ಬೆಂಗಳೂರು: ಸ್ಯಾಂಡಲ್‌ವುಡ್ ನಟ ಪ್ರಜ್ವಲ್ ದೇವರಾಜ್ ಹಾಗೂ ಅವರ ಪತ್ನಿ ರಾಗಿಣಿಗೆ ಕೊರೊನಾ ಸೋಂಕು ದೃಢವಾಗಿದೆ.
ತಮಗೆ ಹಾಗೂ ಪತ್ನಿಗೆ ಕೋವಿಡ್-19 ಪಾಸಿಟಿವ್ ದೃಢಪಟ್ಟಿರುವುದನ್ನು ಪ್ರಜ್ವಲ್ ದೇವರಾಜ್ ಟ್ವಿಟ್ಟರ್ ಮೂಲಕ ಹೇಳಿಕೊಂಡಿ ದ್ದಾರೆ. ರಾಗಿಣಿ ಮತ್ತು ನನಗೆ ಕೋವಿಡ್-19 ಪಾಸಿಟಿವ್ ದೃಢಪಟ್ಟಿದೆ. ಅಗತ್ಯ ಔಷಧಿ ಹಾಗೂ ವಿಶ್ರಾಂತಿಯನ್ನು ನಾವು ಪಡೆಯು ತ್ತಿದ್ದೇವೆ. ನಾವಿಬ್ಬರೂ ಇದರಿಂದ ಹೊರಗೆ ಬರುತ್ತೇವೆ.
ನಿಮ್ಮ ರಕ್ಷಣೆಯನ್ನು ನೀವು ಬಿಡಬೇಡಿ. ನಿಮ್ಮ ಪ್ರೀತಿ ಹಾಗೂ ಕಾಳಜಿಗೆ ಧನ್ಯವಾದಗಳು ‘ ಎಂದು ನಟ ಪ್ರಜ್ವಲ್ ದೇವರಾಜ್ ಟ್ವೀಟ್ ಮಾಡಿದ್ದಾರೆ.