Thursday, 3rd October 2024

Deepika Padukone: ಸಿದ್ಧಿ ವಿನಾಯಕನ ದರ್ಶನ ಪಡೆದ ತುಂಬು ಗರ್ಭಿಣಿ ದೀಪಿಕಾ; ರಣವೀರ್‌ ಸಿಂಗ್‌ ಸಾಥ್‌

Deepika Padukone

ಮುಂಬೈ: ದೇಶದೆಲ್ಲೆಡೆ ಸಂಭ್ರಮದಿಂದ ಗಣೇಶ ಚತುರ್ಥಿ (Ganesh Chaturthi) ಆಚರಿಸಲಾಗುತ್ತಿದೆ. ಕೆಲವರು ತಮ್ಮ ಮನೆಯಲ್ಲಿ ಗಣಪತಿಯನ್ನು ಕೂರಿಸಿ ಪೂಜಿಸಿದರೆ, ಇನ್ನು ಕೆಲವರು ಗಣಪತಿ ದೇವಸ್ಥಾನಗಳಿಗೆ ತೆರಳಿ ದೇವರ ಆಶೀರ್ವಾದ ಪಡೆದುಕೊಳ್ಳುತ್ತಿದ್ದಾರೆ. ಅದರಂತೆ ಶುಕ್ರವಾರ ಬಾಲಿವುಡ್‌ನ ಸ್ಟಾರ್‌ ಜೋಡಿ ರಣವೀರ್‌ ಸಿಂಗ್‌ (Ranveer Singh) ಮತ್ತು ದೀಪಿಕಾ ಪಡುಕೋಣೆ (Deepika Padukone) ದಂಪತಿ ಮುಂಬೈಯ ಸಿದ್ಧಿ ವಿನಾಯಕ ದೇವಸ್ಥಾನ (Siddhivinayak Temple)ಕ್ಕೆ ಭೇಟಿ ನೀಡಿದ್ದಾರೆ. ದೀಪಿಕಾ-ರಣವೀರ್‌ ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ.

ತುಂಬು ಗರ್ಭಿಣಿ ದೀಪಿಕಾ ಪತಿ ರಣವೀರ್‌ನ ಕೈ ಹಿಡಿದು ದೇವಸ್ಥಾನಕ್ಕೆ ಆಗಮಿಸಿದ್ದಾರೆ. ಈ ವೇಳೆ ದಂಪತಿ ಸಾಂಪ್ರದಾಯಿಕ ಉಡುಗೆಯಲ್ಲಿ ಕಾಣಿಸಿಕೊಂಡಿದ್ದು ನೆಟ್ಟಿಗರ ಗಮನ ಸೆಳೆದಿದ್ದಾರೆ. ದೀಪಿಕಾ ಹಸಿರು ಬಣ್ಣದ ರೇಷ್ಮೆ ಸೀರೆ ಉಟ್ಟಿದ್ದರೆ, ರಣವೀರ್‌ ತಿಳಿ ಹಳದಿ ಬಣ್ಣದ ಕುರ್ತಾ ಮತ್ತು ಪೈಜಾಮ್‌ ಧರಿಸಿದ್ದರು. ಸಿದ್ಧಿ ವಿನಾಯಕ ದೇಗುಲ ದೀಪಿಕಾ ಪಡುಕೋಣೆಯ ನೆಚ್ಚಿನ ಧಾರ್ಮಿಕ ಸ್ಥಳವಾಗಿದ್ದು, ಆಗಾಗ ಭೇಟಿ ನೀಡುತ್ತಿರುತ್ತಾರೆ. ಸೆಪ್ಟೆಂಬರ್‌ 28ರಂದು ದೀಪಿಕಾ ಪಡುಕೋಣೆಗೆ ಹೆರಿಗೆಯಾಗುವ ಸಾಧ್ಯತೆ ಇದೆ ಎಂದು ವೈದ್ಯರು ತಿಳಿಸಿದ್ದಾರೆ.

ಫೋಟೊ ಶೂಟ್‌ ಮೂಲಕ ಮಿಂಚಿದ ದೀಪ್‌-ವೀರ್‌

ಗರ್ಭಿಣಿ ದೀಪಿಕಾ ಇತ್ತೀಚೆಗೆ ಪತಿ ರಣವೀರ್‌ ಜೊತೆಗೆ ಭರ್ಜರಿ ಫೋಟೊ ಶೂಟ್‌ ಮೂಲಕ ಮಿಂಚಿದ್ದರು. 6 ವರ್ಷಗಳಿಗೂ ಹೆಚ್ಚು ಕಾಲ ಡೇಟಿಂಗ್ ಮಾಡಿದ್ದ ಈ ಜೋಡಿ ನವೆಂಬರ್ 2018ರಲ್ಲಿ ಮದುವೆಯಾಗಿದ್ದರು. ಮದುವೆಯಾಗಿ 6 ವರ್ಷ ಕಳೆದ ಬಳಿಕ ಈ ಸ್ಟಾರ್ ಜೋಡಿಯ ಮನೆಯಲ್ಲಿ ಪುಟ್ಟ ಕಂದನ ಹೆಜ್ಜೆಗಳು ಮೂಡಲಿದೆ. ನಟಿ ದೀಪಿಕಾ ಬೇಬಿ ಬಂಪ್​ ಫೋಟೋಶೂಟ್ ಬ್ಲ್ಯಾಕ್ ಥೀಮ್​ನಲ್ಲಿ ಮೂಡಿ ಬಂದಿತ್ತು. ಬ್ಲ್ಯಾಕ್ ಡ್ರೆಸ್​ ತೊಟ್ಟ ದೀಪಿಕಾ ಪಡುಕೋಣೆ ಬೇಬಿ ಬಂಪ್ ತೋರಿಸುತ್ತಾ ಫೋಟೋಗೆ ಪೋಸ್​ ಕೊಟ್ಟಿದ್ದರು. ಮಾತ್ರವಲ್ಲ ರಣವೀರ್​ ಸಿಂಗ್ ಜೊತೆಗೂ ಪೋಸ್​ ನೀಡಿದ್ದರು. ಪ್ರೆಗ್ನೆನ್ಸಿಯ ಈ ಅಪೂರ್ವ ಫೋಟೋಗಳನ್ನು ದೀಪಿಕಾ ಪಡುಕೋಣೆ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದರು. ನಟಿ ಫೋಟೋಗಳಿಗೆ ಲೈಕ್ಸ್​ ಜೊತೆಗೆ ನಾನಾ ಕಮೆಂಟ್‌ಗಳು ಕೂಡ ಹರಿದು ಬರುತ್ತಿವೆ.

ದೀಪಿಕಾ ಪಡುಕೋಣೆ ಹಾಗೂ ರಣವೀರ್ ಸಿಂಗ್ ತಮ್ಮ ಮಗುವಿಗಾಗಿ ಭಾರೀ ಕುತೂಹಲದಿಂದ ಕಾಯುತ್ತಿದ್ದಾರೆ. ಪಂಡಿತ್ ಜಗನ್ನಾಥ್ ಗುರೂಜಿ ಎಂಬ ಜ್ಯೋತಿಷಿ, ದೀಪಿಕಾಗೆ ಗಂಡು ಮಗುವಾಗಲಿದೆ ಎಂದು ಭವಿಷ್ಯ ನುಡಿದಿದ್ದಾರೆ. ಈ ಹಿಂದೆ, 2024ರಲ್ಲಿ ದೀಪಿಕಾ ಗರ್ಭಿಣಿಯಾಗಲಿದ್ದಾರೆ ಎಂದು ಕೂಡ ಅವರು ಭವಿಷ್ಯ ನುಡಿದಿದ್ದರು. ಈ ಮಗು ತನ್ನ ಹೆತ್ತವರಿಗೆ ರಾಜಕುಮಾರನಾಗ್ತಾನೆ. ಆ ಮಗು ತನ್ನ ತಂದೆ ತಾಯಿ ಇಬ್ಬರಿಗೂ ಅದೃಷ್ಟವನ್ನು ತರಲಿದ್ದಾನೆ. ಆ ಮಗು ರಣಬೀರ್-ದೀಪಿಕಾ ಪಾಲಿಗೆ ಅದೃಷ್ಟದ ಮಗುವಾಗಲಿದೆ ಎಂದು ಜ್ಯೋತಿಷಿ ಹೇಳಿದ್ದಾರೆ.

ಈ ಸುದ್ದಿಯನ್ನೂ ಓದಿ: Deepika Padukone: ಕಪ್ಪು ಬಿಳುಪು ಫೋಟೋಗಳಲ್ಲಿ ಫಳಫಳ ಮಿಂಚಿದ ದೀಪಿಕಾ ಪಡುಕೋಣೆ ಬೇಬಿ ಬಂಪ್!‌

ಸದ್ಯ ದೀಪಿಕಾ ಪಡುಕೋಣೆ ಕೆಲಸದಿಂದ ಬ್ರೇಕ್ ತೆಗೆದುಕೊಂಡಿದ್ದಾರೆ. ಇತ್ತೀಚೆಗೆ ತೆರೆಕಂಡ ದೀಪಿಕಾ ಪಡುಕೋಣೆ ಅಭಿನಯದ ʼಕಲ್ಕಿ 2898 ಎಡಿʼ ಚಿತ್ರ ಬಾಕ್ಸ್‌ ಆಫೀಸ್‌ನಲ್ಲಿ ಕಮಾಲ್‌ ಮಾಡಿದ್ದು, 1,000 ಕೋಟಿ ರೂ.ಗೂ ಅಧಿಕ ಕಲೆಕ್ಷನ್‌ ಮಾಡಿದೆ. ಅಮಿತಾಭ್‌ ಬಚ್ಚನ್‌, ಪ್ರಭಾಸ್‌ ಮತ್ತಿತರರು ನಟಿಸಿರುವ ಈ ಚಿತ್ರವನ್ನು ನಾಗ್‌ ಅಶ್ವಿನ್‌ ನಿರ್ದೇಶಿಸಿದ್ದಾರೆ.