Friday, 27th December 2024

BBK 11: ನೀನ್​ ಏನುಕ್ಕಮ್ಮಾ ಇದಿಯಾ ಬಿಗ್​ ಬಾಸ್​​ನಲ್ಲಿ: ಚೈತ್ರಾ ತಲೆಗೆ ಬಾಟಲಿಯಿಂದ ಹೊಡೆದ ರಜತ್

Rajath and Chaithra Kundapura

ಬಿಗ್​ ಬಾಸ್​​ ಸೀಸನ್​ 11ರ (Bigg Boss Kannada 11) ಈ ವಾರದ ಎಲಿಮಿನೇಷನ್​ ಪ್ರಕ್ರಿಯೆ ಆರಂಭವಾಗಿದೆ. ಸದ್ಯ ಮನೆಯಲ್ಲಿ 10 ಮಂದಿಯಷ್ಟೆ ಉಳಿದುಕೊಂಡಿದ್ದಾರೆ. ಇವರ ಪೈಕಿ ಈ ವಾರ ಮನೆಯಿಂದ ಯಾರು ಹೊರ ಹೋಗುತ್ತಾರೆ ಎಂಬುದು ಕುತೂಹಲ ಕೆರಳಿಸಿದೆ. ಸದ್ಯ ದೊಡ್ಮನೆಯ ರೆಸಾರ್ಟ್ ಆಗಿ ಪರಿವರ್ತನೆಯಾಗಿದ್ದು, ಟಾಸ್ಕ್​ಗಳು ನಡೆಯುತ್ತಿವೆ. ಇದಾದ ಬಳಿಕ ಇಂದು ನಾಮಿನೇಷನ್ ಪ್ರಕ್ರಿಯೆ ನಡೆಯಲಿದೆ.

ಈ ಬಾರಿಯ ನಾಮಿನೇಷನ್ ಪ್ರಕ್ರಿಯೆಯನ್ನು ಬಿಗ್ ಬಾಸ್ ವಿಶೇಷವಾಗಿ ನೀಡಿದ್ದಾರೆ. ಅದೇನೆಂದರೆ, ನಾಮಿನೇಟ್ ಆಗೋ ಸ್ಪರ್ಧಿಗೆ ಕೃತಕವಾಗಿ ತಯಾರಿಸಿರುವ ಬಾಟಲಿಗಳಿಂದ ಹೊಡೆದು ನಾಮಿನೇಟ್ ಮಾಡಬೇಕಿದೆ. ಮೊದಲು ನಾಮಿನೇಟ್ ಮಾಡಬೇಕು. ಸೂಕ್ತ ಕಾರಣ ಕೊಡಬೇಕು. ಆ ಮೇಲೆ ಬಾಟಲಿಯಿಂದ ತಲೆಗೆ ಹೊಡೆಯಬೇಕು. ಇದು ಈ ವಾರದ ನಾಮಿನೇಷನ್ ಪ್ರಕ್ರಿಯೆ ಆಗಿದೆ.

ಅದರಂತೆ ರಜತ್ ಕಿಶನ್ ಅವರು​ ಚೈತ್ರಾ ಕುಂದಾಪುರ ತಲೆಗೆ ಬಾಟಲಿ ಹೊಡೆದಿದ್ದಾರೆ. ನಾಮಿನೇಟ್​ ಮಾಡುವಾಗ ರಜತ್ ಅವರು,​ ನಮ್ಮ ಪ್ರೀತಿಯ ಚೈತ್ರಾ ಅವರು ಬೇರೆ ಬೇರೆ ಟಾಸ್ಕ್​ನಲ್ಲಿ ಕಾಣಲಿಲ್ಲ, ಸೀರೆ ಒಗಿಯುವುದರಲ್ಲಿ ಕಾಣಲಿಲ್ಲ ನಿಮ್ಮ ಆ ಟ್ಯಾಲೆಂಟ್​ ಇನ್ನೂ ಯಾಕಾದ್ರೂ ಬಿಗ್​ಬಾಸ್​ ಮನೆಯಲ್ಲಿ ಇದ್ದೀಯಮ್ಮಾ. ನಿನ್ನ ದಮ್ಮಯಾ ಅಮ್ಮ ಮನೆಗೆ ಹೋಗು ಅಂಥ ರಜತ್‌ ಚೈತ್ರಾಗೆ ಕೈ ಮುಗಿದಿದ್ದಾರೆ. ಇದಕ್ಕೆ ಚೈತ್ರಾ ಅವರು ಒಂದು ಕಿವಿಯಲ್ಲಿ ಕೇಳು ಮತ್ತೊಂದು ಕಿವಿಯಲ್ಲಿ ಬಿಡುವೆಂದು ಸಂಜ್ಞೆಯಲ್ಲೇ ಉತ್ತರಿಸಿದ್ದಾರೆ.

ಮತ್ತೊಂದು ಕಡೆ ಮಂಜು ತ್ರಿವಿಕ್ರಮ್​ನನ್ನೂ ನೇರವಾಗಿ ನಾಮಿನೇಟ್​ ಮಾಡಿದ್ದಾರೆ. ಈ ವೇಳೆ ಇಬ್ಬರ ಮಧ್ಯೆ ಜೋರು ಮಾತುಕತೆ ನಡೆದಿದೆ. ಇಬ್ಬರ ನಡುವೆ ಕ್ಯಾರೆಕ್ಟರ್‌ ವಿಚಾರವಾಗಿ ಮಾತಿನ ಚಕಮಕಿ ನಡೆದಿದೆ. ಅತ್ತ ಉಗ್ರಂ ಮಂಜು ಹೆಸರು ತೆಗೆದುಕೊಂಡ ಮೋಕ್ಷಿತಾ, ನನಗೆ ಅಷ್ಟಾಗಿ ಕಾಣಿಸಿಕೊಳ್ಳಲಿಲ್ಲ ಎಂಬ ಕಾರಣಗಳನ್ನು ಒದಗಿಸಿದ್ದಾರೆ. ಅಸಮಧಾನಗೊಂಡ ಮಂಜು, ಹೇಗ್​ ಕಾಣಿಸಿಕೊಳ್ಳಬೇಕೆಂದು ತಿಳಿದುಕೊಳ್ಳಲು ನಾಳೆಯಿಂದ ಟ್ಯೂಷನ್​ಗೆ ಬರ್ತೀನಿ ಎಂದು ತಿಳಿಸಿದ್ದಾರೆ.

BBK 11: ನಾಮಿನೇಷನ್ ವೇಳೆ ಉಗ್ರಂ ಮಂಜು ತಲೆಗೆ ಬಾಟಿಲಿಯಿಂದ ಹೊಡೆದ ಮೋಕ್ಷಿತಾ