Friday, 3rd January 2025

BBK 11: ಕೊನೆಗೂ ಬಂದೇ ಬಿಡ್ತು ಆ ದಿನ: ಬಿಗ್ ಬಾಸ್​ನಲ್ಲಿ ಫ್ಯಾಮಿಲಿ ವೀಕ್

BBK 11 Family week

ಬಿಗ್ ಬಾಸ್ ಕನ್ನಡ ಸಿಸನ್ 11 (Bigg Boss Kannada 11) ಇನ್ನು ಕೆಲವೇ ವಾರಗಳಲ್ಲಿ ಪೂರ್ಣಗೊಳ್ಳಲಿದೆ. ಸ್ಪರ್ಧಿಗಳ ಮಧ್ಯೆ ಕಾಂಪಿಟೇಷನ್ ಜೋರಾಗಿದೆ. ಸುಮಾರು 94 ದಿನಗಳ ಕಾಲ ಕುಟುಂಬವನ್ನು ಬಿಟ್ಟು ಬಿಗ್ ಬಾಸ್ ಮನೆಯಲ್ಲಿರುವ ಸ್ಪರ್ಧಿಗಳಿಗೆ ಕುಟುಂಬದವರನ್ನು ಭೇಟಿ ಮಾಡುವ ಅವಕಾಶ ಒದಗಿಸಲಾಗಿದೆ. ಈ ವಾರ ಫ್ಯಾಮಿಲಿ ವೀಕ್. ಸ್ಪರ್ಧಿಗಳ ಅಮ್ಮಂದಿರು, ಅಪ್ಪಂದಿರು ಮಡದಿ, ಮಕ್ಕಳು ಬಿಗ್ ಬಾಸ್​ಗೆ ಬಂದಿದ್ದಾರೆ.

ಬಿಗ್ ಬಾಸ್ ಮನೆಯಲ್ಲಿರುವ 9 ಸ್ಪರ್ಧಿಗಳ ಕುಟುಂಬದವರು ಆಗಮಿಸುತ್ತಿದ್ದಾರೆ. ಅದರಲ್ಲಿ ಮುಖ್ಯವಾಗಿ ಭವ್ಯಾ ಗೌಡ ಮತ್ತು ತ್ರಿವಿಕ್ರಮ್ ಅವರ ತಾಯಂದಿರು ಬಿಗ್ ಬಾಸ್ ಮನೆಯೊಳಗೆ ಕಾಲಿಟ್ಟಿದ್ದಾರೆ. ಆದರೆ, ಇದರಲ್ಲೂ ಬಿಗ್ ಬಾಸ್ ಒಂದು ಟ್ವಿಸ್ಟ್ ಇಟ್ಟಿದ್ದಾರೆ. ಸ್ಪರ್ಧಿಗಳಿಗೆ ಹೊಸ ಟಾಸ್ಕ್ ನೀಡಲಾಗಿದೆ. ಟಾಸ್ಕ್‌ ಗೆದ್ದವರಿಗೆ ಮಾತ್ರ ತಮ್ಮ ಮನೆಯವರನ್ನು ಭೇಟಿ ಮಾಡುವ ಅವಕಾಶ ಕೊಡಲಾಗುತ್ತದೆ.

ಪ್ರೋಮೋದಲ್ಲಿ ಇದು ಗೊತ್ತಾಗಿದೆ. ಯಾರ ಕುಟುಂಬದವರು ಬಂದಿರುತ್ತಾರೋ, ಆಗ ಆ ಸ್ಪರ್ಧಿ ಅಲ್ಲಾಡದೇ, ಯಾವುದೇ ರಿಯಾಕ್ಷನ್ ಇಲ್ಲದೇ ನಿಲ್ಲಬೇಕು. ಭವ್ಯಾ ತಾಯಿ ಬಂದಾಗ, ಅವರು ತುಂಬ ಎಮೋಷನಲ್‌ ಆದರು. ತಾಯಿ ಜೊತೆ ಭಾವುಕರಾಗಿ ಮಾತನಾಡಿ ಕಣ್ಣೀರಿಟ್ಟರು. ಆದರೆ ತ್ರಿವಿಕ್ರಮ್‌ಗೆ ಆ ಅವಕಾಶ ಸಿಗಲಿಲ್ಲ ಎಂಬಂತೆ ಕಂಡುಬಂದಿದೆ.

ಈ ಟಾಸ್ಕ್ ಅನ್ನು 10 ನಿಮಿಷದಲ್ಲಿ ಪೂರ್ಣಗೊಳಿಸಿದ್ರೆ ಅಮ್ಮನನ್ನು ಭೇಟಿ ಮಾಡಬಹುದು ಎಂದು ಬಿಗ್ ಬಾಸ್ ತ್ರಿವಿಕ್ರಮ್​ಗೆ ಹೇಳಿದ್ದರು. ಅದರಂತೆ ಆ್ಯಕ್ಟಿವಿಟಿ ರೂಮ್​ನಲ್ಲಿ ತ್ರಿವಿಕ್ರಮ್ ಅವರು, ಪಜಲ್ ಅನ್ನು ಫುಲ್ ಟೆನ್ಷನ್​​ನಲ್ಲಿ ಕಂಪ್ಲೀಟ್ ಮಾಡಲಿಲ್ಲ. ಹಾಗಾಗಿ, ತಾಯಿಯನ್ನು ಭೇಟಿ ಮಾಡಿಸಿ, ಎಂದು ಬಿಗ್ ಬಾಸ್ ಬಳಿ ಗೊಗರೆದರು ತ್ರಿವಿಕ್ರಮ್.

ಅತ್ತ ಮನೆಯೊಳಗೆ ಬಂದಿದ್ದ ತ್ರಿವಿಕ್ರಮ್ ತಾಯಿಗೆ ಮಗನ ನೋಡುವ ಅವಕಾಶ ಸಿಗುತ್ತಾ ಗೊತ್ತಿಲ್ಲ, ಆದರೆ ಭವ್ಯಾ ಗೌಡ ಜೊತೆ ಸಖತ್ ಹರಟೆ ಹೊಡೆದಿದ್ದಾರೆ. ಭವ್ಯ, ತ್ರಿವಿಕ್ರಮ್ ಅವರ ತಾಯಿಯನ್ನು ತಬ್ಬಿಕೊಂಡು ಸಂತಸ ಪಟ್ಟರು. ಬಳಿಕ ಸೋಫಾ ಮೇಲೆ ಕುಳಿತು ಇಬ್ಬರು ಮಾತನಾಡುವಾಗ, ನನ್ನ ಮಗನ ತಾಯಿಯಾಗಿ, ಫ್ರೆಂಡ್ ಆಗಿ ಎಲ್ಲ ತರದಲ್ಲೂ ಇಬ್ಬರು ಚೆನ್ನಾಗಿದ್ದೀರಿ. ರಾಧಕೃಷ್ಣನ ಥರ ಇದೀರಿ ಎಂದು ತ್ರಿವಿಕ್ರಮ್ ತಾಯಿ, ಭವ್ಯಗೆ ಹೇಳಿದ್ದಾರೆ. ಇದರಿಂದ ಭವ್ಯಾ ನಾಚಿ ನೀರಾಗಿದ್ದಾರೆ.

BBK 11: ಈ ವಾರ ದೊಡ್ಮನೆಯಿಂದ ಹೊರಹೋಗಲು ಯಾರೆಲ್ಲ ನಾಮಿನೇಟ್?