Sunday, 15th December 2024

ಲಲಿತ್‌ ಮೋದಿ- ನಟಿ ಸುಷ್ಮಿತಾ ಸೇನ್ ಡೇಟಿಂಗ್‌..

ನವದೆಹಲಿ: ಐಪಿಎಲ್ ಮಾಜಿ ಅಧ್ಯಕ್ಷ ಲಲಿತ್ ಮೋದಿ ಟ್ವೀಟ್ ಮಾಡುವ ಮೂಲಕ ವಿಶ್ವಸುಂದರಿ ಸುಶ್ಮಿತಾ ಸೇನ್ ಜತೆಗೆ ಹೊಸ ಪ್ರೇಮ ಪ್ರಯಾಣ ಆರಂಭಿಸುವ ಸೂಚನೆ ನೀಡಿದ್ದಾರೆ.

ನಾವೀಗ ಪ್ರವಾಸ ಮುಗಿಸಿ ಈಗಷ್ಟೇ ಲಂಡನ್ ಗೆ ಮರಳಿದ್ದೇವೆ ಎಂದು ಟ್ವೀಟ್ ಮಾಡುವ ಮೂಲಕ ಅಭಿಮಾನಿಗಳಲ್ಲಿ ತೀವ್ರ ಕುತೂಹಲ ಮೂಡಿಸಿದ್ದಾರೆ.

ನಾವು ಈಗ ಜೊತೆಗೆ ಓಡಾಡುತ್ತಿದ್ದೇವೆ ಅಷ್ಟೆ. ನಾವಿನ್ನು ಮದುವೆ ಆಗಿಲ್ಲ. ಇದು ಕೂಡ ಒಂದು ದಿನ ಆಗಬಹುದು ಎಂದು ಲಲಿತ್ ಮೋದಿ ವಿವರಿಸಿದ್ದಾರೆ.