Saturday, 4th January 2025

BBK 11: ಬಿಗ್ ಬಾಸ್ ಕನ್ನಡ ಸೀಸನ್ 11 ಫಿನಾಲೆಗೆ ದಿನಾಂಕ ಫಿಕ್ಸ್: ಯಾವಾಗ ನೋಡಿ

BBK 11 Final

ಬಿಗ್ ಬಾಸ್ ಕನ್ನಡ ಸೀಸನ್ 11 (Bigg Boss Kannada 11) ಮಹತ್ವದ ಘಟ್ಟತ್ತ ತಲುಪಿದ್ದು ರೋಚಕತೆ ಸೃಷ್ಟಿಸುತ್ತಿದೆ. ಆರಂಭದಲ್ಲಿ ಶೋಗೆ ದೊಡ್ಡ ಮಟ್ಟದ ರೆಸ್ಪಾನ್ಸ್ ಇರಲಿಲ್ಲ. ಆದರೀಗ ಬಿಗ್ ಬಾಸ್​ಗೆ ವೀಕ್ಷಕರ ಸಂಖ್ಯೆ ಹೆಚ್ಚಾಗಿದೆ. ವೀಕೆಂಡ್​ನ ಟಿಆರ್​ಪಿ ಕೂಡ ಎರಡಂಕಿ ದಾಟಿದೆ. ಬಿಗ್ ಬಾಸ್ ಅನ್ನು ಪ್ರತಿದಿನ ವೀಕ್ಷಣೆ ಮಾಡುತ್ತಿದ್ದಾರೆ. ಇದೀಗ ಬಿಗ್ ಬಾಸ್​ ಶತಕದ ದಿನದತ್ತ ಕಾಲಿಡುತ್ತಿದ್ದು ಫೈನಲ್​ಗೆ ಹತ್ತಿರವಾಗುತ್ತಿದೆ. ವಿಶೇಷ ಎಂದರೆ ಇದೇ ತಿಂಗಳು ಬಿಬಿಕೆ 11 ಫಿನಾಲೆ ನಡೆಯಲಿದೆ.

ಬಿಗ್‌ ಬಾಸ್‌ 11ರ ಸೀಸನ್‌ ಶುರುವಾಗಿ 94 ದಿನಗಳು ಕಳೆದಿದೆ. ಪ್ರತಿ ಸೀಸನ್‌ನಂತೆ ಈ ಸೀಸನ್‌ ಕೂಡ ಒಂದಷ್ಟು ವಾದ – ವಾಗ್ವಾದದಿಂದಲೇ ಸದ್ದು ಮಾಡಿದೆ. ಆರಂಭಿಕ ವಾರಗಳಲ್ಲಿ ಜಗದೀಶ್‌- ರಂಜಿತ್‌ ಅವರ ನಡುವಿನ ಮಾತಿನ ಚಕಮಕಿ ಬಿಗ್‌ ಬಾಸ್‌ ಮನೆಯಿಂದ ದೊಡ್ಡ ವಿವಾದದ ಸುದ್ದಿಯಾಗಿಯೇ ಹೊರಹೊಮ್ಮಿತ್ತು.

ದೊಡ್ಮನೆಯಲ್ಲಿ ಜಗಳಗಳು ಕಾಮನ್. ಆದರೆ, ಈ ಸೀಸನ್​ನಲ್ಲಿ ಅದು ಕೊಂಚ ಅಧಿಕವಾಗಿದೆ. ಅಚ್ಚರಿ ಎಂದರೆ ಇದೇ ಪ್ರೇಕ್ಷಕರಿಗೆ ಇಷ್ಟವಾಗುತ್ತಿದೆ. ಇದಕ್ಕೆ ತಕ್ಕಂತೆ ಬಿಗ್ ಬಾಸ್ ಕೂಡ ಪ್ರತಿದಿನ ಒಂದಲ್ಲ ಒಂದು ಟ್ವಿಸ್ಟ್ ಕೊಡುತ್ತಿದ್ದಾರೆ. ನಾಮಿನೇಷನ್ ವಿಚಾರ, ಎಲಿಮಿನೇಷನ್​ನಲ್ಲಿ, ಟಾಸ್ಕ್​ನಲ್ಲಿ ಸರ್​ಪ್ರೈಸ್ ನೀಡುತ್ತಿದ್ದಾರೆ. ಈ ವಾರ ಫ್ಯಾಮಿಲಿ ವೀಕ್ ಆಗಿದ್ದು, ಮನೆಯಲ್ಲಿರುವ ಸ್ಪರ್ಧಿಗಳ ಕುಟುಂಬದವರು ದೊಡ್ಮನೆಗೆ ಎಂಟ್ರಿ ಕೊಡುತ್ತಿದ್ದಾರೆ.

ಸೀಸನ್ 11ರ ಶೋವನ್ನ ಒಂದು ವಾರಗಳ ಕಾಲ ಮುಂದುವರೆಸುವುದಕ್ಕೆ ಪ್ಲ್ಯಾನ್‌ ಮಾಡಲಾಗಿದೆ. ಹೀಗಾಗಿ ಜನವರಿ 26 ರಂದು ಫಿನಾಲೆ ನಡೆಯಲಿದೆ ಎಂಬ ಮಾತುಗಳು ಕೇಳಿಬಂದಿದೆ. ಅಂದು ಭಾನುವಾರ ಹಾಗೂ ಗಣರಾಜ್ಯೋತ್ಸವ ಎರಡೂ ಇದೆ. ಈ ವಿಶೇಷ ದಿನದಂದೇ ಫಿನಾಲೆ ನಡೆಯುವ ಸಾಧ್ಯತೆ ದಟ್ಟವಾಗಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿ ಹರಿದಾಡಿವೆ. ಸದ್ಯ ದೊಡ್ಮನೆಯಲ್ಲಿ ಒಂಭತ್ತು ಮಂದಿ ಇದ್ದಾರೆ. ಈ ಪೈಕಿ ಐವರು ಫಿನಾಲೆ ತಲುಪಲಿದ್ದಾರೆ. ಉಳಿದ ನಾಲ್ವರ ಪೈಕಿ ಒಂದು ಡಬಲ್ ಎಲಿಮಿನೇಷನ್ ನಡೆದು, ಮತ್ತಿಬ್ಬರು ಒಂದೊಂದು ವಾರ ಎಲಿಮಿನೇಟ್ ಆಗುವ ಸಾಧ್ಯತೆ ದಟ್ಟವಾಗಿದೆ. ಇನ್ನು ಬಿಗ್‌ ಬಾಸ್‌ ಕಾರ್ಯಕ್ರಮಕ್ಕೆ ಭರ್ಜರಿ ಟಿಆರ್‌ಪಿ ಕೂಡ ಬರುತ್ತಿದೆ.

BBK 11: ತಾಯಿಯ ಧ್ವನಿ ಕೇಳಿ ಇಡೀ ಬಿಗ್ ಬಾಸ್ ಮನೆ ಸುತ್ತಿದ ಉಗ್ರಂ ಮಂಜು