ಬಿಗ್ ಬಾಸ್ ಕನ್ನಡ ಸೀಸನ್ 11 (Bigg Boss Kannada 11) ಯಶಸ್ವಿಯಾಗಿ 100ನೇ ದಿನ ಪೂರೈಸಿ ಮುನ್ನುತ್ತಿದೆ. ಫಿನಾಲೆ ವೀಕ್ ಹತ್ತಿರವಾಗುತ್ತಿದ್ದು ಸದ್ಯ ಮನೆಯಲ್ಲಿರುವ ಒಂಬತ್ತು ಸ್ಪರ್ಧಿಗಳಲ್ಲಿ ಯಾರೆಲ್ಲ ಟಾಪ್ 5ಗೆ ಬರಬಹುದು ಎಂಬ ಲೆಕ್ಕಚಾರ ನಡೆಯುತ್ತಿದೆ. ಇದರ ನಡುವೆ ಭಾನುವಾರ ಕಿಚ್ಚ ಸುದೀಪ್ ಸ್ಪರ್ಧಿಗಳಿಗೆ ಎಚ್ಚರಿಕೆ ನೀಡಿದ್ದಾರೆ. ಉಳಿದ ಮೂರು ವಾರಗಳಲ್ಲಿ ಸ್ಪರ್ಧಿಗಳು ಹೇಗೆ ಆಟ ಆಡಬೇಕು ಎಂದು ಹೇಳಿದ್ದಾರೆ.
ಇದರ ಜೊತೆಗೆ ಸುದೀಪ್ ಅವರು ವೇದಿಕೆ ಮೇಲೆ ದೊಡ್ಡ ಅನೌನ್ಸ್ಮೆಂಟ್ ಮಾಡಿದ್ದಾರೆ. ಈ ವಾರ ನಿಮಗೆಲ್ಲಾ ತುಂಬಾ ಮುಖ್ಯವಾಗಿರೋ ವಾರ. ಗೇಮ್ ಚೇಂಜಿಂಗ್ ವೀಕ್ ಆಗಿದೆ. ಈ ವಾರ ನಡೆಯುವ ಗೇಮ್ಗಳಲ್ಲಿ ಒಬ್ಬ ವ್ಯಕ್ತಿಗೆ ಟಿಕೆಟ್ ಟು ಫಿನಾಲೆ ಸಿಗುತ್ತೆ ಎಂದು ಹೇಳಿದ್ದಾರೆ. ಹಾಗೆಯೆ ಫಿನಾಲೆ ಬಗ್ಗೆ ದೊಡ್ಡ ಅಪ್ಡೇಟ್ ಕೊಟ್ಟಿದ್ದಾರೆ.
ಕಳೆದ ವಾರದ ಕಥೆ ಕಿಚ್ಚನ ಜೊತೆ ಸಂಚಿಕೆಯಲ್ಲಿ ಸುದೀಪ್ ಅವರು ಪದೇ ಪದೇ ಉಳಿದಿರೋದು ಮೂರು ವಾರ ಅಷ್ಟೇ ಅಂತ ಸ್ಪರ್ಧಿಗಳಿಗೆ ನೆನಪಿಸಿದ್ದಾರೆ. ಮೂರು ವಾರ ಬಾಕಿ ಇದೆ ಅಂತ ಒತ್ತಿ ಒತ್ತಿ ಕಿಚ್ಚ ಸುದೀಪ್ ಹೇಳುತ್ತಿದ್ದರು. ಅಲ್ಲಿಗೆ.. ಇನ್ನು ಮೂರು ವಾರಗಳಲ್ಲಿ ಗ್ರ್ಯಾಂಡ್ ಫಿನಾಲೆ ನಡೆಯೋದು ಪಕ್ಕಾ ಆಗಿದೆ. ಹೀಗಾಗಿ ಜನವರಿ 26 ರಂದು ಫಿನಾಲೆ ನಡೆಯಲಿದೆ ಎಂಬ ಮಾತುಗಳು ಕೇಳಿಬಂದಿದೆ. ಅಂದು ಭಾನುವಾರ ಹಾಗೂ ಗಣರಾಜ್ಯೋತ್ಸವ ಎರಡೂ ಇದೆ. ಈ ವಿಶೇಷ ದಿನದಂದೇ ಫಿನಾಲೆ ನಡೆಯುವ ಸಾಧ್ಯತೆ ದಟ್ಟವಾಗಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿ ಹರಿದಾಡಿವೆ.
ಸದ್ಯ ದೊಡ್ಮನೆಯಲ್ಲಿ ಒಂಭತ್ತು ಮಂದಿ ಇದ್ದಾರೆ. ಈ ಪೈಕಿ ಐವರು ಫಿನಾಲೆ ತಲುಪಲಿದ್ದಾರೆ. ಉಳಿದ ನಾಲ್ವರ ಪೈಕಿ ಒಂದು ಡಬಲ್ ಎಲಿಮಿನೇಷನ್ ನಡೆದು, ಮತ್ತಿಬ್ಬರು ಒಂದೊಂದು ವಾರ ಎಲಿಮಿನೇಟ್ ಆಗುವ ಸಾಧ್ಯತೆ ದಟ್ಟವಾಗಿದೆ. ಇನ್ನು ಬಿಗ್ ಬಾಸ್ ಕಾರ್ಯಕ್ರಮಕ್ಕೆ ಭರ್ಜರಿ ಟಿಆರ್‌ಪಿ ಕೂಡ ಬರುತ್ತಿದೆ.
BBK 11: ರೂಲ್ಸ್ ಬ್ರೇಕ್ ಮಾಡಿ ಟಾಸ್ಕ್ ಗೆದ್ರಾ ಹನುಮಂತ?: ಮನೆಯವರ ಆರೋಪ ಏನು?