ಬಿಗ್ ಬಾಸ್ ಕನ್ನಡ ಸೀಸನ್ 11 (Bigg Boss Kannada 11) ಶುರುವಾಗಿ ಎರಡು ವಾರ ಕಳೆದಿದ್ದು, ಮೂರನೇ ವಾರ ನಡೆಯುತ್ತಿದೆ. ಈ ಬಾರಿ ಮನೆ ಹೆಚ್ಚು ಜಗಳಗಳಿಂದಲೇ ಕೂಡಿದೆ. ಇದು ಜನರಿಗೆ ಕಿರಿ ಕಿರಿ ಉಂಟು ಮಾಡಿದೆ ಎಂದು ಹೇಳಲಾಗುತ್ತಿತ್ತು. ಆದರೆ, ಇದು ಸುಳ್ಳು. ಬಿಗ್ ಬಾಸ್ ಎರಡನೇ ವಾರ ಕೂಡ ಭರ್ಜರಿ ಟಿಆರ್ಪಿ ಪಡೆದುಕೊಂಡಿದೆ. ಅದರಲ್ಲೂ ವೀಕೆಂಡ್ನಲ್ಲಿ ಕಿಚ್ಚ ಸುದೀಪ್ ಎಪಿಸೋಡ್ಗೆ ಜನರು ಅದ್ಭುತ ರೆಸ್ಪಾನ್ಸ್ ನೀಡಿದ್ದಾರೆ.
ಗ್ರ್ಯಾಂಡ್ ಓಪನಿಂಗ್ ದಿನ ಬಿಗ್ ಬಾಸ್ಗೆ 9.9 ಟಿಆರ್ಪಿ ಸಿಕ್ಕಿತ್ತು. ಬಿಗ್ ಬಾಸ್ ಲಾಂಚ್ ದಿನ ಇಷ್ಟು ದೊಡ್ಡ ಮಟ್ಟದ ಟಿಆರ್ಪಿ ಸಿಕ್ಕಿದ್ದು ಇದೇ ಮೊದಲು. ಮೊದಲ ವಾರ ಬಿಗ್ ಬಾಸ್ಗೆ ವಾರದ ದಿನಗಳಲ್ಲಿ 6.9 ಟಿಆರ್ಪಿ ದೊರೆತಿತ್ತು. ಕಳೆದ ವಾರದ ದಿನಗಳಲ್ಲಿ ಬಿಗ್ ಬಾಸ್ 7.2 ಟಿವಿಆರ್ ಪಡೆದುಕೊಂಡಿದೆ. ಶನಿವಾರ 8.8 ಟಿವಿಆರ್ ಸಿಕ್ಕಿದೆ. ಭಾನುವಾರ 9.2 ಟಿವಿಆರ್ ದೊರೆತಿದೆ. ಶನಿವಾರ ಹಾಗೂ ಭಾನುವಾರದ ಟಿವಿಆರ್ ಸೇರಿಸಿದರೆ 9 ಟಿವಿಆರ್ ಆಗಲಿದೆ. ಹೀಗೆ ಕಿಚ್ಚನ ಎಪಿಸೋಡ್ಗೆ ಭರ್ಜರಿ ಟಿಆರ್ಪಿ ಸಿಕ್ಕಿದೆ.
ಧಾರಾವಾಹಿ ವಿಚಾರದಲ್ಲಿ ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಲಕ್ಷ್ಮೀ ನಿವಾಸ ಮೊದಲ ಸ್ಥಾನದಲ್ಲಿ ಇದೆ. ಈ ಧಾರಾವಾಹಿ ಉತ್ತಮ ಟಿಆರ್ಪಿ ಪಡೆದಿದೆ. ಎರಡನೇ ಸ್ಥಾನದಲ್ಲಿ ಅಮೃತಧಾರೆ ಧಾರಾವಾಹಿ ಇದೆ. ಈ ಧಾರಾವಾಹಿ ಪ್ರಮುಖ ಘಟ್ಟ ತಲುಪಿದೆ. ಹಲವು ಸತ್ಯಗಳು ರಿವೀಲ್ ಆಗುತ್ತಿವೆ. ಹೀಗಾಗಿ, ಈ ಧಾರಾವಾಹಿ ಎರಡನೇ ಸ್ಥಾನದಲ್ಲಿ ಕಾಣಿಸಿಕೊಂಡಿದೆ.
ಮೂರನೇ ಸ್ಥಾನದಲ್ಲಿ ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಪುಟ್ಟಕ್ಕನ ಮಕ್ಕಳು ಧಾರಾವಾಹಿ ಇದೆ. ಸಮಯ ಬದಲಾವಣೆಯ ಹೊರತಾಗಿಯೂ ಈ ಧಾರಾವಾಹಿಗೆ ಇರುವ ಬೇಡಿಕೆ ಕಡಿಮೆ ಆಗಿಲ್ಲ. ಜನರು ಕುತೂಹಲದಿಂದ ಈ ಧಾರಾವಾಹಿ ವೀಕ್ಷಿಸುತ್ತಿದ್ದಾರೆ. ನಾಲ್ಕನೇ ಸ್ಥಾನದಲ್ಲಿ ಅಣ್ಣಯ್ಯ ಧಾರಾವಾಹಿ. ಅಣ್ಣಯ್ಯ ಇತ್ತೀಚೆಗೆ ಜೀ ಕನ್ನಡ ವಾಹಿನಿಯಲ್ಲಿ ಶುರುವಾದ ಧಾರಾವಾಹಿ.
BBK 11 Fight: ಜಗದೀಶ್-ರಂಜಿತ್ ಮಧ್ಯೆ ನಡೆದ ಹೊಡೆದಾಟ ಇದುವೆ?: ವೈರಲ್ ಆಗುತ್ತಿದೆ ವಿಡಿಯೋ