Sunday, 15th December 2024

ಪವನ ಕಲ್ಯಾಣ್ ಗೆ ಕರೋನಾ ಪಾಸಿಟಿವ್, ಹೋಂ ಕ್ವಾರಂಟೈನ್ ಆದ ನಟ

ಹೈದರಾಬಾದ್ : ವಕೀಲ್ ಸಾಬ್ ಸಿನಿಮಾದಲ್ಲಿ ಕೊನೆಯ ಬಾರಿಗೆ ಕಾಣಿಸಿಕೊಂಡಿದ್ದ ಪವರ್ ಸ್ಟಾರ್ ಪವನ ಕಲ್ಯಾಣ್ ಗೆ ಈಗ ಕರೋನಾ ಪಾಸಿಟಿವ್ ಎಂಬುದಾಗಿ ದೃಢಪಟ್ಟಿದೆ. ಹೀಗಾಗಿ ಹೋಂ ಕ್ವಾರಂಟೈನ್ ಆಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಪವರ್ ಸ್ಟಾರ್ ಪವನ್ ಕಲ್ಯಾಣ್ ಆಪ್ತ ಸಹಾಯಕರಿಗೆ ಕರೋನಾ ಪಾಸಿಟಿವ್ ಎಂಬುದಾಗಿ ದೃಢಪಟ್ಟಿದ್ದರಿಂದ, ಅವರು ಐಸೋ ಲೇಷನ್ ನಲ್ಲಿದ್ದರು. ನಟ ಪವಾನ್ ಕಲ್ಯಾಣ್ ಅವರು ಕರೋನಾ ಸೋಂಕು ಪತ್ತೆ ಪರೀಕ್ಷೆಗೂ ಒಳಗಾಗಿದ್ದರು.

ಅವರ ಕರೋನಾ ರಿಪೋರ್ಟ್ ಬಂದಿದ್ದು, ಕರೋನಾ ಪಾಸಿಟಿವ್ ಎಂಬುದಾಗಿ ದೃಢಪಟ್ಟಿದೆ. ಹೀಗಾಗಿ ಮುಂಜಾಗ್ರತಾ ಕ್ರಮವಾಗಿ ಹೋಂ ಕ್ವಾರಂಟೈನ್ ಆಗಿದ್ದು, ಮನೆಯಲ್ಲೇ ವೈದ್ಯರ ಸಲಹೆ ಮೇರೆಗೆ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರ ಆರೋಗ್ಯದಲ್ಲಿ ಸ್ಥಿರ ವಾಗಿರುವುದಾಗಿ ತಿಳಿದು ಬಂದಿದೆ.