Thursday, 12th December 2024

ಜಾವೇದ್​ ಅಖ್ತರ್ ವಿರುದ್ಧ ಮಾನಹಾನಿ ಮೊಕದ್ದಮೆ ದಾಖಲಿಸಿದ ಕಂಗನಾ

ಬೆಂಗಳೂರು: ಜಾವೇದ್ ಅಖ್ತರ್ ಅವರು ಕಂಗನಾ ವಿರುದ್ಧ ದಾಖಲಿಸಿರುವ ಮಾನಹಾನಿ ಪ್ರಕರಣದ ವಿಚಾರಣೆಯನ್ನು ನವೆಂಬರ್ 15ಕ್ಕೆ ಮುಂದೂಡಲಾಗಿದೆ.

ಇನ್ನು, ಇದೇ ವೇಳೆ ಕಂಗನಾ ಸಹ ಈಗ ಜಾವೇದ್ ಅಖ್ತರ್ ವಿರುದ್ಧ ಮಾನಹಾನಿ ಪ್ರಕರಣ ದಾಖಲಿಸಿದ್ದಾರೆ.

ಜಾವೇದ್​ ಅಖ್ತರ್ ಅವರು ಕಂಗನಾ ರನೌತ್​ ವಿರುದ್ಧ ದಾಖಲಿಸಿದ್ದ ಮಾನಹಾನಿ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ವಿಚಾರಣೆ ಇತ್ತು. ಕಳೆದ ಬಾರಿ ನ್ಯಾಯಾ ಲಯಕ್ಕೆ ಗೈರಾಗಿದ್ದ ಕಂಗನಾ ರನೌತ್ ಇಂದು ನ್ಯಾಯಾಲ ಯದ ಮುಂದೆ ಹಾಜರಾಗಿದ್ದರು.

ಈ ಪ್ರಕರಣದ ವಿಚಾರಣೆಗೆಂದು ಚಿತ್ರಸಾಹಿತಿ ಜಾವೇದ್​ ಅಖ್ತರ್ ಅವರು ಸಮಯಕ್ಕಿಂತ ಮುಂಚೆಯೇ ಕೋರ್ಟ್​ಗೆ ಬಂದಿದ್ದರು. ಇನ್ನು ಕಂಗನಾ ಅವರು ಕೋರ್ಟ್ ಎದುರು ಹಾಜರಾದ ನಂತರ ಅವರ ವಕೀಲರು ನ್ಯಾಯಾಲಯದಲ್ಲಿ ತಮ್ಮ ವಾದ ಮಂಡಿಸಿದ್ದಾರೆ.

ಈ ಪ್ರಕರಣದಲ್ಲಿ ಜಾಮೀನು ಸಿಗುವ ಅವಕಾಶ ಇರುವಾಗ ಪದೇ ಪದೇ ಕಂಗನಾ ಅವರನ್ನು ನ್ಯಾಯಾಲಯದ ಮುಂದೆ ಹಾಜರಾಗುವಂತೆ ಒತ್ತಡ ಹೇರಲು ಕಾರಣ ವೇನೆಂದು ಪ್ರಶ್ನಿಸಿದರು.

ಸದ್ಯ ಈ ಮಾನಹಾನಿ ಪ್ರಕರಣದ ವಿಚಾರಣೆಯನ್ನು ನವೆಂಬರ್ 15ಕ್ಕೆ ಮುಂದೂಡಲಾಗಿದೆ. ಈ ಹಿಂದಿನ ವಿಚಾರಣೆಯಲ್ಲಿ ಕಂಗನಾ ರನೌತ್​ ಅವರು ಹಾಜರಾಗದ ಕಾರಣಕ್ಕೆ ಅವರನ್ನು ಈ ಸಲದ ವಿಚಾರಣೆಗೆ ಹಾಜ ರಾಗಲೇಬೇಕು, ಇಲ್ಲವಾದಲ್ಲಿ ಬಂಧನ ವಾರೆಂಟ್​ ಹೊರಡಿಸಲಾಗುವುದು ಎಂದು ನ್ಯಾಯಾಲಯ ಎಚ್ಚರಿಕೆ ನೀಡಿತ್ತು. ಜೊತೆಗೆ ವಿಚಾರಣೆಯನ್ನು ಇಂದಿಗೆ ಅಂದರೆ ಸೆ. 20ಕ್ಕೆ ಮುಂದೂಡಲಾಗಿತ್ತು