Thursday, 21st November 2024

BBK 11: ಚೈತ್ರಾ ಚಾಲಾಕಿತನ ಕಂಡು ಶಾಕ್ ಆದ ಸ್ಪರ್ಧಿಗಳು: ಯಪ್ಪಾ.. ಏನು ಮಾಡಿದ್ರು ನೋಡಿ

Chaithra Kundapura

ಎಂಟನೇ ವಾರ ಬಿಗ್ ಬಾಸ್ (Bigg Boss Kannada 11) ಮನೆಯಿಂದ ಹೊರಹೋಗಲು ಏಳು ಸದಸ್ಯರು ನಾಮಿನೇಟ್ ಆಗಿದ್ದಾರೆ. ಇದರಲ್ಲಿ ಕ್ಯಾಪ್ಟನ್ ಹಾಗೂ ಶೋಭಾ ಶೆಟ್ಟಿ, ರಜತ್ ಕಿಶನ್ ಬಿಟ್ಟು ಉಳಿದ 7 ಜನ ನಾಮಿನೇಟ್ ಆಗಿದ್ದಾರೆ. ಚೈತ್ರಾ ಕುಂದಾಪುರ, ಉಗ್ರಂ ಮಂಜು, ತ್ರಿವಿಕ್ರಮ್, ಮೋಕ್ಷಿತಾ ಪೈ, ಗೌತಮಿ ಜಾಧವ್, ಧರ್ಮ ಕೀರ್ತಿರಾಜ್‌ ಹಾಗೂ ಹನುಮಂತ ಲಮಾಣಿ ನಾಮಿನೇಟ್ ಆಗಿದ್ದಾರೆ. ಈ ವಾರ ಬಚಾವ್ ಆಗಲು ಇವರೆಲ್ಲರೂ ಪಣ ತೊಟ್ಟು ಆಟವಾಡುತ್ತಿದ್ದಾರೆ.

ಸದ್ಯ ಬಿಗ್ ಬಾಸ್ ಮನೆಯ ಸದಸ್ಯರನ್ನು ಎರಡು ತಂಡಗಳಾಗಿ ವಿಂಗಡಿಸಲಾಗಿದೆ. ಇದಕ್ಕೆ ಭವ್ಯಾ ಗೌಡ ಹಾಗೂ ಶೋಭಾ ಶೆಟ್ಟಿ ಕ್ಯಾಪ್ಟನ್ ಆಗಿದ್ದಾರೆ. ಭವ್ಯಾ ತಂಡದಲ್ಲಿ ತ್ರಿವಿಕ್ರಮ್, ಶಿಶಿರ್, ಗೋಲ್ಡ್ ಸುರೇಶ್, ಧರ್ಮಾ, ಮೋಕ್ಷಿತಾ ಹಾಗೂ ಐಶ್ವರ್ಯಾ ಇದ್ದಾರೆ. ಅತ್ತ ಶೋಭಾ ಟೀಮ್​ನಲ್ಲಿ ಮಂಜು, ಹನುಮಂತ, ಧನರಾಜ್, ರಜತ್, ಗೌತಮಿ ಹಾಗೂ ಚೈತ್ರಾ ಕುಂದಾಪುರ ಇದ್ದಾರೆ. ಗೇಮ್ ವೇಳೆ ಪಡೆದ ಪಾಯಿಂಟ್ಸ್ ಅನ್ನು ಕಾಪಾಡಿಕೊಳ್ಳಬೇಕು. ಅತಿ ಹೆಚ್ಚು ಪಾಯಿಂಟ್ಸ್ ಪಡೆದ ಸ್ಪರ್ಧಿಗಳು ಕ್ಯಾಪ್ಟನ್ಸಿ ಟಾಸ್ಕ್​ಗೆ ಅರ್ಹತೆ ಪಡೆಯುತ್ತಾರೆ.

ಇದಕ್ಕಾಗಿ ಎಲ್ಲ ಸ್ಪರ್ಧಿಗಳು ಕತ್ತಿನಲ್ಲಿ ಹಾಕಿಕೊಂಡು ಕಾಪಾಡಿಕೊಳ್ಳುತ್ತಿದ್ದಾರೆ. ಇದನ್ನು ಎದುರಾಳಿ ತಂಡ ಕಳ್ಳತನ ಮಾಡಬಹುದು ಎಂಬ ನಿಯಮ ಕೂಡ ಇದೆ. ಈ ವಿಚಾರದಲ್ಲಿ ಚೈತ್ರಾ ಕುಂದಾಪುರ ಚಾಲಾಕಿತನ ಮೆರೆದಿದ್ದಾರೆ. ಟಾಸ್ಕ್ ಬಳಿಕ ಎಲ್ಲರೂ ಕುಳಿತು ಸಹಜವಾಗಿ ಮಾತಾಡ್ತಿದ್ದ ವೇಳೆ ಚೈತ್ರಾ ಪಕ್ಕದಲ್ಲೇ ಕುಳಿತಿದ್ದ ಐಶ್ವರ್ಯಾ ಅವರ ಪರ್ಸ್​ಗೆ ಮೆಲ್ಲನೇ ಕೈ ಹಾಕಿ ಪಾಯಿಂಟ್ಸ್ ಕದ್ದು ಪರಾರಿ ಆಗಿದ್ದಾರೆ. ಪಕ್ಕದಲ್ಲೇ ಇದ್ದ ಮಂಜು ತನ್ನದೇ ಟೀಮ್​ನ ಚೈತ್ರಾಗೆ ಓಡಿ ಹೋಗು ಎಂದು ಹೇಳಿಕೊಟ್ಟಿದ್ದಾರೆ.

ಪಾಯಿಂಟ್ಸ್ ಕದ್ದ ಚೈತ್ರಾ ಕುಂದಾಪುರ ಓಡಿ ಹೋಗಿ ಬಾತ್ ರೂಮ್ ಬಾಗಿಲು ಹಾಕಿಕೊಂಡರು. ಮಂಜು ಕೂಡ ಚೈತ್ರಾ ಜೊತೆ ಓಡಿ ಹೋಗಿ ಬಾತ್ ರೂಮ್ ನಲ್ಲಿ ಕುಳಿತರು. ಇದರ ನಡುವೆ ಚೈತ್ರಾ ಅವರು ಐಶ್ವರ್ಯಾ ಬಳಿ ಪಾಯಿಂಟ್ಸ್ ಕಿತ್ತುಕೊಂಡರು ಎಂಬ ಮಾತು ಬಂತು. ಇದಕ್ಕೆ ಗೌತಮಿ ಹಾಗೂ ಹನುಮಂತು ಅವರು, ಐಶ್ವರ್ಯಾಗೆ ತಿಳಿಯದಂತೆ ಪಾಯಿಂಟ್ಸ್ ಎತ್ತುಕೊಂಡಿದ್ದಾರಷ್ಟೆ ಎಂದು ಸಮರ್ಥನೆ ನೀಡಿದ್ದಾರೆ.

BBK 11: ಬಿಗ್ ಬಾಸ್ ಮನೆಯಲ್ಲಿ ಸದ್ದು ಮಾಡಿದ ಶೋಭಾ ಶೆಟ್ಟಿ ಬಾಯ್ ಫ್ರೆಂಡ್ ವಿಚಾರ: ಯಾರು?