ಬೆಂಗಳೂರು: ಜಾವೇದ್ ಅಖ್ತರ್ ಅವರು ಕಂಗನಾ ವಿರುದ್ಧ ದಾಖಲಿಸಿರುವ ಮಾನಹಾನಿ ಪ್ರಕರಣದ ವಿಚಾರಣೆಯನ್ನು ನವೆಂಬರ್ 15ಕ್ಕೆ ಮುಂದೂಡಲಾಗಿದೆ.
ಇನ್ನು, ಇದೇ ವೇಳೆ ಕಂಗನಾ ಸಹ ಈಗ ಜಾವೇದ್ ಅಖ್ತರ್ ವಿರುದ್ಧ ಮಾನಹಾನಿ ಪ್ರಕರಣ ದಾಖಲಿಸಿದ್ದಾರೆ.
ಜಾವೇದ್ ಅಖ್ತರ್ ಅವರು ಕಂಗನಾ ರನೌತ್ ವಿರುದ್ಧ ದಾಖಲಿಸಿದ್ದ ಮಾನಹಾನಿ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ವಿಚಾರಣೆ ಇತ್ತು. ಕಳೆದ ಬಾರಿ ನ್ಯಾಯಾ ಲಯಕ್ಕೆ ಗೈರಾಗಿದ್ದ ಕಂಗನಾ ರನೌತ್ ಇಂದು ನ್ಯಾಯಾಲ ಯದ ಮುಂದೆ ಹಾಜರಾಗಿದ್ದರು.
ಈ ಪ್ರಕರಣದ ವಿಚಾರಣೆಗೆಂದು ಚಿತ್ರಸಾಹಿತಿ ಜಾವೇದ್ ಅಖ್ತರ್ ಅವರು ಸಮಯಕ್ಕಿಂತ ಮುಂಚೆಯೇ ಕೋರ್ಟ್ಗೆ ಬಂದಿದ್ದರು. ಇನ್ನು ಕಂಗನಾ ಅವರು ಕೋರ್ಟ್ ಎದುರು ಹಾಜರಾದ ನಂತರ ಅವರ ವಕೀಲರು ನ್ಯಾಯಾಲಯದಲ್ಲಿ ತಮ್ಮ ವಾದ ಮಂಡಿಸಿದ್ದಾರೆ.
ಈ ಪ್ರಕರಣದಲ್ಲಿ ಜಾಮೀನು ಸಿಗುವ ಅವಕಾಶ ಇರುವಾಗ ಪದೇ ಪದೇ ಕಂಗನಾ ಅವರನ್ನು ನ್ಯಾಯಾಲಯದ ಮುಂದೆ ಹಾಜರಾಗುವಂತೆ ಒತ್ತಡ ಹೇರಲು ಕಾರಣ ವೇನೆಂದು ಪ್ರಶ್ನಿಸಿದರು.
ಸದ್ಯ ಈ ಮಾನಹಾನಿ ಪ್ರಕರಣದ ವಿಚಾರಣೆಯನ್ನು ನವೆಂಬರ್ 15ಕ್ಕೆ ಮುಂದೂಡಲಾಗಿದೆ. ಈ ಹಿಂದಿನ ವಿಚಾರಣೆಯಲ್ಲಿ ಕಂಗನಾ ರನೌತ್ ಅವರು ಹಾಜರಾಗದ ಕಾರಣಕ್ಕೆ ಅವರನ್ನು ಈ ಸಲದ ವಿಚಾರಣೆಗೆ ಹಾಜ ರಾಗಲೇಬೇಕು, ಇಲ್ಲವಾದಲ್ಲಿ ಬಂಧನ ವಾರೆಂಟ್ ಹೊರಡಿಸಲಾಗುವುದು ಎಂದು ನ್ಯಾಯಾಲಯ ಎಚ್ಚರಿಕೆ ನೀಡಿತ್ತು. ಜೊತೆಗೆ ವಿಚಾರಣೆಯನ್ನು ಇಂದಿಗೆ ಅಂದರೆ ಸೆ. 20ಕ್ಕೆ ಮುಂದೂಡಲಾಗಿತ್ತು