ಬಿಗ್ ಬಾಸ್ ಕನ್ನಡ ಸೀಸನ್ 11 (Bigg Boss Kannada 11) ರೋಚಕತೆ ಸೃಷ್ಟಿಸುತ್ತಿದೆ. ಕಳೆದ ವಾರ ಯಾವುದೇ ಎಲಿಮಿನೇಷನ್ ಪ್ರಕ್ರಿಯೆ ನಡೆದಿರಲಿಲ್ಲ. ವೋಟಿಂಗ್ ಲೈನ್ಸ್ ತೆರೆದಿಲ್ಲದ ಕಾರಣ ನಾಮಿನೇಟ್ ಆಗಿದ್ದ ಸ್ಪರ್ಧಿಗಳು ಬಚಾವ್ ಆದರು. ಆದರೆ, ಕಿಚ್ಚ ಸುದೀಪ್ ಅವರು ಐಶ್ವರ್ಯಾ ಸಿಂಧೋಗಿ ಹಾಗೂ ಚೈತ್ರಾ ಕುಂದಾಪುರ ಅವರಿಗೆ ನೀವು ಡೇಂಜರ್ ಝೋನ್ನಲ್ಲಿದ್ದೀರಿ ಎಂಬ ಸಂದೇಶ ನೀಡಿದರು. ಇದರ ಬೆನ್ನಲ್ಲೇ ದೊಡ್ಮನೆಗೆ ಇದೀಗ ಮಾಜಿ ಬಿಗ್ ಬಾಸ್ ಸ್ಪರ್ಧಿಗಳ ಎಂಟ್ರಿ ಆಗಿದೆ.
ಹಳೆಯ ಬಿಗ್ ಬಾಸ್ ಸ್ಪರ್ಧಿಗಳು ಮನೆಗೆ ಆಗಮಿಸಿ ಬಿಗ್ ಸರ್ಪ್ರೈಸ್ ಕೊಟ್ಟಿದ್ದು ಸ್ಪರ್ಧಿಗಳೆಲ್ಲಾ ಕುಣಿದು ಕುಪ್ಪಳಿಸಿದ್ದಾರೆ. ಬಿಗ್ ಬಾಸ್ ಸೀಸನ್- 10 ರ ಸ್ಪರ್ಧಿಗಳು ಮನೆಗೆ ಪ್ರವೇಶಿಸಿದ್ದಾರೆ. ಇದರಿಂದ ಎಲ್ಲ ಹಾಲಿ ಸ್ಪರ್ಧಿಗಳು ಸಖತ್ ಖುಷಿಯಾಗಿದ್ದಾರೆ. ಅವರ ಜೊತೆ ಬೆರೆತು ಸಖತ್ ಸ್ಟೆಪ್ಸ್ ಕೂಡ ಹಾಕಿದ್ದಾರೆ. ಅದರಲ್ಲೂ ಹನುಮಂತ ಅವರು ಮನೆಗೆ ಬಂದ ತನಿಷಾ ಕುಪ್ಪಂಡ ಜೊತೆಗೆ ಡ್ಯಾನ್ಸ್ ಮಾಡಿದ್ದಾರೆ. ಚುಟು ಚುಟು ಅಂತೈತಿ ಹಾಡಿಗೇನೆ ಹನುಮಂತ ಇಲ್ಲಿ ನೃತ್ಯ ಮಾಡಿದ್ದಾರೆ.
ಇನ್ನು ಮಾವ ಎಂದು ತುಕಾಲಿ ಸಂತು ಹೆಗಲ ಮೇಲೆ ಹನುಮಂತು ಹಾರಿದ್ದಾರೆ. ಆಗ ಸಂತು ಅವರು ಮಾವ ಮಾವ ಅಂದು ಬಿಟ್ಟು ಮಾನಸನೇ ಕಳಿಸಿ ಬಿಟ್ಟಿಯಲ್ಲಾ ಎಂದು ಕಾಲೆಳೆದಿದ್ದಾರೆ. ಸಂತು ಜೊತೆ ಪಂತು ಅಂದರೆ ವರ್ತೂರು ಸಂತೋಷ ಕೂಡ ಬಿಗ್ ಮನೆಗೆ ಬಂದಿದ್ದು ಇಬ್ಬರು ತಬ್ಬಿಕೊಂಡು ಖುಷಿ ಪಟ್ಟಿದ್ದಾರೆ.
ಇತ್ತ ಡ್ರೋನ್ ಪ್ರತಾಪ್ ಕೂಡ ಮನೆಗೆ ಕಾಲಿಟ್ಟಿದ್ದಾರೆ. ಮನೆಯ ಮಂದಿ ಜೊತೆಗೆ ಮಾತು ಕೂಡ ಆಡಿದ್ದಾರೆ. ಮಾತನಾಡುವ ಸಂದರ್ಭ ಚೈತ್ರಾ ಕುಂದಾಪುರ ಅವರು ಪ್ರತಾಪ್ ಅಣ್ಣ ಎಂದು ಹೇಳುತ್ತಾರೆ. ಆಗ ನೀವು ನನಗೆ ಅಣ್ಣ ಅಂತ ಕರೀಲೇಬೇಡಿ ಅಂತಲೇ ಪ್ರತಾಪ್ ಹೇಳ್ತಾರೆ. ಈ ಮಾತಿನಿಂದ ಮನೆ ಇತರ ಸದಸ್ಯರು ನಕ್ಕು ನಲಿದಿದ್ದಾರೆ. ಈ ಹಿಂದೆ ಬಿಗ್ ಬಾಸ್ ಮನೆಗೆ ಹಳೆ ಸ್ಪರ್ಧಿಗಳನ್ನ ಒಬ್ಬರು ಅಥವಾ ಇಬ್ಬರನ್ನು ಮಾತ್ರ ಕಳುಹಿಸುತ್ತಿದ್ದರು. ಆದರೆ ಈ ಬಾರಿ ಒಟ್ಟು ನಾಲ್ವರು ಮಾಜಿ ಸ್ಪರ್ಧಿಗಳ ಆಗಮನವಾಗಿದೆ.
BBK 11: ಕನ್ಫೆಷನ್ ರೂಮ್ನಲ್ಲಿರುವ ಚೈತ್ರಾ ಕುಂದಾಪುರ ರೀ ಎಂಟ್ರಿ ಯಾವಾಗ?: ಇಲ್ಲಿದೆ ಮಾಹಿತಿ