವಾರ (ಈ ವಾರ) ನಿಮಗೆಲ್ಲಾ ತುಂಬಾ ಮುಖ್ಯವಾಗಿರೋ ವಾರ. ಗೇಮ್ ಚೇಂಜಿಂಗ್ ವೀಕ್ ಆಗಿದೆ. ಮುಂದಿನ ವಾರ ನಡೆಯುವ ಗೇಮ್ಗಳಲ್ಲಿ ಒಬ್ಬ ವ್ಯಕ್ತಿಗೆ ಟಿಕೆಟ್ ಟು ಫಿನಾಲೆ ಸಿಗುತ್ತೆ ಎಂದು ಹೇಳಿದ್ದಾರೆ.
ಟಿಕೆಟ್ ಟು ಫಿನಾಲೆ ಪಾಸ್ ಅಂದರೆ ಗ್ರ್ಯಾಂಡ್ ಫಿನಾಲೆಗೆ ನೇರವಾಗಿ ಸೆಲೆಕ್ಟ್ ಆಗುತ್ತಾರೆ. ಹೀಗಾಗಿ ಸದ್ಯ ಬಿಗ್ ಬಾಸ್ನಲ್ಲಿ ಅಸಲಿ ಆಟ ಶುರುವಾಗಿದೆ. ಇಷ್ಟು ವಾರದ ಆಟ ಒಂದು ಲೆಕ್ಕಾವಾದರೆ, ಈಗಿನಿಂದ ಒಂದು ಲೆಕ್ಕಾ ಶುರುವಾಗಿದೆ. ತುಂಬಾ ಚೆನ್ನಾಗಿ ಆಡಿ ಕಪ್ ಹೇಗೆ ಗೆಲ್ಲಬೇಕು ಅಂತ ಯೋಚನೆ ಮಾಡಿ ಎಂದು ಸುದೀಪ್ ಕಿವಿಮಾತು ಹೇಳಿದ್ದಾರೆ.
BBK 11: ಈ ವಾರ ಓರ್ವ ಸ್ಪರ್ಧಿಗೆ ಸಿಗಲಿದೆ ಟಿಕೆಟ್ ಟು ಫಿನಾಲೆ ಪಾಸ್: ಯಾರಿಗೆ?