Monday, 9th December 2024

ಬೈಕ್ ಅಪಘಾತ: ನಿರ್ದೇಶಕ ಸೂರ್ಯೋದಯ ಪುತ್ರ ಮಯೂರ್ ನಿಧನ

ಬೆಂಗಳೂರು: ಸ್ಯಾಂಡಲ್ ವುಡ್ ನಟ, ನಿರ್ದೇಶಕ ಸೂರ್ಯೋದಯ ಅವರ ಪುತ್ರ ಮಯೂರ್ (20) ಅವರು ಬ್ಯಾಡರಹಳ್ಳಿಯ ನ್ಯೂ ಲಿಂಕ್ ರಸ್ತೆ ಬಳಿ ಬೈಕು ಸವಾರಿ ಮಾಡುತ್ತಿದ್ದಾಗ ಟ್ಯಾಂಕರ್ ಗೆ ಡಿಕ್ಕಿ ಹೊಡೆದು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಪುತ್ರನನ್ನು ಕಳೆದುಕೊಂಡ ಸೂರ್ಯೋದಯ ಅವರ ಇಡೀ ಕುಟುಂಬ ಆಘಾತಕ್ಕೊಳಗಾಗಿದೆ. ಅಪಘಾತಕ್ಕೆ ಸಂಬಂಧಿಸಿದಂತೆ ಬ್ಯಾಡರಹಳ್ಳಿ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.

ಸ್ನೇಹಿತನಿಂದ ಕೆಟಿಎಂ ಬೈಕನ್ನು ಪಡೆದು ವೇಗವಾಗಿ ಓಡಿಸುತ್ತಿದ್ದರು. ನಿಯಂತ್ರಣ ತಪ್ಪಿ ಟ್ಯಾಂಕರ್ ಗೆ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಮೃತಪಟ್ಟಿದ್ದರು. ಇವರ ತಂದೆ ಸೂರ್ಯೋದಯ ಅವರು ತುಳು ಚಿತ್ರ ದೇಯಿ ಬೈದೆತಿ ಎಂಬ ಚಿತ್ರವನ್ನು , ಕನ್ನಡದ ಸ್ಟಾಲ್ ಚಿತ್ರವನ್ನು ನಿರ್ದೇಶಿಸಿದ್ದಾರೆ.