Thursday, 12th December 2024

55ನೇ ವಸಂತಕ್ಕೆ ಕಾಲಿಟ್ಟ ಬಾಲಿವುಡ್ ಬಾದ್‌ಶಾ

ಮುಂಬೈ: ನಟ ಶಾರುಖ್ ಖಾನ್‌ಗೆ ಇಂದು ಹುಟ್ಟುಹಬ್ಬದ ಸಂಭ್ರಮ. 55ನೇ ವಸಂತಕ್ಕೆ ಕಾಲಿಟ್ಟ ಈ ನಟನಿಗೆ ಅಭಿಮಾನಿ ಗಳಿಂದ, ನಟ-ನಟಿ, ನಿರ್ದೇಶಕರು, ನಿರ್ಮಾಪಕರಿಂದ ಶುಭಾಷಯಗಳ ಮಹಾಪೂರವೇ ಹರಿದು ಬರುತ್ತಿದೆ. ಅದ್ಧೂರಿ ಬರ್ತಡೇ ಯನ್ನು ಶಾರುಖ್ ಆಚರಿಸಿಕೊಳ್ಳುತ್ತಿದ್ದಾರೆ.

ಈ ವರ್ಷ ವಿಭಿನ್ನವಾಗಿ 5 ಸಾವಿರ ಅಭಿಮಾನಿಗಳು ಸೇರಿಕೊಂಡು ಇವರ ಬರ್ತಡೇ ಆಚರಣೆ ಮಾಡುತ್ತಿದ್ದಾರೆ. ಕೊರೊನಾದಿಂದ ಮನೆ ಮುಂದೆ ಸೇರದೆ ವಿಡಿಯೋ ಕಾನ್ಫರೆನ್ಸ್ ಅಂದರೆ ವರ್ಚುವಲ್ ಮೂಲಕ ಅಭಿಮಾನಿಗಳು ಬಾಲಿವುಡ್ ಬಾದ್‌ಷಾಗೆ ವಿಶ್ ಮಾಡಿ ಬರ್ತಡೇ ಆಚರಿಸುತ್ತಿದ್ದಾರೆ.

ಕಳೆದ ಕೆಲವು ದಿನಗಳ ಹಿಂದೆ ಶಾರುಖ್, ಅಭಿಮಾನಿಗಳ ಬಳಿ ಮನೆ ಮುಂದೆ ಬರದಂತೆ ಮನವಿ ಮಾಡಿದ್ದರು. ಆದರೆ ಬರ್ತಡೇ ಆಚರಿಸಲೇಬೇಕು ಎಂದುಕೊಂಡ ಅಭಿಮಾನಿಗಳು ವರ್ಚುವಲ್ ಮೂಲಕ ಆಚರಣೆ ಮಾಡುತ್ತಿದ್ದಾರೆ.