Thursday, 12th December 2024

BBK 11: ಬಿಗ್ ಬಾಸ್ ಮನೆಯಲ್ಲಿ ಉಗ್ರಂ ಮಂಜುವಿನ ಬಾಯಿಮುಚ್ಚಿಸಿದ ಧನರಾಜ್ ಆಚಾರ್: ಏನಾಯಿತು?

Ugramm Manju and Dhanraj Achar

ಬಿಗ್ ಬಾಸ್ ಕನ್ನಡ ಸೀಸನ್ 11 (Bigg Boss Kannada) ಎರಡನೇ ವಾರಕ್ಕೆ ಕಾಲಿಟ್ಟಿದ್ದು, ಈ ವಾರ ಕುತೂಹಲ ಕೆರಳಿಸಿದೆ. ಸ್ವರ್ಗ-ನರಕ ಕಾನ್ಸೆಪ್ಟ್ ಮುಂದುವರೆದಿದ್ದು, ನರಕದಲ್ಲಿದ್ದ ರಂಜಿತ್ ಕುಮಾರ್ ಮತ್ತು ಸ್ವರ್ಗದಲ್ಲಿದ್ದ ಜಗದೀಶ್ ನಡುವಣ ಸ್ಥಾನ ಅದಲು-ಬದಲು ಆಗಿದೆ. ಇವುಗಳ ಮಧ್ಯೆ ಬಿಗ್ ಬಾಸ್ ಮನೆ ಮಂದಿಗೆ ಟಾಸ್ಕ್ ಒಂದನ್ನು ನೀಡಿದ್ದು, ಇದರಲ್ಲಿ ಯಾರು ಅರ್ಹರು? ಯಾರು ಅನರ್ಹರು? ಎಂದು ಹೇಳಬೇಕು. ಅಷ್ಟೇ ಅಲ್ಲದೆ ಇವರಲ್ಲಿ ಈ ವಾರ ಮನೆಯಿಂದ ಹೊರ ಹೋಗಲು ಆಯ್ಕೆ ಆಗುವ ಸದಸ್ಯನ ಮುಖಕ್ಕೆ ಮಸಿ ಬಳಿಯ ಬೇಕು.

ಈ ಟಾಸ್ಕ್​​ನಲ್ಲಿ ಧನರಾಜ್ ಆಚಾರ್ ಮತ್ತು ಧರ್ಮ ಕೀರ್ತಿರಾಜ್ ಮುಖಾಮುಖಿ ಆಗಿದ್ದಾರೆ. ಇವರ ವಾದ-ಪ್ರತಿವಾದದ ನಡುವೆ ಧನರಾಜ್ ಅವರು ಉಗ್ರಂ ಮಂಜುಗೆ ಸರಿಯಾಗಿ ಟ್ಟಕ್ಕರ್ ಕೊಟ್ಟಿದ್ದಾರೆ. ಅಲ್ಲದೆ ಧನರಾಜ್ ಪರ ಚೈತ್ರಾ ಕುಂದಾಪುರ ಮಾತನಾಡಿ  ಸಪೋರ್ಟ್ ಮಾಡಿದ್ದಾರೆ.

ಮಂಜುಗೆ ಟಕ್ಕರ್ ಕೊಟ್ಟ ಧನರಾಜ್:

ಅರ್ಹರು ಮತ್ತು ಅನರ್ಹರು ಟಾಸ್ಕ್‌ನಲ್ಲಿ ಧನರಾಜ್ ಆಚಾರ್ ಆಟದ ಬಗ್ಗೆ ಹೆಚ್ಚು ಚರ್ಚೆ ಆಯಿತು. ಧನರಾಜ್ ಸಾಕಷ್ಟು ನರ್ವಸ್ ಆಗುತ್ತಾರೆ ಎಂಬ ಅಭಿಪ್ರಾಯ ಕೇಳಿಬಂತು. ಅಲ್ಲದೆ ನೀವು ಟಾಸ್ಕ್​ನಲ್ಲಿ ಕಾಣಿಸುವುದಿಲ್ಲ, ಯಾವಾಗಲು ಹಿಂದೆಯೇ ಇರುತ್ತೀರಿ, ನಿಮ್ಮ ವಾಯ್ಸ್ ಬಲ್ಲ. ಹಾಗಾಗಿ ನೀವು ಮನೆಯಲ್ಲಿ ಇರಲು ಅನರ್ಹರು ಎಂಬ ಅರ್ಥದಲ್ಲಿ ಉಗ್ರಂ ಮಂಜು ವಾದ ಮಾಡುತ್ತಾರೆ. ಇದಕ್ಕೆ ಧನರಾಜ್ ಸರಿಯಾಗಿ ಉತ್ತರ ಕೊಡುತ್ತಾರೆ.

ಯಾವುದೇ ಟಾಸ್ಕ್ ಆಗಲಿ ನಾನು ಮಾಡುತ್ತೇನೆ ಎಂದು ಕೈ ಎತ್ತುತ್ತೇನೆ. ಹಿಂದಿನ ಟಾಸ್ಕ್​ನಲ್ಲಿ ಕೂಡ ನಾನು ಆಡುತ್ತೇನೆ ಎಂದಿದ್ದೆ. ನಿಮ್ಮ ಜೊತೆ ಐ ಕಾಂಟೆಕ್ಟ್ ಮಾಡಿದ ಮೇಲೂ ನೀವು ನನ್ನ ಗಣನೆಗೆ ತೆಗೆದುಕೊಂಡಿಲ್ಲ, ನೀವೇ ನನ್ನ ಡಾಮಿನೇಟ್ ಮಾಡುತ್ತಾ ಇದ್ದೀರ. ಟಾಸ್ಕ್ ಮುಗಿದ ಬಳಿಕ ನೀನು ಯಾಕೆ ಕೈ ಎತ್ತಲಿಲ್ಲ ಎಂದು ನೀವು ಕೇಳುತ್ತೀರಿ, ಆಗ ನಾನು ಕೈ ಎತ್ತಿದ್ದೆ ಎಂದಿದ್ದಕ್ಕೆ ಹೌದಾ ನಾನು ನೋಡಿಲ್ಲ ಎಂದು ಹೇಳುತ್ತೀರಿ. ಆಗ ಕೂಡ ನೀವು ನನ್ನ ಬಳಿ ಡಿಸ್ಕಷನ್ ಟೈಮ್​ನಲ್ಲಿ ಎಲ್ಲಿದ್ರಿ ಅಂತ ಕೇಳ್ತೀರ, ನಾನು ನಿಮ್ಮ ಪಕ್ಕದಲ್ಲೇ ಇದ್ದೆ. ಇದರ ಅರ್ಥ ನಿಮ್ಮ ಪ್ರಕಾರ ನಾನು ಏನು ಅಲ್ಲ, ನಿಮ್ಮ ಪ್ರಕಾರ ನಾನು ಕಾಂಪಿಟೇಟರ್ ಅಲ್ಲ. ಅದಕ್ಕೋಸ್ಕರ ನಿಮ್ಮಲ್ಲೇ ಪ್ರಾಬ್ಲಂ ಇಟ್ಕೊಂಡು ನನ್ನ ಹತ್ರ ಕೇಳೋಕೆ ಬರಬೇಡಿ ಸರ್ ಎಂದು ಹೇಳಿದ್ದಾರೆ.

ಇನ್ನು ಧನರಾಜ್ ಮಸ್ತ್ ಕಾಮಿಡಿ ಮಾಡುತ್ತಾರೆ. ಮುಖ್ಯವಾಗಿ ಯಾವುದೇ ಕೆಟ್ಟ ಪದಗಳನ್ನು ಉಪಯೋಗಿಸದೆ ಶುದ್ಧವಾಗಿ ಕಾಮಿಡಿ ಮಾಡುತ್ತಾರೆ ಆದರೆ, ಧರ್ಮ ಕೀರ್ತಿರಾಜ್‌ ನಿಮ್ಮ ಸ್ಟ್ರೆಂತ್ ಏನು ಅಂತ ಚೈತ್ರಾ ಅವರು ಕೇಳಿದ್ದಾರೆ. ಚೈತ್ರಾ ಮಾತಿಗೆ ಒಂದು ಕ್ಷಣ ಧರ್ಮ ಅವರಿಗೆ ಏನು ಮಾತನಾಡಬೇಕು ಎಂಬುದೇ ದೋಚಲಿಲ್ಲ. ಆದರೆ, ಕ್ಯಾಪ್ಟನ್ ಅವರ ಅಂತಿಮ ನಿರ್ಧಾರ ಆಗಿದ್ದರಿಂದ ಧನರಾಜ್ ಮತ್ತು ಧರ್ಮ ಕೀರ್ತಿರಾಜ್ ಅರ್ಹರು ಮತ್ತು ಅನರ್ಹರು ಟಾಸ್ಕ್‌ನಲ್ಲಿ ಧರ್ಮ ಸೇಫ್ ಆಗುತ್ತಾರೆ. ಧನರಾಜ್‌ಗೆ ಮಸಿಯನ್ನ ಹಾಕುತ್ತಾರೆ.

BBK 11: ನೀನು ಯಾವನೋ: ಬಿಗ್ ಬಾಸ್ ಮನೆ ಮತ್ತೆ ರಣರಂಗ, ಏಕವಚನದಲ್ಲಿ ಜಗದೀಶ್ ಬೆವರಿಳಿಸಿದ ಕ್ಯಾಪ್ಟನ್ ಹಂಸ