Wednesday, 11th December 2024

ಅರ್ಜುನ್ ರಾಂಪಾಲ್ ಅವರ ಮುಂಬೈ ನಿವಾಸದ ಮೇಲೆ ಎನ್‌ಸಿಬಿ ದಾಳಿ

ಮುಂಬೈ: ಬಾಲಿವುಡ್ ನಟ ಅರ್ಜುನ್ ರಾಂಪಾಲ್ ಅವರ ಮುಂಬೈ ನಿವಾಸದ ಮೇಲೆ ಎನ್‌ಸಿಬಿಯವರು ದಾಳಿ ಮಾಡಿದ್ದಾರೆ.

ಕಳೆದ ಭಾನುವಾರ ಬಾಲಿವುಡ್ ಚಿತ್ರ ನಿರ್ಮಾಪಕ ಫಿರೋಜ್ ನಾಡಿಯಾವಾಲಾ ಅವರ ಪತ್ನಿಯನ್ನು ಎನ್‌ಸಿಬಿ ಬಂಧಿಸಿತ್ತು.
ಅವರ ನಿವಾಸದಲ್ಲಿ ಹತ್ತು ಗ್ರಾಾಂ ನಷ್ಟು ಮರಿಜುವಾನಾ ಪತ್ತೆಯಾಗಿದ್ದ ಹಿನ್ನೆಲೆಯಲ್ಲಿ ಈ ಬಂಧನ ನಡೆದಿತ್ತು. ಮೂಲಗಳ ಪ್ರಕಾರ, ಫಿರೋಜ್ ನಾಡಿಯಾವಾಲಾ ಅವರ ವಿಚಾರಣೆಗೆ ಹಾಜರಾಗುವಂತೆ ಸಮನ್‌ಸ್‌ ನೀಡಲಾಗಿತ್ತು. ಆದರೆ ವಿಚಾರಣೆಗೆ ಹಾಜರಾಗಿಲ್ಲ ಎಂದು ಎನ್‌ಸಿಬಿ ಅಧಿಕಾರಿ ತಿಳಿಸಿದ್ದಾರೆ.

ಇತ್ತೀಚೆಗೆ ಬಾಲಿವುಡ್ ನಲ್ಲಿ ಡ್ರಗ್ ನಂಟು ಕುರತಂತೆ ಡ್ರಗ್ ಪೆಡ್ಲರ್‌ಗಳನ್ನು ವಿಚಾರಣೆ ನಡೆಸುವ ವೇಳೆ ನಾಡಿಯಾವಾಲಾ ಹೆಸರು
ಕೇಳಿ ಬಂದಿತ್ತು. ನಟ ಸುಶಾಂತ್ ಸಿಂಗ್ ರಾಜಪೂತ್ ಅವರ ನಿಧನಾ ನಂತರ ಎನ್‌ಸಿಬಿ ಪ್ರಕರಣದ ತನಿಖೆಯನ್ನು ಕೈಗೆತ್ತಿ ಕೊಂಡಿದೆ. ಈ ನಿಟ್ಟಿನಲ್ಲಿ, ಸುಶಾಂತ್ ಸ್ನೇಹಿತೆ ರಿಯ ಚಕ್ರವರ್ತಿಯವರನ್ನು ಬಂಧಿಸಿತ್ತು.