ಬಿಗ್ ಬಾಸ್ ಕನ್ನಡ ಸೀಸನ್ 11 ರಲ್ಲಿ (Bigg Boss Kannada 11) ಹದಿಮೂರನೇ ವಾರ ಸಾಗುತ್ತಿದೆ. ಸದ್ಯ ಮನೆಯಲ್ಲಿ ಕೇವಲ 10 ಮಂದಿ ಇದ್ದಾರಷ್ಟೆ. ಹೀಗಾಗಿ ಟಾಸ್ಕ್ಗಳು ಕೂಡ ಕಠಿಣವಾಗುತ್ತಾ ಸಾಗಿದೆ. ಇದೀಗ ದೊಡ್ಮನೆ ರೆಸಾರ್ಟ್ ಆಗಿ ಮಾರ್ಪಾಡಾಗಿದೆ. ಇದಕ್ಕಾಗಿ ಮನೆಯ ಸದಸ್ಯರನ್ನು ಎರಡು ಗುಂಪುಗಳಾಗಿ ವಿಂಗಡನೆ ಮಾಡಲಾಗಿದೆ. ಪ್ರತಿಬಾರಿಯಂತೆ ಈ ಬಾರಿ ಕೂಡ ಎರಡು ಗುಂಪುಗಳ ನಡುವೆ ಸಾಕಷ್ಟು ಜಗಳ ನಡೆದಿದೆ.
ಸದ್ಯ ಎರಡು ಗುಂಪುಗಳಾಗಿರುವ ಬಿಗ್ ಬಾಸ್ ಮನೆಯ ಒಂದು ತಂಡದಲ್ಲಿ ಚೈತ್ರಾ ಕುಂದಾಪುರ, ಐಶ್ವರ್ಯಾ ಸಿಂಧೋಗಿ, ಮಂಜು, ಗೌತಮಿ ಹಾಗೂ ಹನುಮಂತ ಇದ್ದರೆ ಮತ್ತೊಂದು ಟೀಮ್ನಲ್ಲಿ ತ್ರಿವಿಕ್ರಮ್, ಭವ್ಯಾ ಗೌಡ, ಧನರಾಜ್, ರಜತ್ ಹಾಗೂ ಮೋಕ್ಷಿತಾ ಇದ್ದಾರೆ. ಇದರಲ್ಲಿ ಭವ್ಯಾ ತಂಡ ಉಳಿದ ಸದಸ್ಯರ ಸೇವೆ ಮಾಡಬೇಕು ಎಂದು ಮೊದಲಿಗೆ ಘೋಷಿಸಿದ್ದರು.
ಆದರೆ, ಚೈತ್ರಾ ತಂಡದ ಅತಿಥಿಗಳ ವರ್ತನೆ ಮಿತಿ ಮೀರಿತ್ತು. ಚೈತ್ರಾ ಕುಂದಾಪುರ ತಂಡದಲ್ಲಿರುವ ಉಗ್ರಂ ಮಂಜು ಕೊಡ್ತಿರುವ ಕಾಟಕ್ಕೆ, ಟಾರ್ಚರ್ಗೆ ಸೇವೆ ಮಾಡುವ ಸಿಬ್ಬಂದಿ ಸುಸ್ತಾಗಿ ಹೋದರು. ಕಾಟ ತಾಳಲಾರದೇ ರೆಸಾರ್ಟ್ನ ಮ್ಯಾನೇಜರ್ ಭವ್ಯಾ ಗೌಡ ಕಣ್ಣೀರಿಟ್ಟರು. ಆದರೀಗ ಇದೆಲ್ಲ ಬದಲಾಗಿದೆ.
ಅತಿಥಿಗಳಾಗಿದ್ದವರು ಕೆಲಸಗಾರರಾಗಿದ್ದಾರೆ. ಭವ್ಯಾ ಅವರ ತಂಡ ಅತಿಥಿಗಳಾಗಿ, ಚೈತ್ರಾ ಅವರ ತಂಡ ಸಿಬ್ಬಂದಿಯಾಗಿ ಕಾರ್ಯ ನಿರ್ವಹಿಸಬೇಕೆಂದು ಬಿಗ್ ಬಾಸ್ ಸೂಚಿಸಿದ್ದಾರೆ. ಅದರಂತೆ ಆಟ ಶುರುಮಾಡಿಕೊಂಡಿದ್ದಾರೆ. ರಜತ್, ತ್ರಿವಿಕ್ರಮ್, ಮೋಕ್ಷಿತಾ, ಭವ್ಯಾ ಗೌಡ, ಧನರಾಜ್ ಇವರ ಅಸಲಿ ಆಟ ಈಗ ಬಿಗ್ಬಾಸ್ ಮನೆಯಲ್ಲಿ ಶುರುವಾಗಿದೆ.
ರಜತ್ ಅಂತೂ ಸಿಕ್ಕ ಅವಕಾಶವನ್ನು ಸಂಪೂರ್ಣವಾಗಿ ಬಳಸಿಕೊಂಡಿದ್ದಾರೆ. ಮುಖ್ಯವಾಗಿ ಚೈತ್ರಾ ಕುಂದಾಪುರ ಅವರಿಗೆ ಸಖತ್ ಕಾಟ ಕೊಟ್ಟಿದ್ದಾರೆ. ಆದರೆ, ಎಲ್ಲ ಕೆಲಸವನ್ನು ಚೈತ್ರಾ ಅಚ್ಚುಕಟ್ಟಾಗಿ ಮಾಡಿದ್ದಾರೆ. ಅತಿಥಿಗಳು ಬಾತ್ ರೂಮ್ ಏರಿಯಾದಲ್ಲಿ ಫುಲ್ ಟಿಶ್ಯೂ ಹಾಕಿ ಗಲೀಜು ಮಾಡಿಬಿಟ್ಟಿದ್ದರು. ಇದನ್ನೆಲ್ಲ ಚೈತ್ರಾ ಅವರೇ ಪೊರಕೆ ಹಿಡಿದು ಕ್ಲೀನ್ ಮಾಡಿದ್ದಾರೆ.