Friday, 22nd November 2024

BBK 11 TRP: ಬಿಗ್ ಬಾಸ್​ಗೆ ಬಿಗ್ ಶಾಕ್: ಟಿಆರ್​ಪಿಯಲ್ಲಿ ಕುಸಿದ ಕನ್ನಡದ ಅತಿ ದೊಡ್ಡ ರಿಯಾಲಿಟಿ ಶೋ

Bigg Boss Kannada 11 TRP (2)

ಬಿಗ್ ಬಾಸ್ ಕನ್ನಡ ಸೀಸನ್ 11 (Bigg Boss Kannada 11) ಪ್ರೇಕ್ಷಕರನ್ನು ರಂಜಿಸುವಲ್ಲಿ ಎಡವಿದೆ. ಈ ಹಿಂದಿನ ಸೀಸನ್​ಗಳಿಗೆ ಹೋಲಿಸಿದರೆ ಈ ಬಾರಿಯ ಸೀಸನ್ ಡಲ್ ಆದಂತೆ ಕಾಣುತ್ತಿದೆ. ಬಿಬಿಕೆ 11 ಶುರುವಾಗಿ ಮೂರು ವಾರಗಳು ಕಳೆದಿವೆ. ಆದರೆ, ಈ ವರೆಗೆ ಜನರಿಗೆ ಇಷ್ಟವಾಗುವಂತಹ ಸನ್ನಿವೇಷ ನಡೆದೇ ಇಲ್ಲ ಎಂದು ಹೇಳಬಹುದು. ಹಿಂದಿನ ಸೀಸನ್​ಗಳಲ್ಲಿ ಶುದ್ಧವಾದ ಮಾತು, ಹಾಡು, ಆಟದ ಶೈಲಿ ಎಲ್ಲರಿಗೂ ಇಷ್ಟವಾಗಿತ್ತು. ಈ ಬಾರಿ ಮನೆಯೊಳಗೆ ಬರೀ ಜಗಳಗಳೇ ನಡೆಯುತ್ತಿದೆ. ಇದರ ಎಫೆಕ್ಟ್ ಟಿಆರ್​ಪಿ ಮೇಲೂ ಬಿದ್ದಿದೆ.

ಗ್ರ್ಯಾಂಡ್ ಓಪನಿಂಗ್ ದಿನ ಬಿಗ್ ಬಾಸ್​ಗೆ 9.9 ಟಿಆರ್​ಪಿ ಸಿಕ್ಕಿತ್ತು. ಬಿಗ್ ಬಾಸ್​ ಲಾಂಚ್​​ ದಿನ ಇಷ್ಟು ದೊಡ್ಡ ಮಟ್ಟದ ಟಿಆರ್​ಪಿ ಸಿಕ್ಕಿದ್ದು ಇದೇ ಮೊದಲು. ಮೊದಲ ವಾರ ಬಿಗ್ ಬಾಸ್​ಗೆ ವಾರದ ದಿನಗಳಲ್ಲಿ 6.9 ಟಿಆರ್​ಪಿ ದೊರೆತಿತ್ತು. ಎರಡನೇ ವಾರದ ದಿನಗಳಲ್ಲಿ ಬಿಗ್ ಬಾಸ್​ 7.2 ಟಿವಿಆರ್ ಪಡೆದುಕೊಂಡಿದೆ. ವಾರದ ಕೊನೆಯಲ್ಲಿ ಶನಿವಾರ 8.8 ಮತ್ತು ಭಾನುವಾರ 9.2 ಟಿವಿಆರ್ ದೊರೆತಿತ್ತು. ಆದರೆ, ಈ ಬಾರಿ ಟಿಆರ್​ಪಿ ಕಡಿಮೆ ಆಗಿದೆ.

ಕಳೆದ ಶನಿವಾರ ಬಿಗ್ ಬಾಸ್​ಗೆ ಕೇವಲ 7.3 ಟಿಆರ್​ಪಿ ಸಿಕ್ಕಿದೆ. ಭಾನುವಾರ 6.9 ಟಿಆರ್​ಪಿ ಸಿಕ್ಕಿದೆ. ವಾರದ ದಿನಗಳಲ್ಲಿ 7.0 ಟಿಆರ್​ಪಿ ಸಿಕ್ಕಿದದೆಯಷ್ಟೆ. ವಾರಾಂತ್ಯದ ಟಿಆರ್​ಪಿಯಲ್ಲಿ ಸಾಕಷ್ಟು ಕುಸಿತ ಕಂಡಿದೆ. ಈ ವಾರದಿಂದ ಸಂಚಿಕೆ ಕೂಡ ಚೆನ್ನಾಗಿ ಆಗುತ್ತಿಲ್ಲ ಎನ್ನುವುದು ಕೆಲವರ ಅಭಿಪ್ರಾಯ. ಪ್ರತಿ ಭಾನುವಾರ ಸುದೀಪ್ ಅವರು ಯಾರಿಗೂ ಕ್ಲಾಸ್ ತೆಗೆದುಕೊಳ್ಳುವುದಿಲ್ಲ. ಅಲ್ಲಿ ಫನ್ ಆ್ಯಕ್ಟಿವಿಟಿ ಮಾಡಿಸಲಾಗುತ್ತದೆ. ಆದರೆ, ಇದು ಅಷ್ಟು ಮನರಂಜನಾತ್ಮಕವಾಗಿರುವುದಿಲ್ಲ ಎಂಬ ಮಾತು ಕೇಳಿಬಂದಿದೆ.

ಇನ್ನು ಪುಟ್ಟಕ್ಕನ ಮಕ್ಕಳು ಧಾರಾವಾಹಿ ಹಲವು ಟ್ವಿಸ್ಟ್​ಗಳನ್ನು ಪಡೆದು ಸಾಗುತ್ತಿದೆ. ಈ ಧಾರಾವಾಹಿ ಈ ಮೊದಲು ಒಂದನೇ ಸ್ಥಾನದಲ್ಲಿ ಇರುತ್ತಿತ್ತು. ಆದರೆ, ಸಮಯ ಬದಲಾವಣೆಯ ನಂತರ ಟಿಆರ್​ಪಿ ಕುಸಿದಿತ್ತು. ಈಗ ಮತ್ತೆ ಈ ಧಾರಾವಾಹಿ ಮೊದಲ ಸ್ಥಾನಕ್ಕೆ ಬಂದಿದೆ. ಎರಡನೇ ಸ್ಥಾನದಲ್ಲಿ ಲಕ್ಷ್ಮೀ ನಿವಾಸ ಧಾರಾವಾಹಿ ಇದೆ. ಮೂರನೇ ಸ್ಥಾನದಲ್ಲಿ ಅಮೃತಧಾರೆ, ಅಣ್ಣಯ್ಯ ನಾಲ್ಕನೇ ಸ್ಥಾನದಲ್ಲಿದೆ. ಐದನೇ ಸ್ಥಾನದಲ್ಲಿಶ್ರಾವಣಿ ಸುಬ್ರಮಣ್ಯ ಧಾರಾವಾಹಿ ಇದೆ.

BBK 11: ಬಿಗ್ ಬಾಸ್ ಮನೆಯಲ್ಲಿ ಮತ್ತೊಂದು ಅವಘಡ: ಮಹಿಳಾ ಸ್ಪರ್ಧಿಯನ್ನು ತಳ್ಳಿದ ಉಗ್ರಂ ಮಂಜು