ಬಿಗ್ ಬಾಸ್ ಕನ್ನಡ ಸೀಸನ್ 11 ರಲ್ಲಿ (Bigg Boss Kannada 11) ಸದ್ಯ ಫ್ಯಾಮಿಲಿ ವೀಕ್ ನಡೆಯುತ್ತಿದೆ. ಇನ್ನೇನು ಕೆಲವೇ ವಾರಗಳಲ್ಲಿ ಫಿನಾಲೆ ನಡೆಯಲಿದ್ದು, ಇದಕ್ಕೂ ಮುನ್ನ ಇರುವ 9 ಸ್ಪರ್ಧಿಗಳಿಗೆ ಜೋಶ್ ಬರಲು ಕುಟುಂಬದವರನ್ನು ಮನೆಯೊಳಗೆ ಕರೆಸಲಾಗಿದೆ. ಸ್ಪರ್ಧಿಗಳ ಅಮ್ಮಂದಿರು, ಅಪ್ಪಂದಿರು ಮಡದಿ, ಮಕ್ಕಳು ಬಿಗ್ ಬಾಸ್ಗೆ ಬಂದಿದ್ದಾರೆ.
ಬಿಗ್ ಬಾಸ್ ಮನೆಯಲ್ಲಿರುವ 9 ಸ್ಪರ್ಧಿಗಳ ಕುಟುಂಬದವರು ಆಗಮಿಸುತ್ತಿದ್ದಾರೆ. ಮಂಗಳವಾರ ಭವ್ಯಾ ಗೌಡ ಅವರ ಫ್ಯಾಮಿಲಿ, ರಜತ್ ಕಿಶನ್ ಅವರ ಮಡದಿ ಹಾಗು ಮಕ್ಕಳು ಬಂದಿದ್ದರು. ಜೊತೆಗೆ ತ್ರಿವಿಕ್ರಮ್ ಅವರ ತಾಯಿ ಬಿಗ್ ಬಾಸ್ ಮನೆಯೊಳಗೆ ಕಾಲಿಟ್ಟಿದ್ದಾರೆ. ಬಳಿಕ ಬುಧವಾರ ಮೋಕ್ಷಿತಾ ಪೈ ಅವರ ಕುಟುಂಬ. ಉಗ್ರಂ ಮಂಜು ಫ್ಯಾಮಿಲಿ ಮತ್ತು ಗೌತಮಿ ಜಾಧವ್ ಅವರ ಪತಿ ದೊಡ್ಮನೆಯೊಳಗೆ ಆಗಮಿಸಿದ್ದರು.
ಇಂದು ಧನರಾಜ್ ಆಚಾರ್, ಹನುಮಂತ ಹಾಗೂ ಚೈತ್ರಾ ಕುಂದಾಪುರ ಅವರ ಫ್ಯಾಮಿಲಿ ಬಿಗ್ ಬಾಸ್ಗೆ ಬಂದಿದೆ. ಹನುಮಂತನ ತಂದೆ ತಾಯಿ ಬಿಗ್ ಬಾಸ್ ಮನೆಗೆ ಮಗನಿಗಾಗಿ ಬುತ್ತಿ ತೆಗೆದುಕೊಂಡು ಬಂದಿದ್ದಾರೆ. ಮನೆಯ ಒಳಗೆ ಬರುತ್ತಿದ್ದಂತೆ ಮಗನನ್ನೂ ನೋಡಿ ಪೋಷಕರು ಭಾವುಕರಾಗಿದ್ದಾರೆ. ಅಪ್ಪಿಕೊಂಡು ಹನುಮಂತನಿಗೆ ಮುತ್ತು ಕೊಟ್ಟಿದ್ದಾರೆ. ಇದಾದ ಬಳಿಕ ತಾವು ತಂದಿದ್ದ ಊಟದ ಬುತ್ತಿಯನ್ನು ತೆಗೆದು ಎಲ್ಲರ ಜೊತೆಗೆ ಕುಳಿತುಕೊಂಡು ಉತ್ತರ ಕರ್ನಾಟಕದ ಫೇಮಸ್ ರೊಟ್ಟಿ, ಮೂರು ತರಹದ ಪಲ್ಯವನ್ನು ತಿಂದಿದ್ದಾರೆ.
ಇನ್ನು ಚೈತ್ರಾ ಕುಂದಾಪುರ ತಾಯಿ ಹಾಗೂ ತಂಗಿ ಬಂದಿದ್ದಾರೆ. ಅಮ್ಮನನ್ನು ನೋಡುತ್ತಿದ್ದಂತೆ ಚೈತ್ರಾ ಭಾವುಕರಾಗಿದ್ದಾರೆ. ಚೈತ್ರಾ ಅವರಿಗೆ ಕಳಪೆ ನೀಡಿದ ಬಗ್ಗೆ ಮಾತನಾಡಿದ ಅವರ ತಾಯಿ, ನನ್ನ ಮಗಳಿಗೆ ಇಷ್ಟು ವಾರದಲ್ಲಿ ಕಳಪೆ ಕೊಟ್ಟಿದ್ಧೀರಾ, ಆದ್ರೆ ನಮ್ಮ ಮಗಳು ಯಾವತ್ತಿದ್ರೂ ನಮಗೆ ಉತ್ತಮನೇ ಅಂತ ಹೇಳುತ್ತಾ ಮೆಡಲ್ ಹಾಕಿದ್ದಾರೆ. ತಾಯಿ ಆಡಿದ ಮಾತಿಗೆ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ ಚೈತ್ರಾ. ಇದಾದ ಬಳಿಕ ಮಾತಾಡಿದ ಚೈತ್ರಾ, ನನ್ನ ತಂಗಿ ಹುಟ್ಟಿದಾಗ ನಮಗೆ ನಿಜವಾದ ಚಾಲೆಂಜ್ ಶುರುವಾಗುತ್ತೆ, ಮೂರನೇದು ಹೆಣ್ಣಾಯ್ತು, ಅಪ್ಪ ಅಮ್ಮನ ಹೆಣಕ್ಕೆ ಬೆಂಕಿ ಇಡೋಕು ಇವರ ಮನೆಯಲ್ಲಿ ಗಂಡು ದಿಕ್ಕಿಲ್ಲ ಅಂತ ಜನ ಹೇಳಿದ್ದಾರೆ ಎಂದು ನೆನೆದು ಚೈತ್ರಾ ಅತ್ತಿದ್ದಾರೆ.
BBK 11: ಧನರಾಜ್ ಇಡೀ ಕುಟುಂಬವನ್ನು ಮನೆಯೊಳಗೆ ಕಳುಹಿಸಿದ ಬಿಗ್ ಬಾಸ್: ಮಗಳನ್ನು ಕಂಡು ಎಮೋಷನಲ್