Sunday, 15th December 2024

BBK 11: ಬಿಗ್ ಬಾಸ್ ಮನೆಯೊಳಗೆ ಶುರುವಾಯಿತು ಜೈಲು ಶಿಕ್ಷೆ: ಮೊದಲು ಹೋಗಿದ್ದು ಯಾರು ನೋಡಿ

Chaithra Kundapura in Jail

ಬಿಗ್ ಬಾಸ್ ಕನ್ನಡ ಸೀಸನ್ 11 (Bigg Boss Kannada 11) ರೋಚಕ ತಿರುವು ಪಡೆದುಕೊಂಡಿದೆ. ಮನೆಯಿಂದ ಜಗದೀಶ್ ಹಾಗೂ ರಂಜಿತ್ ಅವರನ್ನು ಹೊರ ಹಾಕಲಾಗಿದೆ. ಇದಾದ ಬಳಿಕ ಮನೆಮಂದಿಗೆ ಬಿಗ್ ಬಾಸ್ ಅಪ್ರಾಮಾಣಿಕ-ಕುತಂತ್ರಿ ಯಾರು ಎಂಬುದನ್ನು ತಿಳುಸಲು ಚಟುವಟಿಕೆ ನೀಡಿದ್ದಾರೆ. ಇದರಲ್ಲಿ ಅತಿ ಹೆಚ್ಚು ಮತ ಪಡೆದವರನ್ನು ಜೈಲಿಗೆ ಹಾಕಲಾಗಿದೆ. ಈ ಮೂಲಕ ಬಿಬಿಕೆ 11 ರಲ್ಲಿ ಜೈಲು ಕಾನ್ಸೆಪ್ಟ್ ಶುರುವಾಗಿದೆ. ಮೊದಲ ಎರಡು ವಾರಗಳಲ್ಲಿ ಜೈಲಿಗೆ ಹೋಗುವ ಆಯ್ಕೆ ಇರಲಿಲ್ಲ.

ಕನ್ನಡದ ಬಿಗ್ ಬಾಸ್ ಸೀಸನ್ 11ರಲ್ಲಿ ಮೊದಲ ಸ್ಪರ್ಧಿಯಾಗಿ ಚೈತ್ರಾ ಕುಂದಾಪುರ ಸೆರೆಮನೆಗೆ ತೆರಳಿದ್ದಾರೆ. ಮೂರನೇ ವಾರದಲ್ಲಿ ಮನೆಯಲ್ಲಿದ್ದ 14 ಸ್ಪರ್ಧಿಗಳಿಗೆ ಬಿಗ್​ಬಾಸ್​ ಟಾಸ್ಕ್​ವೊಂದನ್ನು ನೀಡಿದ್ದರು. ಬಿಗ್​ಬಾಸ್​ ಮನೆಯಲ್ಲಿ ಅಪ್ರಾಮಾಣಿಕ ಯಾರು ಹಾಗೂ ಕುತಂತ್ರಿ ಯಾರು ಅಂತ ಹೇಳಿ ಎಂದಿದ್ದರು.

ಬಿಗ್​ಬಾಸ್​ ಮನೆಯಲ್ಲಿರೋ ಸ್ಪರ್ಧಿಗಳು ಅತಿ ಹೆಚ್ಚಾಗಿ ಹಣೆ ಪಟ್ಟಿಯನ್ನು ಚೈತ್ರಾ ಕುಂದಾಪುರ ಅವರಿಗೆ ಕೊಟ್ಟಿದ್ದಾರೆ. ಹೀಗಾಗಿ ಪ್ರಕ್ರಿಯೆಯ ಅನುಸಾರ ಚೈತ್ರಾ ಬಿಗ್​ಬಾಸ್​ ಜೈಲಿಗೆ ಹೋಗಿದ್ದಾರೆ. ಬಿಗ್​ಬಾಸ್​ ಅವರ ಮುಂದಿನ ಆದೇಶದವರೆಗೂ ಚೈತ್ರಾ ಜೈಲಿನಲ್ಲೇ ಇರಬೇಕಾಗುತ್ತದೆ.

ರಂಜಿತ್-ಜಗದೀಶ್ ಔಟ್:

ಬಿಗ್ ಬಾಸ್ ಕನ್ನಡ ಸೀಸನ್ 11 ಶುರುವಾದ ಮೊದಲ ಎರಡು ವಾರ ಹೆಚ್ಚು ಜಗಳಗಳಿಂದಲೇ ಸುದ್ದಿಯಲ್ಲಿತ್ತು. ಆದರೆ, ಮೂರನೇ ವಾರಕ್ಕೆ ಇದು ವಿಕೋಪಕ್ಕೆ ತಿರುಗಿ ಶೋನಲ್ಲಿ ಇದೀಗ ಮ್ಯಾನ್ ಹ್ಯಾಂಡ್ಲಿಂಗ್ ನಡೆದು ಇಬ್ಬರು ಸ್ಪರ್ಧಿಗಳು ಮನೆಯಿಂದ ಔಟ್ ಆಗಿದ್ದಾರೆ. ಜಗದೀಶ್ ಮತ್ತು ರಂಜಿತ್ ನಡುವೆ ಚಿಕ್ಕ ಮಟ್ಟದ ಕ್ಲ್ಯಾಶ್ ಆಗಿದೆ. ಇವರಿಬ್ಬರನ್ನೂ ಬಿಗ್ ಬಾಸ್ ಮನೆಯಿಂದ ಹೊರಹಾಕಲಾಗಿದೆ.

ಮಾನಸಾ ಜೊತೆ ಜಗಳಕ್ಕಿಳಿದಾಗ ಜಗದೀಶ್ ಅವರನ್ನು ರಂಜಿತ್ ತಳ್ಳಿದ್ದಾರೆ. ಈ ಸಂದರ್ಭ ಮಧ್ಯ ಪ್ರವೇಶಿಸಿದ ಬಿಗ್ ಬಾಸ್ ಎಲ್ಲ ಸರ್ಧಿಗಳನ್ನು ಕೂರಲು ಹೇಳಿ ಸಮಾಧಾನ ಪಡಿಸಲು ಯತ್ನಿಸಿದರು. ಆದರೂ ರಂಜಿತ್-ಜಗದೀಶ್ ಕೆಟ್ಟ ಮಾತುಗಳಲ್ಲಿ ಬೈದುಕೊಂಡಿದ್ದಾರೆ. ಬಳಿಕ ಬಿಗ್ ಬಾಸ್ ಜಗದೀಶ್ ಮತ್ತು ರಂಜಿತ್‌ ಅವರನ್ನು ಮುಖ್ಯದ್ವಾರದಿಂದ ಆಚೆ ಬನ್ನಿ ಎಂದು ಆದೇಶ ನೀಡಿದ್ದಾರೆ. ರಂಜಿತ್‌ ಎಲಿಮಿನೇಟ್ ಆಗುತ್ತಿರುವ ವಿಚಾರ ಇತರೆ ಸ್ಪರ್ಧಿಗಳಿಗೆ ದುಃಖ ತಂದಿದೆ.

BBK 11: ಜಗದೀಶ್ ಸುದ್ದಿಗೋಷ್ಠಿ: ಮನೆಯೊಳಗಡೆ ಹೇಳಿದಂತೆ ಬಿಗ್ ಬಾಸ್ ಪ್ರೊಗ್ರಾಂ ಹಾಳು ಮಾಡ್ತಾರಾ?