ಬಿಗ್ ಬಾಸ್ ಕನ್ನಡ ಸೀಸನ್ 11 ರಲ್ಲಿ (Bigg Boss Kannada 11) 13ನೇ ವಾರದ ಕಿಚ್ಚನ ಪಂಚಾಯಿತಿಗೆ ಕ್ಷಣಗಣನೆ ಶುರುವಾಗಿದೆ. ಮಹತ್ವದ ವಾರದ ಕತೆ ಕಿಚ್ಚನ ಜೊತೆ ಎಪಿಸೋಡ್ ಇನ್ನೇನು ಶುರುವಾಗಲಿದೆ. ಇಂದಿನ ಪಂಚಾಯಿತಿಗೆ ಎಲ್ಲರೂ ಕಾದುಕುಳಿತಿದ್ದಾರೆ. ಯಾಕೆಂದರೆ ಈ ವಾರ ನಡೆದ ಕ್ಯಾಪ್ಟನ್ಸಿ ಟಾಸ್ಕ್ನಲ್ಲಿ ಬಹುದೊಡ್ಡ ತಪ್ಪು ನಡೆದಿತ್ತು. ಭವ್ಯಾ ಗೌಡ ಗೊತ್ತಿದ್ದು ಗೊತ್ತಿದ್ದು ತಪ್ಪು ಮಾಡಿದರು. ಈ ಬಗ್ಗೆ ಕಿಚ್ಚ ಖಡಕ್ ಕ್ಲಾಸ್ ತೆಗೆದುಕೊಳ್ಳಲಿದ್ದಾರೆ.
ಆದರೆ, ಮನೆಯೊಳಗೆ ಚೈತ್ರಾ ಕುಂದಾಪುರ ಹಾಗೂ ರಜತ್ ಕಿಶನ್ ನಡುವೆ ಇದೇ ಕ್ಯಾಪ್ಟನ್ಸಿ ಟಾಸ್ಕ್ನಲ್ಲಿ ಆದ ಮೋಸದ ವಿಚಾರಕ್ಕೆ ಬೆಂಕಿ ಹತ್ತಿಕೊಂಡಿದೆ. ಅದುಕೂಡ ಕಿಚ್ಚನ ಎದುರೇ. ಪ್ರೋಮೋದಲ್ಲಿ ಕಿಚ್ಚ ಸುದೀಪ್, ಕ್ಯಾಪ್ಟನ್ಸಿ ವಿಚಾರಕ್ಕೆ ಬರೋಣ ಭವ್ಯಾ ಅವರೇ ಕಂಗ್ರಾಜುಲೇಷನ್ ಅಂತ ಹೇಳಿದ್ದಾರೆ. ಇದಾದ ಬಳಿಕ ಭವ್ಯಾ ಅವರೇ ಎಲ್ಲಿಂದ ಬಿದ್ದಿತ್ತು ಬಾಲ್ ಅಂತ ಶಾಕ್ ಕೊಟ್ಟಿದ್ದಾರೆ. ಜೊತೆಗೆ ವಿಡಿಯೋ ಕ್ಲಿಪ್ ಎಲ್ಲರ ಮುಂದೆ ತೋರಿಸಿ, ರಜತ್ ಅವರಿಗೆ ಗೊತ್ತಿದೆ ಅದು 9ನೇ ನಂಬರಿನಿಂದ ಬಿದ್ದಿದೆ ಅಂತ ಹೇಳಿದ್ದಾರೆ.
ಆಗ ರಜತ್ ನಾನು ಹೇಳಿದೆ ಸರ್ ಆಗ ಭವ್ಯಾ ಸುಮ್ನೆ ಇರಿ ಅಂತ ಹೇಳಿದರು ಎಂದು ಹೇಳಿದ್ದಾರೆ. ಈ ಮಾತನ್ನು ಕೇಳಿಸಿಕೊಂಡ ಚೈತ್ರಾ ಕುಂದಾಪುರ ಬ್ರೇಕ್ನಲ್ಲಿ ರಜತ್ ಜೊತೆ ಗಲಾಟೆ ಮಾಡಿಕೊಂಡಿದ್ದಾರೆ. ಹೋಗು ನನಗೆ ಗೊತ್ತು ಎಂದು ರಜತ್ ಕಿಡಿ ಕಾರಿದ್ರೆ ಸುಮ್ಮನಿರಿ ಎಂದು ಚೈತ್ರಾ ಬಾಯಿ ಮುಚ್ಚಿಸಲು ಪ್ರಯತ್ನಿಸಿದ್ದಾರೆ. ಥೂ ಎಂದು ರಜತ್ ಉಗಿದಿದ್ದಾರೆ. ರೌಡಿಸಂ ಬೇಡ ಎಂದು ಚೈತ್ರಾ ಎದುರೆದರು ಬಂದಿದ್ದಾರೆ.
ಡ್ರಾಮಾ, ಯೋಗ್ಯತೆ, ರೌಡಿಸಂ ಅನ್ನೋ ಪದಗಳು ಇಬ್ಬರ ಬಾಯಿಂದಲೂ ಬಂದಿದೆ. ಮಾತಿಗೆ ಮಾತು ಬೆಳೆದು ದೊಡ್ಡ ವಾಗ್ವಾದವೇ ನಡೆದುಬಿಟ್ಟಿದೆ. ಈ ಎಲ್ಲ ಸನ್ನಿವೇಶವನ್ನು ಸುದೀಪ್ ಕ್ಯಾಮೆರಾ ಮೂಲಕ ಗಮನಿಸಿದ್ದಾರೆ. ಹಾಗಾಗಿ ಕಿಚ್ಚ ಯಾವ ಕ್ರಮ ಕೈಗೊಳ್ಳಲಿದ್ದಾರೆ ಎಂಬುದು ಕುತೂಹಲ ಕೆರಳಿಸಿದೆ.