Tuesday, 7th January 2025

BBK 11: ಬಿಗ್ ಬಾಸ್ ಮನೆಯಲ್ಲಿ ಖಳನಾಯಕನಾದ ರಜತ್: ಚೈತ್ರಾಗೆ ಶುರುವಾಯಿತು ಟೆನ್ಶನ್

Chaithra vs Rajath BBK 11 (1)

ಬಿಗ್ ಬಾಸ್ ಕನ್ನಡ ಸೀಸನ್ 11 (Bigg Boss Kannada 11) 15ನೇ ವಾರಕ್ಕೆ ಕಾಲಿಟ್ಟಿದೆ. 100 ದಿನಗಳನ್ನು ಪೂರೈಸಿ ಯಶಸ್ವಿಯಾಗಿ ಮುನ್ನುಗ್ಗುತ್ತಿರುವ ಶೋನಲ್ಲಿ ಸದ್ಯ ಉಳಿದಿರುವ ಒಂಬತ್ತು ಸ್ಪರ್ಧಿಗಳಿಗೆ ಈ ವಾರ ತುಂಬಾ ಪ್ರಮುಖವಾಗಿದೆ. ಫಿನಾಲೆಗೆ ಉಳಿದಿರುವುದು ಇನ್ನು ಕೇವಲ ಮೂರು ವಾರ ಮಾತ್ರ. ಹೀಗಾಗಿ ಟಾಸ್ಕ್ ಕೂಡ ಮತ್ತಷ್ಟು ರೋಚಕತೆ ಸೃಷ್ಟಿಸಿದೆ. ಸದ್ಯ ಮನೆಯ ಈ ವಾರದ ಕ್ಯಾಪ್ಟನ್ ಆಗಿರುವ ರಜತ್ ಕಿಶನ್ ಖಳನಾಯಕರಾಗಿದ್ದಾರೆ.

ಖಳನಾಯಕನಾಗಿ ವೈಲ್ಡ್​ ಕಾರ್ಡ್​ ಸ್ಪರ್ಧಿ ರಜತ್​​ ಕಿಶನ್​​ ಅಬ್ಬರಿಸಿದ್ದು, ಮತ್ತೊಮ್ಮೆ ಚೈತ್ರಾ ಕುಂದಾಪುರ vs ರಜತ್​ ಮಾತಿನ ಚಕಮಕಿ ಜೋರಾಗಿರಲಿದೆ. ಬಿಗ್ ಬಾಸ್ ಅವರು ರಜತ್ ಅವರಿಗೆ ಗ್ರ್ಯಾಂಡ್​ ಫಿನಾಲೆಗೆ ತಲುಪಲು ಅರ್ಹತೆ ಇಲ್ಲದ ಐವರು ಸ್ಪರ್ಧಿಗಳಿಗೆ ಟಿಕೆಟ್ ಟು ಹೋಮ್ ಫಲಕ ಕೊರಳಿಗೆ ಹಾಕಬೇಕು ಎಂದು ಹೇಳಿದ್ದಾರೆ. ಅದರಂತೆ ರಜತ್ ಅವರು ಸಖತ್ ಖುಷಿಯಲ್ಲಿ ಡ್ಯಾನ್ಸ್ ಮಾಡುತ್ತ ಐವರು ಸ್ಪರ್ಧಿಗಳ ಕೊರಳಿಗೆ ಟಿಕೆಟ್ ಟು ಹೋಮ್ ಫಲಕ ಹಾಕಿದ್ದಾರೆ.

ಹನುಮಂತು, ಚೈತ್ರಾ, ಗೌತಮಿ, ಭವ್ಯಗೌಡ ಹಾಗೂ ಮೋಕ್ಷಿತಾ ಅವರ ಕೊರಳಿಗೆ ರಜತ್ ಅವರು ಬೋರ್ಡ್ ಅನ್ನು ನೇತು ಹಾಕಿದ್ದಾರೆ. ಈ ವೇಳೆ ರಜತ್ ಹಾಗೂ ಚೈತ್ರಾ ಮಧ್ಯೆ ಸಖತ್ ಮಾತಿನ ಸಮರ ನಡೆದಿದೆ. ನಮ್​ ಬಾಸ್ ಟಾಸ್ಕ್​ ಅಲ್ಲಿ ಝೀರೋ. ಮಾತಾಡ್ಕೊಂಡೇ ಮನೆಗೋಗ್ರಿ. ಇಲ್ಲಿರೋರು ಆಡ್ಕೊಂಡ್ ಆದ್ರೂ ಗೆಲ್ಲಲಿ ಎಂದು ತಿಳಿಸಿದ್ದಾರೆ. ಅವರ ಮಾತಿಗೆ ತಿರುಗಿಸಿ ಕೊಟ್ಟ ಚೈತ್ರಾ, ಮೊದಲನೇ ದಿನ ಬಂದಿದ್ರೆ ಐದೇ ದಿನಕ್ಕೆ ಲಗೇಜ್​ ಇಡ್ಕೊಂಡು ಹೋಗ್ತಿದ್ರು. 50 ದಿನ ಕಳ್ದ್​​ಮೇಲೆ ಬಂದಿದ್ದೀರಿ, ಅದೃಷ್ಟ ಮಾಡಿದ್ದೀರಿ ಎಂದಿದ್ದಾರೆ.

ಇತ್ತ ರಜತ್​​ ಕೂಡಾ ಸುಮ್ಮನೆ ಕೂರಲಿಲ್ಲ. 50 ದಿನಗಳಾದ ಮೇಲೆ ನಾನು ಬಂದಿದ್ದಕ್ಕೆ ನೀವು ಅದೃಷ್ಟ ಮಾಡಿದ್ದೀರಿ. ಶುರುವಲ್ಲೇ ಬಂದಿದ್ರೆ ನಾಲ್ಕನೇ ವಾರಕ್ಕೇನೆ ಕಳ್ಸ್ ಬಿಡ್ತಿದ್ದೆ ಎಂದು ಹೇಳಿದ್ದಾರೆ. ಇಬ್ಬರ ಜಗಳ ತಾರಕಕ್ಕೇರಿದ್ದು ರಜತ್ ಅವರು ಚೈತ್ರಾ ಅವರನ್ನು ಸುಳ್ಳಿ.. ಸುಳ್ಳಿ.. ಸುಳ್ಳಿ.. ಎಂದು ಕರೆದು ಕಿಚಾಯಿಸಿದ್ದಾರೆ. ಇವರಿಬ್ಬರ ಕೋಳಿ ಜಗಳವನ್ನು ಕಂಡು ಅತ್ತ ತ್ರಿವಿಕ್ರಮ್ ಹಾಗೂ ಭವ್ಯಾ ಗೌಡ ನಕ್ಕಿದ್ದಾರೆ.

BBK 11: ಕೊಟ್ಟ ಮಾತಿನಂತೆ ಧನರಾಜ್ ಮನೆಗೆ ತೆರಳಿ ತೊಟ್ಟಿಲು ಗಿಫ್ಟ್ ಕೊಟ್ಟ ಗೋಲ್ಡ್ ಸುರೇಶ್

Leave a Reply

Your email address will not be published. Required fields are marked *