Sunday, 15th December 2024

ಹಳದಿ ಬಿಕಿನಿಯಲ್ಲಿ ಹಾಟ್‌ ಪೋಸ್‌ ಕೊಟ್ಟ ನಟಿ ಕಿಯಾರಾ

ಮುಂಬೈ: ಬಾಲಿವುಡ್‌ ನ ಸದ್ಯದ ಸೆನ್ಸೇಷನಲ್‌ ಸುದ್ದಿ ಎಂದರೆ, ನಟಿ ಕಿಯಾರಾ ಅಡ್ವಾಣಿ ಧರಿಸಿರುವ ಹಳದಿ ಬಣ್ಣದ ಬಿಕಿನಿ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ಬಾಲಿವುಡ್‌ ಮಾತ್ರವಲ್ಲದೇ, ದಕ್ಷಿಣ ಭಾರತದ ಇತರ ಭಾಷೆಗಳ ಸಿನೆಮಾ ರಂಗದಲ್ಲಿ ಬಹು ಬೇಡಿಕೆಯ ನಟಿಯಾಗಿ ಹೊರಹೊಮ್ಮಿದ್ದಾರೆ. ಇತ್ತೀಚೆಗಷ್ಟೇ, ಮಾಲ್ಡೀವ್ಸ್ ದ್ವೀಪದಲ್ಲಿ ತನ್ನ ರಜಾದಿನಗಳನ್ನು ಮಜಾ ಮಾಡಿರುವ ನಟಿ ಕಿಯಾರಾ, ಸ್ಟ್ರಿಪ್‌ ಲೆಸ್‌ ಹಳದಿ ಬಿಕಿನಿ, ಹ್ಯಾಟ್‌ ಧರಿಸಿದ್ದು, ಬಹು ಮಾದಕವಾಗಿ ಕಾಣಿಸಿಕೊಂಡಿರುವ ಫೋಟೋವನ್ನು ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಶೇರ್‌ ಮಾಡಿದ್ದಾರೆ.

ನಟಿಯ ಈ ಹಾಟ್‌ ಫೋಟೋ ಬಾಲಿವುಡ್‌ ನಟಿಯರಾದ ಕರೀನಾ ಕಪೂರ್‌, ಜಾಹ್ನವಿ ಕಪೂರ್‌, ಭೂಮಿ ಫೆಡ್ನೆಕರ್‌ ಮುಂತಾದವರು ಇಮೋಜಿಗಳನ್ನು ಪೋಸ್ಟ್ ಮಾಡಿದ್ದಾರೆ. ಇದಕ್ಕೂ ಮುನ್ನ, ನಟಿ ಕಿಯಾರಾ, ನೀರೊಳಗೆ ಸ್ವಿಮ್‌ ಮಾಡಿರುವ ಚಿತ್ರವೊಂದನ್ನು ಶೇರ‍್ ಮಾಡಿದ್ದಾರೆ.